ಕಿರಿಕ್ ಪಾರ್ಟಿಲಿ ಬಟ್ಟೆ ಇರ್ಲಿಲ್ಲ ಈಗ ಮನೆ- ಕಾರ್ ಇದೆ, ಬೆಲೆ ನೋಡದೆ ಬಟ್ಟೆ ತಗೋತೀನಿ: ಸಂಯುಕ್ತಾ ಹೆಗ್ಡೆ

Published : Mar 01, 2024, 04:25 PM IST
ಕಿರಿಕ್ ಪಾರ್ಟಿಲಿ ಬಟ್ಟೆ ಇರ್ಲಿಲ್ಲ ಈಗ ಮನೆ- ಕಾರ್ ಇದೆ, ಬೆಲೆ ನೋಡದೆ ಬಟ್ಟೆ ತಗೋತೀನಿ: ಸಂಯುಕ್ತಾ ಹೆಗ್ಡೆ

ಸಾರಾಂಶ

ಕ್ರೀಂ ಸಿನಿಮಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಸಂಯುಕ್ತಾ ಹೆಗ್ಡೆ ಆರಂಭದಲ್ಲಿ ಎಷ್ಟು ಕಷ್ಟ ಪಟ್ಟಿದ್ದಾರೆ ಗೊತ್ತಾ? ಹಳೆ ದಿನಗಳನ್ನು ನೆನಪಿಸಿಕೊಂಡ ನಟಿ....

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 6 ವರ್ಷ ಪೂರೈಸಿ ಕೈ ತುಂಬಾ ಸಿನಿಮಾ ಹಿಡಿದುಕೊಂಡಿರುವ ನಟಿ ಅಂದ್ರೆ ಸಂಯುಕ್ತಾ ಹೆಗ್ಡೆ. ಏನಪ್ಪಾ ಸಿಕ್ಕಾಪಟ್ಟೆ ದುಡ್ಡಿದೆ ಬೋಲ್ಡ್‌ ನಟಿ ಹಾಗೆ ಹೀಗೆ ಎಂದು ಟ್ರೋಲ್ ಮಾಡುವವರಿಗೆ ಉತ್ತರಿಸಿದ್ದಾರೆ. 

'ಈಗ ಸಿನಿಮಾ ಆಫರ್‌ಗಳು ಬರುತ್ತಿದೆ ಹೀಗಾಗಿ ಮೂರು ಸಿನಿಮಾ ಸಹಿ ಮಾಡಿರುವೆ. ಇನ್‌ಸ್ಟಾಗ್ರಾಂನಲ್ಲಿ ನಾನು ಹಾಕುತ್ತಿರುವ ಕಂಟೆಂಟ್‌ ತುಂಬಾ ಚೆನ್ನಾಗಿದೆ ಹೀಗಾಗಿ ನನಗೆ ಚೆನ್ನಾಗಿ ಹಣ ಕೊಡುತ್ತಿದ್ದಾರೆ. ಹಣ ಮಾಡುವುದು ದಾರಿ ಸಾಕಷ್ಟಿದೆ..ದಾರಿ ಕಂಡು ಹಿಡಿದುಕೊಳ್ಳುವ ಟ್ಯಾಲೆಂಟ್ ಇರಬೇಕು. ಇಂಡಸ್ಟ್ರಿ ಮೇಲೆ ಡಿಪೆಂಡ್ ಆಗಲು ಆಗಲ್ಲ. ಎಷ್ಟೋ ಜನ ನಾನು ರಿಚ್ ಕಿಡ್ ಅಂದುಕೊಳ್ಳುತ್ತಾರೆ...ಇದಕ್ಕೆ ಕಾರಣ ನಾನು ಎಲ್ಲೂ ಪೂರ್ ಕಿಡ್ ಅಂತ ತೋರಿಸಿಕೊಂಡಿಲ್ಲ. ನನಗೆ ಯಾರ ಸಿಂಪತಿನೂ ಬೇಡ. ನನ್ನ ಸುತ್ತಲಿರುವ ಜನರಿಗೆ ಮಾತ್ರ ಗೊತ್ತು ನಾನು ಎಷ್ಟು ಕಷ್ಟ ಪಟ್ಟಿದ್ದಿನಿ ಎಂದು. ಒಂದು ದಿನ ನಾನು ಸೂಪರ್ ಸ್ಟಾರ್ ಆಗಿ..ಆ ದಿನ ನನ್ನ ಕಷ್ಟಗಳ ಬಗ್ಗೆ ಮಾತನಾಡುತ್ತೀನಿ. ಅಲ್ಲಿವರೆಗೂ ಯಾರಿಗೂ ಗೊತ್ತಿಲ್ಲ ಅಂದ್ರೆ ಪರ್ವಾಗಿಲ್ಲ ಏಕೆಂದರೆ ನನ್ನ ಕಷ್ಟಗಳನ್ನು ಹೇಳಿಕೊಂಡು ನಾನು ಫೇಮಸ್ ಆಗಲ್ಲ' ಎಂದು ಸಂಯುಕ್ತಾ ಹೆಗ್ಡೆ ಖಾಸಗಿ ಯುಟ್ಯೂಬ್ ಚಾನೆಲ್ ಸಂದರ್ಶನಲ್ಲಿ ಮಾತನಾಡಿದ್ದಾರೆ.

ಆ ಸಿನಿಮಾ ಶೂಟಿಂಗ್‌ ಅಷ್ಟೂ ದಿನ ಅತ್ತುಕೊಂಡೇ ಹೋಗಿದ್ದೆ ಅಷ್ಟು ನೋಯಿಸಿದ್ದಾರೆ: ಸಂಯುಕ್ತ ಹೆಗ್ಡೆ

'ಈಗ ನನ್ನ ಜೀವನ ತುಂಬಾ ಚೆನ್ನಾಗಿದೆ. ನಾನು ಆರಂಭಿಸಿದ ದಿನದಿಂದ ಲೆಕ್ಕ ಮಾಡಿದರೆ ಈಗ ಚೆನ್ನಾಗಿರುವೆ. ಈಗ ಅಪಾರ್ಟ್‌ಮೆಂಟ್ ಖರೀದಿ ಮಾಡಿರುವೆ ಕಾರು ಖರೀದಿಸಿರುವೆ. ಆಗ ನಮ್ಮ ಮನೆಯಲ್ಲಿ ಏನೂ ಇರಲಿಲ್ಲ..ಒಂದು ಚೇತಕ್‌ ಇತ್ತು...ಅದನ್ನು ಮಾರಿದ ಮೇಲೆ ಕ್ಯಾಲಿಬರ್ ಬಂತು. ನಾಲ್ಕು ಜನ ಸಿಂಗಲ್ ಬೆಡ್‌ರೂಮ್‌ ಮನೆಯಲ್ಲಿ ಇದ್ದೀವಿ..ಈಗ ಮೂರು ಬೆಡ್‌ರೂಮ್‌ ಇರುವ ಮನೆಯಲ್ಲಿ ಒಬ್ಬಳೇ ಇದ್ದೀನಿ. ಜೀವನ ತುಂಬಾ ಚೆನ್ನಾಗಿ ಬೆಳೆದಿದೆ' ಎಂದು ಸಂಯುಕ್ತಾ ಹೇಳಿದ್ದಾರೆ. 

ಮಕ್ಕಳು ಕೂಡ ನಮ್ಮಿಬ್ಬರ ಮಧ್ಯೆ ಮಲಗಬಾರದು; ಪತ್ನಿ ಹಠದ ಬಗ್ಗೆ ಪ್ರೇಮ್

'ಕಿರಿಕ್ ಪಾರ್ಟಿ ಸಿನಿಮಾ ಪ್ರಚಾರ ಮಾಡುವ ಸಮಯದಲ್ಲಿ ಹಾಕಿಕೊಳ್ಳಲು ಹೊಸ ಬಟ್ಟೆ ಇರಲಿಲ್ಲ. ಕಾಸ್ಟ್ಯೂಮ್ ಅವರ ಬಳಿ ಸಿನಿಮಾದಲ್ಲಿ ಹಾಕಿರುವ ಬಟ್ಟೆಗಳನ್ನು ತರಸಿಕೊಂಡು ಪ್ರಚಾರ ಮಾಡಿದ್ದೀನಿ. ಇವತ್ತು ಒಂದು ಒಟ್ಟೆ ತೆಗೆದುಕೊಳ್ಳುವಾಗ ಬಲೆ ನೋಡದೇ ಖರೀದಿ ಮಾಡುವ ಶಕ್ತಿ ಬಂದಿದೆ. ಮೊದಲು ಸಣ್ಣದಾಗಿ ಏನೇ ತೆಗೆದುಕೊಳ್ಳಬೇಕು ಅಂದ್ರು 10 ಸಲ ಯೋಚನೆ ಮಾಡಬೇಕಿತ್ತು. ಆದರೆ ಈಗ ಹಾಗೆ ಇಲ್ಲ ಅಂದ್ಮೇಲೆ ನನ್ನ ಜೀವನದಲ್ಲಿ ಏನೋ ಬೆಳವಣಿಗೆ ಆಗಿದೆ' ಎಂದಿದ್ದಾರೆ ಸಂಯುಕ್ತಾ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!