ಅವ್ನೊಬ್ಬ ಕಂತ್ರಿ.. ಕಜ್ಜಿನಾಯಿ, ಶುರುವಾಗಿದ್ದೇ ಅವ್ನಿಂದ; ಆದ್ರೆ ನಟ ದರ್ಶನ್ 'ಇದನ್ನ' ಮಾಡ್ಬೇಕಿತ್ತು: ಅಗ್ನಿ ಶ್ರೀಧರ್

By Shriram Bhat  |  First Published Jun 30, 2024, 12:39 PM IST

ನಿಜ ಹೇಳ್ತಿನಿ, ದರ್ಶನ್ ಜೊತೆ ಇರುವ ಯಾರೊಬ್ಬರೂ ಕೂಡ ಕೊಲೆ, ಹೆದರಿಸೋದ್ರಲ್ಲಿ ಪಳಗಿದವರಲ್ಲ, ಗೊತ್ತಿಲ್ಲದೇ ಮಿತಿ ಮೀರಿ ಹೊಡೆದಿದ್ದಾರೆ. ಆಯಕಟ್ಟಿನ ಜಾಗಕ್ಕೆ ಹೊಡೆತ ಬಿದ್ದಿದೆ. ಮಿತಿ ಮೀರಿದ ಏಟ್‌ ತಿಂದು ಆತ ಪ್ರಾಣ ಬಿಟ್ಟಿದಾನೆ...


ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿರುವ ದರ್ಶನ್, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿದ್ದು ಗೊತ್ತೇ ಇದೆ. ಇದೀಗ ಅಚ್ಚರಿ ಬೆಳವಣಿಗೆ ಎಂಬಂತೆ ಪರಪ್ಪನ ಅಗ್ರಹಾರ ಜೈಲಿನ ಬಳಿ, ದರ್ಶನ್ ಆಪ್ತರು ನಟನನ್ನು ನೋಡಲು ನಿಧಾನವಾಗಿ ಒಬ್ಬೊಬ್ಬರಾಗಿಯೇ ಬರುತ್ತಿದ್ದಾರೆ. ಇಷ್ಟು ದಿನ ಸಾಕಷ್ಟು ಅಂತರ ಕಾಯ್ದುಕೊಂಡು ಮೌನವಾಗಿದ್ದ ಅವರೆಲ್ಲರೂ, ಈಗ ಬರತೊಡಗಿದ್ದಾರೆ. 

ಚಿತ್ರೋದ್ಯಮದ ಗಣ್ಯರು, ನಟನಟಿಯರು, ಪ್ರಮುಖರು ನಿಧಾನವಾಗಿ ನಟ ದರ್ಶನ್ ಸ್ವಭಾವ, ತಮಗೆ ಅವರೊಂದಿಗೆ ಇರುವ ಟು-ಬಾಂಧವ್ಯ ಅದೂ ಇದೂ ಎಂದು ಭಾವನಾತ್ಕವಾಗಿ ಮಾತನಾಡಲಾರಂಭಿಸಿದ್ದಾರೆ. ಕೊಲೆ ಪ್ರಕರಣ ಆಗಿರುವ ಹಿನ್ನೆಲೆ ಕೆಲವು ದಿನಗಳಿಂದ ಅಂತರ ಕಾಯ್ದುಕೊಂಡಿದ್ದ ಆಪ್ತರು, ಈಗ ಬರುತ್ತಿರುವುದು ಹೊಸ ಬೆಳವಣಿಗೆ ಎನ್ನಲೇಬೇಕು. ಸದ್ಯಕ್ಕೆ ನಟ ವಿನೋದ್ ಪ್ರಭಾಕರ್, ನಟಿ ರಕ್ಷಿತಾ ಹಾಗು ಅವರ ಪತಿ ನಿರ್ದೇಶಕ ಪ್ರೇಮ್ ಅವರು ನಟ ದರ್ಶನ್‌ ಅವರನ್ನು ಜೈಲಿನಲ್ಲಿ ಇಲ್ಲಿಯವರೆಗೆ ಭೇಟಿಯಾದವರಲ್ಲಿ ಪ್ರಮುಖರು. ಮುಂದೆ ನಟ ದರ್ಶನ್ ಅವರನ್ನು ಯಾರೆಲ್ಲ ಭೇಟಿಯಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

Tap to resize

Latest Videos

ಅಪಾಯದ ಸೆನ್ಸ್ ಮೊದ್ಲೇ ಆಗಿದೆ, ಆದ್ರೂ ಬೆಂಗಳೂರು ಬಿಟ್ಟು ಹೋಗದೇ ಜೈಲು ಸೇರ್ಕೊಂಡ್ರು ದರ್ಶನ್!

ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿರುವ ದರ್ಶನ್, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ಸದ್ಯಕ್ಕೆ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ, ಒಟ್ಟೂ ಹದಿನೇಳು ಜನರು ಆರೋಪಿಯಾಗಿದ್ದಾರೆ. ಈ ಸಮಯದಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ ಅವರ ಬಗ್ಗೆ ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಅವರು ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ಎದ್ನೋ ಬಿದ್ನೋ ಅಂತ ಈಗ ಜೈಲಿನ ಕಡೆ ಮುಖ ಮಾಡುತ್ತಿದ್ದಾರೆ ಮಾತನ್ನಾಡದ ನಟ ದರ್ಶನ್ ಆಪ್ತರು, ಯಾಕೆ?

ಆ ಹುಡುಗ ಚಿತ್ರದುರ್ಗದ ರೇಣುಕಾಸ್ವಾಮಿ ಮಾಡಿರೋದು ಅಕ್ಷಮ್ಯ ಅಪರಾಧ. ತನಗೆ ಪರಿಚಯವೇ ಇಲ್ಲದಿರುವ, ಯಾವುದೇ ರೀತಿಯಲ್ಲೂ ತನಗೆ ಸಂಬಂಧವೇ ಇಲ್ಲದ ಹೆಣ್ಣುಮಗಳೊಬ್ಬಳಿಗೆ ಅಶ್ಲೀಲ ಮೆಸೇಜ್ ಕಳುಹಿಸುವ ಖಯಾಲಿ ಬೆಳೆಸ್ಕೊಂಡಿದ್ದ ಅವ್ನು. ಆ ಹೆಣ್ಣುಮಗಳು ಬ್ಲಾಕ್ ಮಾಡಿದ್ಮೇಲೂ ಸಹ ಬಿಡದೇ ಬೇರೆ ಮತ್ತೊಂದು ದಾರಿಯಲ್ಲಿ ಬಂದು ಆಕೆಗೆ ಅಶ್ಲೀಲ ಮೆಸೇಜ್ ಮಾಡಿ ಕಾಡತೊಡಗಿದ್ದ. ಅವನ ಪೋಷಕರನ್ನು ನೋಡಿದರೆ ಒಳ್ಳೆಯ ಸಂಸ್ಕಾರವಂತರ ತರ, ಶರಣರ ಥರ ಕಾಣ್ತಾರೆ ಪಾಪ. ಆದ್ರೆ ಅವ್ರಿಗೆ ತಮ್ಮ ಮಗ ಈ ರೀತಿ ಮಾಡ್ತಾ ಇರೋದು ಗೊತ್ತೇ ಇರ್ಲಿಲ್ಲ. 

ಮಡಿಕೇರಿಗೆ ಶಿಫ್ಟ್ ಆದ್ರಾ ವಿಜಯಲಕ್ಷ್ಮಿ, ಮಗ ವಿನೀಶ್‌ ಜೊತೆ ಬೆಂಗಳೂರು ತೊರೆದ್ರಾ ದರ್ಶನ್ ಪತ್ನಿ!

ಆ ಹೆಣ್ಣುಮಗಳು ಮತ್ತೆ ಮತ್ತೆ ರೇಣುಕಾಸ್ವಾಮಿಯಿಂದ ಮೆಸೇಜ್ ಬಂದಾಗ, ಅವರ ಮನೆ ಕೆಲಸದವನಿಗೆ 'ಚಿತ್ರದುರ್ಗದಲ್ಲಿ ಯಾರಿಗಾದ್ರೂ ಹೇಳಿ ಅವ್ನಿಗೆ ಮೆಸೇಜ್ ಮಾಡ್ಬೇಡ ಅಂತ ಹೇಳೋದಕ್ಕೆ ಹೇಳು' ಅಂತ ಹೇಳ್ತಾಳೆ. ಆದ್ರೆ ಆತ, ಸೀದಾ ದರ್ಶನ್‌ಗೇ ಹೇಳಿಬಿಡ್ತಾನೆ. ಅಲ್ಲಿ ಕಂಡ ಅಶ್ಲೀಲ ಫೋಟೋ, ಮೆಸೇಜ್, ವೀಡಿಯೋಸ್‌ನೆಲ್ಲಾ ನೋಡಿ ನಟ ದರ್ಶನ್‌ಗೆ ತಲೆ ಕೆಟ್ಟಿದೆ. ಕರೆಸ್ಕೊಂಡಿದಾನೆ, ಕ್ಷಮೆ ಕೇಳಿಸೋಕೆ, ತಾನೂ ಎರಡು ಕಪಾಳಕ್ಕೆ ಭಾರಿಸೋಕೆ. 

ಸಖತ್ ಕ್ಲಾಸ್ ತಗೊಂಡ್ರು ಅಗ್ನಿ ಶ್ರೀಧರ್, ಏನೋ ಇದೂ, ಬುದ್ದಿವಂತ ಆಗಿದ್ದೂ ಏನು ಮಾತಿದು ಉಪೇಂದ್ರ..?

ನಿಜ ಹೇಳ್ತಿನಿ, ದರ್ಶನ್ ಜೊತೆ ಇರುವ ಯಾರೊಬ್ಬರೂ ಕೂಡ ಕೊಲೆ, ಹೆದರಿಸೋದ್ರಲ್ಲಿ ಪಳಗಿದವರಲ್ಲ, ಗೊತ್ತಿಲ್ಲದೇ ಮಿತಿ ಮೀರಿ ಹೊಡೆದಿದ್ದಾರೆ. ಕಟ್ಟಿನ ಜಾಗಕ್ಕೆ ಹೊಡೆತ ಬಿದ್ದಿದೆ. ಮಿತಿ ಮೀರಿದ ಏಟ್‌ ತಿಂದು ಆತ ಪ್ರಾಣ ಬಿಟ್ಟಿದಾನೆ. ಇದು ನಟ ದರ್ಶನ್ ಲೈಫ್‌ನಲ್ಲಿ ಆಗಬಾರದಿತ್ತು. ಆದರೆ, ಆ ರೇಣುಕಾಸ್ವಾಮಿದು ತಪ್ಪಿದ್ದೂ ಕೂಡ ಆತನನ್ನ ಏಕ್‌ದಂ ಹುತಾತ್ಮ ಮಾಡ್ಬಿಟ್ರು. ಅವ್ನು ಹುತಾತ್ಮ ಅಲ್ಲ, ಕಂತ್ರಿ ಅವ್ನು.

ಗಂಡ-ಹೆಂಡತಿ ಮಧ್ಯೆ 'ಅದು' ಆಗ್ತಿಲ್ಲ ಅಂದ್ರೆ ಒಟ್ಟಿಗೇ ಒಂದೇ ಮನೇಲಿ ಯಾಕೆ ಇರ್ಬೇಕು; ಚಂದನ್ ಶೆಟ್ಟಿ

ಅವ್ನು ಕಂತ್ರಿನೇ, ಕಜ್ಜಿ ನಾಯಿ. ಅವ್ನು ತನ್ನ ತಂದೆ-ತಾಯಿ ಮುಖ ನೋಡ್ಬೇಕಾಗಿತ್ತು, ತನ್ನಗರ್ಭಿಣಿ ಪತ್ನಿ ಮುಖ ನೋಡ್ಬೇಕಾಗಿತ್ತು. ಈಗ ಸಾಕಷ್ಟು ಕಡೆಯಿಂದ ಮಾಹಿತಿ ಬರ್ತಿದೆ, ಆ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಮಾತ್ರ ಅಲ್ಲ, ಇನ್ನೂ ಬಹಳಷ್ಟು ಜನರಿಗೆ ಈ ತರ ಮೆಸೇಜ್ ಕಳಿಸಿದ್ದ ಅಂತ. ಈ ವೀರಶೈವ ಸಮಾಜ ಇವ್ರೆಲ್ಲಾ ಮಾತಾಡ್ತಾ ಇದಾರೆ. ಆದ್ರೆ ಅವ್ರು ಮೊದ್ಲು ಅವ್ನು ಮಾಡಿದ್ದನ್ನು ಖಂಡಿಸಿ ಆಮೇಲೆ ದರ್ಶನ್‌ನ ಖಂಡಿಸಬೇಕಾಗಿತ್ತು. ಆಕ್ಷನ್‌ ಶುರುವಾಗಿದ್ದು ಅವ್ನಿಂದಾನೇ, ಅವ್ನನನ್ನ ಯಾಕೆ ಹುತಾತ್ಮ ಮಾಡ್ತೀರಿ? 

ರಾಕಿಂಗ್ ಸ್ಟಾರ್ ಫಾರ್ಮುಲಾ ಹೈಜಾಕ್ ಆಯ್ತಾ, KGF ನಟ ಯಶ್ ಸಕ್ಸಸ್ ಸೂತ್ರದ ಗುಟ್ಟು ರಟ್ಟಾಯ್ತು!

ಆದ್ರೆ, ಅವ್ನು ಮಾಡಿದ್ದು ಅಕ್ಷಮ್ಯ ಅಪರಾಧ ಆಗಿದ್ರೂ ಅದಕ್ಕೆ ಇವ್ರು ಹೀಗೆ ಮಾಡ್ಬೇಕಿತ್ತಾ ಅಂತ ಕೇಳಿದ್ರೆ, ನೋ, ಮಾಡ್ಬಾರ್ದಿತ್ತು. ಆದ್ರೆ ಪರಿಸ್ಥಿತಿ ಹೇಘಿತ್ತೋ ಏನೋ! ಇವ್ರಿಗೆ ಪರಿಸ್ಥಿತಿನ ನಿಯಂತ್ರಿಸೋಕೆ ಆಗ್ಲಿಲ್ಲ ಅನ್ಸುತ್ತೆ. ಆ ಪರಿಸ್ಥಿತಿಯಲ್ಲಿ ಏನ್ ಮಾಡ್ಬೇಕು ಅಂತ ಗೊತ್ತಾಗಿಲ್ಲ, ತಮ್ಮನ್ನ ತಾವು ನಿಯಂತ್ರಣ ಮಾಡ್ಕೊಳ್ಳಲಿಲ್ಲ. ದರ್ಶನ್ ಹಾಗೂ ಅವ್ನ ಸಹಚರರು ಅವ್ರನ್ನ ಅವ್ರು ನಿಯಂತ್ರಣ ಮಾಡ್ಕೋಬೇಕಿತ್ತು. ಅವ್ನಿಗೆ ಶಿಕ್ಷೆ ಕೋಡೋಕೆ ಹೋಗಿ ಇವ್ರಿಗೆ ಆಗಬಾರದ್ದು ಆಯ್ತು' ಎಂದಿದ್ದಾರೆ ಅಗ್ನಿ ಶ್ರೀಧರ್. 

ಬುಡಕ್ಕೆ ಬೆಂಕಿ ಬಿದ್ರೆನೇ ರಾಕೆಟ್‌ ಮೇಲಕ್ಕೆ ಹಾರೋದು; KGF ರಾಕಿಂಗ್ ಸ್ಟಾರ್ ಯಶ್ ಯಾರಿಗೆ ಹೇಳಿದ್ದು?

'ನಟ ದರ್ಶನ್‌ ಸಹವಾಸ ದೋಷ ಹಾಗೂ ಕುಡಿತ ಬಿಟ್ಟರೆ ಮುಂದೆ ಭವಿಷ್ಯದಲ್ಲಿ ಒಳ್ಳೆಯದಾಗಲಿದೆ' ಎಂದು ಕೂಡ ಅಗ್ನಿ ಶ್ರೀಧರ್ ಹೇಳಿದ್ದಾರೆ. ಮುಂದುವರೆದ ಅವರು, 'ನನ್ನ ಅನಿಸಿಕೆ ಏನೆಂದರೆ, ಈ ವಿಷ್ಯದಲ್ಲಿ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ. ಆದರೆ, ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ, ಅಚಾತುರ್ಯದಿಂದ ಆಗಿದ್ದು ಎಂಬುದನ್ನು ನಾನು ಖಂಡಿತ ಹೇಳಬಯಸುತ್ತೇನೆ' ಎಂದಿದ್ದಾರೆ. ಜತೆಗೆ, 'ಜೈಲು ಸೇರಿರುವ ನಟ ದರ್ಶನ್ ಸ್ವಲ್ಪ ಕಾಲದಲ್ಲೇ ನಿರಪರಾಧಿ ಎನಿಸಿ ಹೊರಗೆ ಬರುತ್ತಾನೆ. ಆದರೆ, ಮುಂದೆ ಆತ ಹೊಸ ಮನುಷ್ಯನಾಗುವತ್ತ ಗಮನ ಹರಿಸಬೇಕು' ಎಂದಿದ್ದಾರೆ. 

ಜೈಲಿಂದ ವಾಪಸ್ ಆದ್ಮೇಲೆ ಮತ್ತೆಂದೂ 'ಅದನ್ನು' ಮಾಡ್ಬೇಡ; ನಟ ದರ್ಶನ್‌ಗೆ ಅಗ್ನಿ ಶ್ರೀಧರ್ ಸಲಹೆ!

click me!