ಶಿವರಾತ್ರಿಗೆ ಬೈಕ್‌ ಏರಿ ಬರ್ತಿದ್ದಾನೆ 'ಕೋಟಿಗೊಬ್ಬ'; ಟೀಸರ್‌ ಮಿಸ್‌ ಮಾಡ್ಬೇಡಿ!

Suvarna News   | Asianet News
Published : Feb 17, 2020, 09:30 AM ISTUpdated : Feb 18, 2020, 04:59 PM IST
ಶಿವರಾತ್ರಿಗೆ ಬೈಕ್‌ ಏರಿ ಬರ್ತಿದ್ದಾನೆ 'ಕೋಟಿಗೊಬ್ಬ'; ಟೀಸರ್‌ ಮಿಸ್‌ ಮಾಡ್ಬೇಡಿ!

ಸಾರಾಂಶ

ಶಿವ​ರಾತ್ರಿ ಹಬ್ಬ​ವನ್ನು ಕಿಚ್ಚನ ಅಭಿ​ಮಾ​ನಿ​ಗಳು ಈ ಬಾರಿ ಒಂಚೂರು ಗ್ರ್ಯಾಂಡ್‌ ಆಗಿಯೇ ಆಚ​ರಣೆ ಮಾಡ​ಬ​ಹುದು. ಯಾಕೆಂದರೆ ಹಬ್ಬ​ದಂದೇ ಸುದೀಪ್‌ ಅವರ ‘ಕೋಟಿ​ಗೊಬ್ಬ 3’ ಚಿತ್ರದ ಟೀಸರ್‌ ಬಿಡು​ಗ​ಡೆ​ಯಾ​ಗು​ತ್ತಿದೆ. 

ಶಿವ​ಕಾ​ರ್ತಿಕ್‌ ನಿರ್ದೇ​ಶ​ನದ, ಸೂರಪ್ಪ ಬಾಬು ನಿರ್ಮಾ​ಣದ ಬಹು ನಿರೀ​ಕ್ಷೆಯ ‘ಕೋಟಿ​ಗೊಬ್ಬ 3’ ಚಿತ್ರದ ಬೈಕ್‌ ಟೀಸರ್‌ ಫೆ.21ರಂದು ಮಧ್ಯಾಹ್ನ 12ಗಂಟೆಗೆ ಬಿಡು​ಗಡೆ ಆಗು​ತ್ತಿದೆ. ಬೈಕ್‌ ರೇಸ​ರ್‌​ನಂತೆ ಬೈಕ್‌ ಮೇಲೆ ಕೂತು ಟೀಸ​ರ್‌​ನಲ್ಲಿ ಸುದೀಪ್‌ ಎಂಟ್ರಿ ಆಗು​ವುದು ವಿಶೇಷ ಎನ್ನು​ತ್ತಾರೆ ನಿರ್ದೇ​ಶ​ಕರು.

ಸ್ಟಾರ್ಸ್ ವಾರ್‌ಗೆ ಬಿತ್ತು ಬ್ರೇಕ್, ದಚ್ಚು- ಕಿಚ್ಚಗೆ ಗ್ರೀನ್ ಸಿಗ್ನಲ್ ಕೊಟ್ಟ ಧ್ರುವ

ಚಿತ್ರದಲ್ಲಿ ಸುದೀಪ್‌ ಅವ​ರಿಗೆ ಮಲ​ಯಾಳಿ ಬೆಡಗಿ ಮಡೋನ್ನಾ ಸೆಬಾ​ಸ್ಟಿಯನ್‌ ನಾಯ​ಕಿ​ಯಾಗಿ ನಟಿ​ಸಿ​ದ್ದಾರೆ. ತೆಲು​ಗಿನ ಶ್ರದ್ಧಾ ದಾಸ್‌ ಬಹು ಮುಖ್ಯ​ವಾದ ಪಾತ್ರ ಮಾಡಿ​ದ್ದಾರೆ. ಬೇರೆ ಬೇರೆ ದೇಶ​ಗ​ಳಲ್ಲಿ ಚಿತ್ರೀ​ಕ​ರ​ಣ ಮಾಡಿದ್ದು, ಶೂಟಿಂಗ್‌ ಮುಕ್ತಾ​ಯ​ಗೊಂಡಿದೆ. ಸದ್ಯಕ್ಕೆ ಪೋಸ್ಟ್‌ ಪ್ರೊಡ​ಕ್ಷನ್‌ ಹಂತ​ದ​ಲ್ಲಿ​ರುವ ಈ ಚಿತ್ರದ ಟೀಸರ್‌ ಹೇಗಿ​ರು​ತ್ತದೆ ಎನ್ನುವ ಕುತೂ​ಹ​ಲ​ವಂತೂ ಇದ್ದೇ ಇರು​ತ್ತದೆ.

ಹರೀಶ್‌ ರಾಜ್‌ಗೂ ಸಿಗ್ತು ಕಿಚ್ಚನಿಂದ ದುಬಾರಿ ಗಿಫ್ಟ್?

ಕಿಚ್ಚನ ಅಭಿ​ಮಾ​ನಿ​ಗ​ಳ ಈ ನಿರೀ​ಕ್ಷೆ​ಯನ್ನು ಗಮ​ನ​ದ​ಲ್ಲಿ​ಟ್ಟು​ಕೊಂಡೇ ನಿರ್ದೇ​ಶಕ ಶಿವ​ಕಾ​ರ್ತಿಕ್‌ ಟೀಸರ್‌ ರೂಪಿ​ಸು​ತ್ತಿ​ದ್ದಾ​ರಂತೆ. ಆನಂದ್‌ ಆಡಿಯೋ ಯೂಟ್ಯೂಬ್‌ ಚಾನ​ಲ್‌​ನಲ್ಲಿ ಶಿವ​ರಾ​ತ್ರಿ​ಯಂದು ಟೀಸರ್‌ ಅನಾ​ವ​ರ​ಣ​ಗೊ​ಳ್ಳ​ಲಿದೆ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?