ನಾಟಕದ ಗೀಳು ಪ್ರಾಥಮಿಕ ಶಾಲೆಯಲ್ಲಿ ಓದುವಾಗಲೇ ಹತ್ತಿತ್ತು. ನನ್ನ ಅಂಗಡಿಯಲ್ಲಿ ದಿನಕ್ಕೊಬ್ಬ ನಟ ಅಥವಾ ನಟಿಯ ಫೋಟೋವನ್ನು ದೊಡ್ಡದಾಗಿ ಕಾಣುವಂತೆ ಹಾಕುತ್ತಿದ್ದೆ. ಅದನ್ನು ನೋಡಲು ಕಾಲೇಜು ಹುಡುಗರು ಅಂಗಡಿಗೆ ದಿನಾಲೂ ಬರುತ್ತಿದ್ದರು..
ಕನ್ನಡ ಸಿನಿಮಾ ಜಗತ್ತಿನಲ್ಲಿ ನಟ ರಮೇಶ್ ಭಟ್ ಹೆಸರು ಚಿರಪರಿಚಿತ. ಖಾಸಗಿ ಸಂದರ್ಶನವೊಂದರಲ್ಲಿ ನಟ ರಮೇಶ್ ಭಟ್ (Ramesh Bhat)ತಮ್ಮ ಜೀವನದ ಕಥೆಯನ್ನು ಹೇಳಿಕೊಂಡಿದ್ದಾರೆ. 'ನಾನು ಕುಂದಾಪುರದಿಂದ ಚಿಕ್ಕ ವಯಸ್ಸಿನಲ್ಲಿಯೇ ಬೆಂಗಳೂರಿಗೆ ಬಂದೆ. ಗಾಂಧಿ ಬಜಾರ್‌ನಲ್ಲಿ ನಮ್ಮ ಕುಟುಂಬ ಒಂದು ಅಂಗಡಿ ಇಟ್ಟುಕೊಂಡು ಜೀವ ಸಾಗಿಸುತ್ತಿದ್ವಿ. ನಾನು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆದ ಬಳಿಕ ಆರ್ಥಿಕ ಸಂಕಷ್ಟದಿಂದ ಮುಂದಕ್ಕೆ ಓದಲಾಗಲಿಲ್ಲ. ಹೀಗಾಗಿ ಅಂಗಡಿ ನಡೆಸುತ್ತಿದ್ದೆ.
ಆದರೆ ನನಗೆ ನಾಟಕದ ಗೀಳು ಪ್ರಾಥಮಿಕ ಶಾಲೆಯಲ್ಲಿ ಓದುವಾಗಲೇ ಹತ್ತಿತ್ತು. ನನ್ನ ಅಂಗಡಿಯಲ್ಲಿ ದಿನಕ್ಕೊಬ್ಬ ನಟ ಅಥವಾ ನಟಿಯ ಫೋಟೋವನ್ನು ದೊಡ್ಡದಾಗಿ ಕಾಣುವಂತೆ ಹಾಕುತ್ತಿದ್ದೆ. ಅದನ್ನು ನೋಡಲು ಕಾಲೇಜು ಹುಡುಗರು ಅಂಗಡಿಗೆ ದಿನಾಲೂ ಬರುತ್ತಿದ್ದರು. ವ್ಯಾಪಾರದ ಜತೆಗೇ ಆ ಮೂಲಕ ಕೆಲವು ಕಲಾವಿದರು, ಸಾಹಿತಿಗಳ ಪರಿಚಯವಾಯಿತು. ಹಲವು ನಟನಟಿಯರು ಕೂಡ ನನ್ನ ಅಂಗಡಿಗೆ ಬರುತ್ತಿದ್ದರು. ಅವರೆಲ್ಲರ ಪರಿಚಯ ಮಾಡಿಕೊಂಡು ನಾನೂ ಕೂಡ ನಟನಾಗುವ ಕನಸು ಕಾಣುತ್ತಿದ್ದೆ.
1978-79ರಲ್ಲಿ 'ಸಾಂಕೇತ್' ನಾಟಕ ತಂಡ ಕಟ್ಟಿಕೊಂಡು 'ಅಂಜುಮಲ್ಲಿಗೆ' ನಾಟಕದ ಮೂಲಕ ಬಣ್ಣದ ಬದುಕು ಶುರು ಮಾಡಿದೆ. ಬಳಿಕ ನನಗೆ ನಟ-ನಿರ್ದೇಶಕ ಶಂಕರ್‌ನಾಗ್ ಪರಿಚಯವಾಯ್ತು. ಶಂಕರ್‌ನಾಗ್ (Shankar Nag) ನನ್ನನ್ನು ಸಿನಿಮಾದಲ್ಲಿ ನಟನೆ ಮಾಡಲು ಹುರಿದುಂಬಿಸಿದರು. ಆದರೆ ನನಗೆ ಅಂಗಡಿ ಬಿಟ್ಟರೆ ಜೀವನ ನಿರ್ವಹಣೆ ಹೇಗೆ ಎಂಬ ಚಿಂತೆ ಆಯ್ತು. ಅದಕ್ಕೆ ಕೂಡ ಶಂಕರ್‌ನಾಗ್ ಧೈರ್ಯ ತುಂಬಿದರು. 'ನೀನು ಅಂಗಡಿಯಿಂದ ಎಷ್ಟು ಗಳಿಸುತ್ತೀಯೋ ಅಷ್ಟನ್ನು ಸಿನಿಮಾದಲ್ಲೂ ಗಳಿಸಬಹುದು' ಎಂದರು.
ಕನ್ನಡ ಚಿತ್ರರಂಗದಲ್ಲಿ ಯಾರಿಂದಲೂ ಸಾಧ್ಯವಾಗದ ಅಪೂರ್ವ ದಾಖಲೆ ಮಾಡಿದ್ದಾರೆ ಡಾ ವಿಷ್ಣುವರ್ಧನ್!
ಶಂಕರ್‌ನಾಗ್ ಮಾತಿಗೆ ಬೆಲೆ ಕೊಟ್ಟು ಸಿನಿಮಾರಂಗಕ್ಕೆ ಬಂದೆ. ಇಲ್ಲಿ ಬೆಟ್ಟದಷ್ಟು ಸವಾಲುಗಳು ಇದ್ದರೂ ನಟ ಶಂಕರ್‌ನಾಗ್ ಮೂಲಕ ಕೆಲಸ ಕಲಿಯಲು, ನಟಿಸಲು ಯಾವುದೇ ಸಮಸ್ಯೆ ಆಗಲಿಲ್ಲ. ಮಿಂಚಿನ ಓಟ ಸಿನಿಮಾದಲ್ಲಿ ಶಂಕರ್‌ನಾಗ್ ಜತೆ ನಟಿಸಿ ಸೈ ಎನಿಸಿಕೊಂಡೆ. ಬಳಿಕ ಮಾಲ್ಗುಡಿ ಡೇಸ್‌ನಲ್ಲಿ ನಟನೆ ಜತೆ ಸಹ-ನಿರ್ದೇಶಕನಾಗಿಯೂ ಕೆಲಸ ಮಾಡಿದೆ. ಬಳಿಕ ನನಗೆ ಶಂಕರ್‌ನಾಗ್ ಅವರೊಂದಿಗೆ ಗೆಳೆತನ, ಸಲಿಗೆ ಎಲ್ಲವೂ ಗಳಿಸಲು ಸಾಧ್ಯವಾಗಿತ್ತು.
ನಿಧನಕ್ಕೆ ಮೂರು ದಿನ ಮೊದ್ಲು ಮಾಲಾಶ್ರೀಗೆ ಸಿಕ್ಕಿದ್ರಂತೆ ಪುನೀತ್ ; ಎಂಥ ಮಾತು ಹೇಳಿದ್ರು ನೋಡಿ ಅಪ್ಪು!
ಶಂಕರ್‌ನಾಗ್ (Shankarnag) ನಾಯಕತ್ವ ಹಾಗು ನಿರ್ದೇಶನದ 'ನೋಡಿ ಸ್ವಾಮಿ ನಾವಿರೋದೇ ಹೀಗೆ' ಸಿನಿಮಾ ಮಾಡಿ ನಿರ್ಮಾಪಕ ಹೆಸರು ಸಹ ಪಡೆದುಕೊಂಡೆ. ಬಳಿಕ, ಜೀವನ ಚಕ್ರ ಸಿನಿಮಾದಲ್ಲಿ ಶಂಕರ್‌ನಾಗ್ ಜತೆ ಮುಖ್ಯ ಪಾತ್ರದಲ್ಲೂ ಕಾಣಿಸಿಕೊಂಡೆ. ಅಂದಿನ ಕಾಲದ ನಹುತೇಕ ಎಲ್ಲ ನಟನಟಿಯರೊಂದಿಗೆ ಪಾತ್ರ ಮಾಡಿದ್ದೇನೆ. ಶಂಕರ್‌ನಾಗ್ ಅಣ್ಣನವರಾದ ಅನಂತ್‌ನಾಗ್ ಅವರೊಂದಿಗೆ ಕೂಡ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದೇನೆ. ಜೀವನ ನಿರ್ವಹಣೆಗೆ ಏನೇನೋ ಕಸರತ್ತುಗಳನ್ನು ಮಾಡಿದ್ದೇನೆ. ಇಲ್ಲಿಯವರೆಗೆ ಸುಮಾರು 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ.
'ಪ್ರಚಂಡ ರಾವಣ'ನಾದ ಸದಾನಂದ ಸಾಗರ; ಕೊನೆಗಾಲ ಹೇಗಿತ್ತು, ಅದೆಂಥ ವ್ಯಕ್ತಿಯಾಗಿದ್ದರು ವಜ್ರಮುನಿ..!?
ಬ್ರಾಂಡ್ ಡಿಸೈನ್ ಮುದ್ರಣ ಸಂಸ್ಥೆಯನ್ನು ಮಾಡಿಕೊಂಡು ಅದನ್ನೂ ನಡೆಸುತ್ತ ಬಂದಿದ್ದೇನೆ. ಅದನ್ನು ನನ್ನ ಮುಗ ಮುಂದುವರಿಸಿಕೊಂಡು ಹೋಗುತ್ತಿದ್ದಾನೆ. ನಟನೆಗೆ ಅವಕಾಶ ಇಲ್ಲದಿರುವಾಗ ನಾನೂ ಕೂಡ ಈ ಮುದ್ರಣ ಸಂಸ್ಥೆಯ ಕೆಲಸದಲ್ಲಿ ಕೈ ಜೋಡಿಸುತ್ತೇನೆ. ಪತ್ನಿ, ಮಗ, ಇಬ್ಬರು ಮೊಮ್ಮಕ್ಕಳ ಜತೆ ನೆಮ್ಮದಿಯಿಂದ ಕಾಲ ಕಳೆಯುತ್ತಿದ್ದೇನೆ. ಜೀವನದಲ್ಲಿ ನಾನು ಮಾಡಿದ್ದರ ಬಗ್ಗೆ, ಮಾಡದಿದ್ದುದರ ಬಗ್ಗೆ ಯಾವುದಕ್ಕೂ ನನಗೆ ಬೇಸರವಿಲ್ಲ' ಎಂದಿದ್ದಾರೆ ನಟ ರಮೇಶ್ ಭಟ್.
ಮಂಡ್ಯದ ಹೊಟೆಲ್ ಮ್ಯಾನೇಜರ್ ಮದುವೆಯಾದ್ರು ಪಂಡರಿಬಾಯಿ; ಸಾಯವವರೆಗೂ ಕಣ್ಣೀರಿನಲ್ಲೇ ಕೈ ತೊಳೆದ್ರು..!