ಶರಣ್ ಹಾಗೂ ಆಶಿಕಾ ರಂಗನಾಥ್ ಅಭಿನಯದ ‘ರಾರಯಂಬೋ 2’ ಚಿತ್ರ ಬಂದು ಹೋಗಿ ಇಲ್ಲಿಗೆ ಸುಮಾರು ಎರಡು ವರ್ಷ. ಆದರೂ ಸ್ಯಾಂಡಲ್‌ವುಡ್‌ನಲ್ಲಿ ಅದರ ಹವಾ ನಿಂತಿಲ್ಲ. ಯೂ ಟ್ಯೂಬ್ ಚಾನೆಲ್‌ನಲ್ಲಿ ಈ ಚಿತ್ರದ ‘ಚುಟು ಚುಟು’ಹಾಡಿನ ವೀಕ್ಷಕರ ಸಂಖ್ಯೆ 100 ಮಿಲಿಯನ್ ದಾಟಿದೆ. ಕನ್ನಡಕ್ಕೆ ಇದು ದಾಖಲೆ. ಹಾಗೆಯೇ ಭಾರತದಾಚೆಯೂ ವಿಶ್ವ ದಾಖಲೆ. ಅದೇ ಖುಷಿಯಲ್ಲೀಗ ‘ರಾರಯಂಬೋ 2’ ಚಿತ್ರತಂಡ ಹಾಗೂ ಆನಂದ್ ಆಡಿಯೋ ಸಂಸ್ಥೆ ಒಟ್ಟಾಗಿ ಇತ್ತೀಚೆಗೆ ವಿಶ್ವ ದಾಖಲೆ ಸಂಭ್ರಮ ಆಚರಿಸಿದವು.
ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ‘ಆನಂದ್ ಆಡಿಯೋ’ ಸಂಸ್ಥೆ ಶುರುವಾಗಿ ಇಲ್ಲಿ 20 ವರ್ಷ ಪೂರೈಸಿದ ಖುಷಿಗೆ ‘ಚುಟು ಚುಟು’ ಹಾಡಿನ ವಿಶ್ವ ದಾಖಲೆಯ ಸಂಭ್ರಮವೂ ಸೇರಿಕೊಂಡಿತ್ತು. ಅದೇ ಖುಷಿಯಲ್ಲಿ ಆನಂದ್ ಆಡಿಯೋ ಸಂಸ್ಥೆಯ ಮಾಲೀಕರಾದ ಶ್ಯಾಮ್ ಹಾಗೂ ಆನಂದ್ ಆ ದಿನ ಸಂತೋಷ ಕೂಟ ಏರ್ಪಡಿಸಿ ‘ರಾರಯಂಬೋ’ ಚಿತ್ರ ತಂಡಕ್ಕೆ ನೆನಪಿನ ಕಾಣಿಕೆ ಕೊಟ್ಟರು. ಇದಕ್ಕೆ ‘ರಾರಯಂಬೋ 2’ ಚಿತ್ರ ತಂಡವೂ ಸಾಥ್ ನೀಡಿತು.
ಸಖತ್ತಾಗಿದೆ ಶರಣ್ 'ಅವತಾರ ಪುರುಷ' ಟೀಸರ್
‘ರಾರಯಂಬೋ 2’ ಚಿತ್ರದ ಇಡೀ ತಂಡವೇ ಅಲ್ಲಿತ್ತು. ನಿರ್ಮಾಪಕ ಅಟ್ಲಾಂಟಾ ನಾಗೇಂದ್ರ, ಮತ್ತೋರ್ವ ನಿರ್ಮಾಪಕ ತರುಣ್ ಸುಧೀರ್, ಸಹ ನಿರ್ಮಾಪಕ ಚಿಕ್ಕಣ್ಣ, ನಿರ್ದೇಶಕ ಅನಿಲ್ ಕುಮಾರ್, ನಾಯಕ ನಟ ಶರಣ್, ನಾಯಕಿ ಆಶಿಕಾ ರಂಗನಾಥ್, ಗೀತೆ ರಚನೆಕಾರ ಶಿವು ಬರಗಿ, ಗಾಯಕಿ ಸಮಿತಾ ಮಲ್ನಾಡ್, ಕೋರಿಯೋಗ್ರಾಫರ್ ಭೂಷಣ್, ಸಂಕಲನಕಾರ ಕೆ.ಎಂ.ಪ್ರಕಾಶ್, ಕಲಾ ನಿರ್ದೇಶಕ ಮೋಹನ್ ಬಿ.ಕೆರೆ. ಛಾಯಾಗ್ರಾಹಕ ಸುಧಾಕರ್ ಸೇರಿದಂತೆ ಇಡೀ ತಂಡಕ್ಕೆ ನಟ ಶ್ರೀ ಮುರುಳಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ನಟ ಶರಣ್ ಮಾತನಾಡುತ್ತಾ, ನಾವಿಲ್ಲಿ ನೆಪ ಮಾತ್ರ. ನಿಜವಾದ ದೀಪ ನಾನಲ್ಲ. ಇದರ ಹಿಂದೆ ಇಡೀ ಚಿತ್ರ ತಂಡವೇ ಇದು. ಅದರ ಯಶಸ್ಸು ಅವರಿಗೆ ಸಲ್ಲುತ್ತದೆ’ ಎಂದರು. ಹಾಗೆಯೇ ಎಲ್ಲರೂ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಆರು ಅವತಾರಗಳಲ್ಲಿ ಶರಣ್; ಪಾತ್ರದ ಸೀಕ್ರೆಟ್ ರಿವೀಲ್!
‘ದಾಖಲೆಯ ಕ್ರೆಡಿಟ್ ಮೊಟ್ಟಮೊದಲ ಬಾರಿಗೆ ತಮ್ಮ ಸಂಸ್ಥೆಗೆ ಸಿಕ್ಕಿದ್ದು ಹೆಮ್ಮೆ. ಇದು ರಾರಯಂಬೋ 2 ಚಿತ್ರತಂಡದಿಂದ ಸಾಧ್ಯವಾಗಿದೆ. ಹಾಗೆಯೇ ಕನ್ನಡ ಚಿತ್ರಪ್ರೇಮಿಗಳಿಂದ. ಅವರಿಗೆ ಈ ಯಶಸ್ಸು ಸಲ್ಲುತ್ತದೆ ಎಂದು ಆನಂದ್ ಆಡಿಯೋ ಸಂಸ್ಥೆಯ ಮಾಲೀಕ ಶ್ಯಾಮ್ ತಮ್ಮ ಮನದಾಳದ ಮಾತು ತೆರೆದಿಟ್ಟರು. ಅದೊಂದು ತುಂಬಾ ಆಪ್ತವಾದ ಕಾರ್ಯಕ್ರಮ. ವಿಶ್ವ ದಾಖಲೆಯ ಸಂತೋಷ ಭರಿತ ಮಾತುಗಳು, ನೆನಪಿನ ಕಾಣಿಕೆ, ಚಂದದೊಂದು ಔತಣ ಕೂಟ ಆ ಸಮಾರಂಭದಲ್ಲಿ ಗಮನ ಸೆಳೆದವು. ನಿರ್ಮಾಪಕ ಉಮಾಪತಿ ಅತಿಥಿಯಾಗಿ ಬಂದು ಎಲ್ಲರಿಗೂ ಶುಭ ಹಾರೈಸಿದರು.