
ಕನ್ನಡ ಚಿತ್ರರಂಗ ಎಂದೂ ಮರೆಯದ 'ಮಾಣಿಕ್ಯ' ನಟ-ನಿರ್ದೇಶಕ ಶಂಕರ್‌ನಾಗ್ (Shankar Nag). ಅವರು ನಮ್ಮನ್ನಗಲಿ ಬರೋಬ್ಬರಿ 35 ವರ್ಷಗಳು ಕಳೆದುಹೋಗಿವೆ. ಆದರೆ, ಎಂದೆಂದೂ ಕನ್ನಡಿಗರು ಅವರನ್ನು, ಅವರ ಸಿನಿಮಾ ಹಾಗೂ ವ್ಯಕ್ತಿತ್ವವನ್ನು ಮರೆಯಲಾಗದು. ಅಂಥ ನಟ ಶಂಕರ್ ನಾಗ್ ಅವರು ನಟಿ ಮಂಜುಳಾ (Manjula) ಅವರನ್ನು ಒಂದು ಮಹಾ ಗಂಡಾಂತರದಿಂದ ಪಾರು ಮಾಡಿದ್ದರು. ಈ ಸಂಗತಿ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಇದೇನು ಹೊಸ ಸಂಗತಿ ಎಂದು ಕಣ್‌ಕಣ್ ಬಿಡ್ತಿದೀರಾ? ನೋಡಿ ಮುಂದೆ..
ಹೌದು, ಅದೊಂದು ಕಲ್ಲು ಕ್ವಾರಿ. ಅಲ್ಲಿ ಗಣಿಗಾರಿಕೆ ಮಾಡಲಾಗುತ್ತಿದೆ. ಅದರಲ್ಲಿ ನಟ ಶಂಕರ್ ನಾಗ್ ಸೇರಿದಂತೆ, ಹಲವು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅಷ್ಟರಲ್ಲಿ ಕೆಲವು ಗಣಿ ಕಾರ್ಮಿಕರು ಕೂಗುತ್ತಾ ದಿಕ್ಕಾಪಾಲಾಗಿ ಓಡುತ್ತಿದ್ದಾರೆ. ಕೆಲವರು ಶಂಕರ್ ನಾಗ್ ಬಳಿಗೆ ಓಡಿ ಬರುತ್ತಿದ್ದಾರೆ. ಅಷ್ಟರಲ್ಲಿ, ಗಣಿಗಾರಿಕಾ ಸ್ಥಳದಲ್ಲಿ ಜೋರಾದ ಸ್ಫೋಟದ ಸದ್ದು ಕೇಳಿಸುತ್ತದೆ. ಆದರೆ, ನಟ ಶಂಕರ್ ನಾಗ್ ಅವರಿಗೆ ಕಿವಿ ಕೇಳಿಸುವುದಿಲ್ಲ. ಕಾರಣ ಅವರೊಬ್ಬ ಮೂಗ (ಮಾತು ಬಾರದವ).
ಕೆಲವು ಕಾರ್ಮಿಕರು ಓಡೋಡಿ ಬಂದು ನಟ ಶಂಕರ್ ನಾಗ್ ಅವರಿಗೆ ಕ್ವಾರಿಯಲ್ಲಿ ಜೆಲೆಟಿನ್ ಸ್ಪೋಟ ಆಗುತ್ತಿರುವುದನ್ನು ತೋರಿಸುತ್ತಾರೆ. ಅದೇ ವೇಳೆ, ನಟಿ ಮಂಜುಳಾ ಆ ಬಗ್ಗೆ ಗೊತ್ತಿಲ್ಲದೇ, ಯಾವುದೋ ಖುಷಿಯ ಮೂಡ್‌ನಲ್ಲಿ ಅದೇ ದಿಕ್ಕಿನಲ್ಲಿ ದೂರದಲ್ಲಿ ಓಡೋಡಿ ಬರುತ್ತಿರುವುದು ನಟ ಶಂಕರ್ ನಾಗ್ ಅವರಿಗೆ ಕಾಣಿಸುತ್ತದೆ. ಅದನ್ನು ನೋಡಿ ಅವರಿಗೆ ತುಂಬಾ ಗಾಬರಿ ಆಗುತ್ತದೆ. ಆದರೆ, ಅವರು ಮೂಗ! ಕೂಗಿ ಹೇಳಲು ಪ್ರಯತ್ನಿಸುತ್ತಾರೆ, ಆದರೆ ಅದು ಸಾಧ್ಯವಾಗುವುದಿಲ್ಲ. ಆದರೆ, ನಟಿ ಮಂಜುಳಾರನ್ನು ರಕ್ಷಿಸದಿರಲು ಹೇಗೆ ಸಾಧ್ಯ? ಅದಕ್ಕಾಗಿ ಅವರು ಬೇರೆಯವರು ತಡೆದರೂ ಮಂಜುಳಾ ಬಳಿ ಓಡಿ ಹೋಗುತ್ತಾರೆ, ಅವರನ್ನು ಅಪಾಯದಿಂದ ಪಾರು ಮಾಡುತ್ತಾರೆ.
ಈ ವಿಯಷ ತಿಳಿದಾಗ ಎಂಥವರಿಗೂ ಕೂಡ ಶಾಕ್ ಆಗುತ್ತದೆ. ನಟಿ ಮಂಜುಳಾ ಅವರು ಮಾತ್ರ ಅಲ್ಲ, ನಟ ಶಂಕರ್ ನಾಗ್ ಸಹ ಇಂದು ನಮ್ಮೊಂದಿಗೆ ಇಲ್ಲ. ಅವರಿಬ್ಬರೂ ಬೇರೆ ಬೇರೆ ರೀತಿಯ ಅಪಘಾತಗಳಲ್ಲಿ ತೀರಿ ಹೋಗಿದ್ದಾರೆ. ಆದರೆ, ಇಲ್ಲಿ ಹೇಳಿರುವುದು ನಿಜವಾದ ದುರಂತ ನಡೆದ ಬಗ್ಗೆ ಅಲ್ಲ. ಬದಲಿಗೆ, ಅದು ನಟ ಶಂಕರ್ ನಾಗ್ ಹಾಗೂ ನಟಿ ಮಂಜುಳಾ ನಟಿಸಿರುವ 'ಮೂಗನ ಸೇಡು' ಚಿತ್ರದ ದೃಶ್ಯ. ಶಂಕರ್ ನಾಗ್-ಮಂಜುಳಾ ನಟನೆಯ 'ಮೂಗನ ಸೇಡು' ಸಿನಿಮಾ 1980ರಲ್ಲಿ ಬಿಡುಗಡೆಯಾಗಿ ಭರ್ಜರಿ ಗಳಿಕೆ ಕಂಡಿತ್ತು.
ಆ ಚಿತ್ರ ಅಂದು ಸೂಪರ್ ಹಿಟ್ ದಾಖಲಿಸಿ ಕನ್ನಡನಾಡಿನ ತುಂಬಾ ಮನೆಮಾತಾಗಿತ್ತು. ಆ ಚಿತ್ರದ ಈ ಸೀನ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಯಾಕೆ ಅಂತ ಕೇಳೋ ಹಾಗಿಲ್ಲ! ಏಕೆಂದರೆ, ಸಾಮಾಜಿಕ ಜಾಲತಾಣ ಇರೋದೇ ಹಾಗೆ! ಅಲ್ಲಿ ಯಾವಾಗ ಏನು ವೈರಲ್ ಆಗುತ್ತೆ ಅಂತ ಯಾರೂ ಊಹಿಸಲಿಕ್ಕೇ ಅಸಾಧ್ಯ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.