ಬಹುಶಃ ಯಾವುದೋ ಜಾಹೀರಾತು ಅಥವಾ ಸೀರಿಯಲ್, ಸಿನಿಮಾಗಳ ಫೋಟೋ ಶೂಟ್ ಇರಬಹುದು ಎನ್ನಲಾಗುತ್ತಿದೆ. ಸೆಲೆಬ್ರೆಟಿಗಳಿಗೆ ತಮಾಷೆ ಮಾಡಲು, ಅಭಿಮಾನಿಗಳಿಗೆ ಆಗಾಗ ಅಚ್ಚರಿ ಹುಟ್ಟಿಸಲು ಅದೊಂದು ಫ್ಲಾಟ್‌ಫಾರಂ ಸದಾ ಲಭ್ಯವಿರುತ್ತವೆ..
ನಾಗಿಣಿ ಖ್ಯಾತಿಯ ನಟಿ, ಬಿಗ್ ಬಾಸ್ 9ರ ಸ್ಪರ್ಧಿ ದೀಪಿಕಾ ದಾಸ್ ಮದುವೆಯಾಗಿದ್ದಾರಾ? ಎಂಗೇಜ್ಮೆಂಟ್, ಪ್ರೀವೆಡ್ಡಿಂಗ್ ಫೋಟೋಸ್ ಏನನ್ನೂ ಮಾಡಿಸದೇ ನೇರವಾಗಿ ಹಸೆಮಣೆ ಏರಿದ್ದಾರೆಯೇ ನಟಿ ದೀಪಿಕಾ ದಾಸ್ ಎಂಬ ಪ್ರಶ್ನೆಯನ್ನು ಹಲವರು ಈಗ ಕೇಳತೊಡಗಿದ್ದಾರೆ. ಬಿಗ್ ಬಾಸ್ ಶೋದಲ್ಲಿ ನಟ, ಹಾಗೂ ವಿನ್ನರ್ ಶೈನ್ ಶೆಟ್ಟಿ ಜೊತೆ ಕ್ಲೋಸ್ ಆಗಿದ್ದ ದೀಪಿಕಾ ದಾಸ್, ಬಳಿಕ ತಾಯಿ ವೇದಿಕೆ ಮೇಲೆಯೇ ಹೇಳಿದ್ದ 'ಇದೆಲ್ಲಾ ಇಲ್ಲಿಗೇ ನಿಲ್ಲಲಿ' ಎಂಬ ಮಾತಿಗೆ ಬೆಲೆ ಕೊಟ್ಟರು ಎಂಬಂತೆ ಸುಮ್ಮನಾಗಿದ್ದರು. ಅತ್ತ ಶೈನ್ ಶೆಟ್ಟಿ ಕೂಡ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡರು.
ಈಗ ಇದ್ದಕ್ಕಿದ್ದಂತೆ ಸೋಷಿಯಲ್ ಮೀಡಿಯಾಗಳಲ್ಲಿ ನಟಿ ದೀಪಿಕಾ ದಾಸ್ ಮದುವೆ ಮ್ಯಾಟರ್ ಓಡಾಡುತ್ತಿದೆ, ಸಖತ್ ಸದ್ದು ಮಾಡತೊಡಗಿದೆ. ಇದಕ್ಕೆಲ್ಲಾ ಕಾರಣವಾಗಿದ್ದು, ದೀಪಿಕಾ ದಾಸ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಒಂದು ಫೋಟೋ ಮತ್ತು ಅದಕ್ಕೆ ಅವರು ಕೊಟ್ಟಿರುವ Mr. & Mrs. D ♥️ Welcome to adventures world…' ಎಂಬ ಕ್ಯಾಪ್ಶನ್. ಅದನ್ನು ನೋಡಿದ್ದೇ ತಡ,
ಅವರ ಫ್ಯಾನ್ ಪಾಲೋವರ್ಸ್ ಅವರಿಗೆ ವಿಶ್ ಮಾಡಲೆಂದು ನೋಡಿದರೆ ಕಾಮೆಂಟ್ ಸೆಕ್ಷನ್ ಆಫ್ ಆಗಿದೆ. ಇದೀಗ, ಈ ಮದುವೆ ಸುದ್ದಿ ನಿಜವೇ ಸುಳ್ಳೇ ಎಂದು ಎಲ್ಲರೂ ಮಾತನಾಡಿಕೊಳ್ಳುವಂತಾಗಿದೆ.
ಹದಿಹರೆಯದಲ್ಲಿ ತುಂಬಾ ನೋಡಿದ್ದೆ ಮೇಡಂ; ತುಕಾಲಿ ಸಂತೋಷ್ ಮಾತಿಗೆ ಅನುಶ್ರೀ ಶಾಕ್
ಬಹುಶಃ ಯಾವುದೋ ಜಾಹೀರಾತು ಅಥವಾ ಸೀರಿಯಲ್, ಸಿನಿಮಾಗಳ ಫೋಟೋ ಶೂಟ್ ಇರಬಹುದು ಎನ್ನಲಾಗುತ್ತಿದೆ. ಸೆಲೆಬ್ರೆಟಿಗಳಿಗೆ ತಮಾಷೆ ಮಾಡಲು, ಅಭಿಮಾನಿಗಳಿಗೆ ಆಗಾಗ ಅಚ್ಚರಿ ಹುಟ್ಟಿಸಲು ಅದೊಂದು ಫ್ಲಾಟ್‌ಫಾರಂ ಸದಾ ಲಭ್ಯವಿರುತ್ತವೆ. ಪಕ್ಕಾ ಮದುವೆಯಂತೆ ಗೋಚರಿಸುವ ಎಲ್ಲಾ ಸೆಟಪ್ ಅಲ್ಲಿರುತ್ತವೆ.
ಒಂದೇ ಫ್ರೇಮಲ್ಲಿ 80-90ರ ದಶಕದ ಹೀರೋಯಿನ್ಸ್, ನಿಮ್ಮ ನೆಚ್ಚಿನ ನಟಿ ಯಾರು?
ಒಟ್ಟಿನಲ್ಲಿ, ನಟಿ ದೀಪಿಕಾ ದಾಸ್ ಅವರ ಹಲವು ಬಾಯ್ಸ್ ಫ್ಯಾನ್ಸ್‌ಗೆ ಈ ಮದುವೆ ನ್ಯೂಸ್ ಕೇಳಿ ಹೃದಯ ನಡುಗಿರಬಹುದು. ಮದುವೆ ಆಗ್ಬಿಡ್ತಾ ಎಂದು ಬೇಸರ ಮಾಡಿಕೊಂಡಿರಬಹುದು. ಅದಕ್ಕೆಲ್ಲಾ ಇನ್ನು ಸ್ವತಃ ದೀಪಿಕಾ ದಾಸ್ ಅವರೇ ಉತ್ತರಿಸಬೇಕು. ತಮಾಷೆಯಾಗಿದ್ದರೆ ತಮಾಷೆ ಎಂದು ಅಥವಾ ನಿಜವೇ ಆಗಿದ್ದರೆ ನಿಜ ಎಂದು ತಮ್ಮ ಫ್ಯಾನ್ ಫಾಲೋವರ್ಸ್‌ಗೆ ಅವರೇ ತಿಳಿಸಬೇಕು. ಅಲ್ಲಿಯವರೆಗೂ ಹಲವರಿಗೆ ನಿದ್ದೆಯ ಭಾಗ್ಯ ಇರಲಿಕ್ಕಿಲ್ಲ ಎಂಬುದು ಸುತ್ತಾಡುತ್ತಿರುವ ಲೇಟೇಸ್ಟ್ ಮಾತು. ಸತ್ಯ ದರ್ಶನಕ್ಕೆ ಸ್ವಲ್ಪ ಕಾಲ ದೀಪಿಕಾ ಅಭಿಮಾನಿಗಳು ಕಾಯಲು ಸಿದ್ಧರಿರಬಹುದಲ್ಲ!?
ಬಹಳಷ್ಟು ಸ್ಟಾರ್ ನಟರ ಜೊತೆ ನಟಿಸಿದ್ದ ಮಾಲಾಶ್ರೀ ನಟ ವಿಷ್ಣುವರ್ಧನ್‌ಗೆ ಯಾಕೆ ಜೋಡಿಯಾಗಲಿಲ್ಲ?