ಹಿರಿಯ ಕಲಾವಿದೆ ಹೇಮಾ ಚೌದರಿಗೆ ತೀವ್ರ ಅನಾರೋಗ್ಯ, ಮಗನ ಬರುವಿಕೆಗೆ ಕಾಯುತ್ತಿರುವ ಕುಟುಂಬ

By Gowthami K  |  First Published Dec 20, 2023, 10:41 AM IST

ಕನ್ನಡದ ಹಿರಿಯ ನಟಿ ಹೇಮಾ ಚೌದರಿ ಅನಾರೋಗ್ಯರೋಗ್ಯದಿಂದ ಬಳಲುತ್ತಿದ್ದು, ತೀವ್ರ ನಿಗಾ ಘಟಕದಲ್ಲಿ ವೈದ್ಯರು  ಚಿಕಿತ್ಸೆ ನೀಡುತ್ತಿದ್ದಾರೆ. ಮಗನ ಬರುವಿಕೆಗೆ  ನಟಿ ಕುಟುಂಬದವರು ಎದುರು ನೋಡುತ್ತಿದ್ದಾರೆ.


ಬೆಂಗಳೂರು (ಡಿ.20): ಕನ್ನಡದ ಹಿರಿಯ ನಟಿ ಹೇಮಾ ಚೌದರಿ ಅನಾರೋಗ್ಯರೋಗ್ಯದಿಂದ ಬಳಲುತ್ತಿದ್ದು, ತೀವ್ರ ನಿಗಾ ಘಟಕದಲ್ಲಿ ವೈದ್ಯರು  ಚಿಕಿತ್ಸೆ ನೀಡುತ್ತಿದ್ದಾರೆ.  ನಟಿ ಹೇಮಾ ಚೌದರಿ ಮೆದುಳಿನ ರಕ್ತಸ್ರಾವದಿಂದ(Brain Hemorrhage)ನಿಂದ ಬಳಲುತ್ತಿದ್ದು ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೂ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಹೊರ ದೇಶದಲ್ಲಿರುವ ಮಗನ ಆಗಮನಕ್ಕೆ ಕುಟುಂಬಕ್ಕೆ ಕಾಯ್ತಿದ್ದಾರೆ. ಸದ್ಯ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಅವರನ್ನು ಇರಿಸಲಾಗಿದೆ.

ಐರ್ಲೆಂಡ್​  ನಲ್ಲಿರುವ ಮಗನ ಆಗಮನಕ್ಕೆ ಕುಟುಂಬ  ಕಾಯುತ್ತಿದೆ. ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ತಿಳಿದು ಬಂದಿದೆ. ಹಿರಿಯ ನಟಿ ಶೀಘ್ರ ಗುಣಮುಖರಾಗಿ ಮೊದಲಿನಂತಾಗಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.  ಮೊನ್ನೆಯಷ್ಟೇ ಲೀಲಾವತಿ ಪುಣ್ಯ ತಿಥಿಯಲ್ಲಿ ಆರೋಗ್ಯವಾಗಿರೋ ರೀತಿ ನಟಿ ಹೇಮಾ ಚೌದರಿ ಕಂಡು ಬಂದಿದ್ದರು. ಲೀಲಾವತಿ ತಿಥಿ ದಿನ ಆಗಮಿಸಿ ವಿನೋದ್ ರಾಜ್ ಅವರಿಗೆ ಸಾಂತ್ವಾನ ಹೇಳಿದ್ದರು.

Latest Videos

undefined

ಬಣ್ಣದ ಬದುಕಿನ ಕಿಸ್ಸಿಂಗ್‌ ರಾಣಿಯ ನಿಜಜೀವನದ ಕಥೆ ಭಯಾನಕ, ಮದುವೆಗೆ ಮುನ್ನ ಕ್ರೈಸ್ತ ಧರ್ಮಕ್ಕೆ ಮತಾಂತರ

ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದಿರುವ ಹೇಮಾ ಚೌಧರಿ 180ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರಲ್ಲಿ ಅತೀ ಹೆಚ್ಚು ನಟಿಸಿರುವುದು ಕನ್ನಡದಲ್ಲಿಯೇ,  91 ಚಿತ್ರಗಳಲ್ಲಿ ನಟಿಸಿದ್ದಾರೆ. ಒಂದು ಕಾಲದಲ್ಲಿ ಬಹುಬೇಡಿಕೆಯ ಪೋಷಕ ಕಲಾವಿದೆಯಾಗಿ ಹೇಮಾ ಮಿಂಚಿದ್ದರು. ಸಿನೆಮಾ ಮಾತ್ರವಲ್ಲದೆ ಕಿರುತೆಯಲ್ಲೂ  ಧಾರವಾಹಿಗಳಲ್ಲಿಯೂ ಹೇಮಾ ಮಂಚಿದ್ದರು.

ಹೇಮಾ ಚೌಧರಿ  ಅವರು ಪ್ರಧಾನವಾಗಿ ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.  1976 ರಲ್ಲಿ ತೆಲುಗು ಚಲನಚಿತ್ರ ಪೆಲ್ಲಿ ಕನಿ ಪೆಲ್ಲಿಯಲ್ಲಿ ಪ್ರಮುಖ ನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ಅವರು 1980 ರ ದಶಕದಲ್ಲಿ ಪೋಷಕ ಪಾತ್ರಗಳಿಗೆ ಪ್ರಸಿದ್ಧಿ ಪಡೆದರು. ವಿಜಯ ವಾಣಿ, ಶುಭಶಯ, ದೀಪಾ, ಗಾಳಿ ಮಾತು ಮತ್ತು ನೀ ಬರೆದ ಕಾದಂಬರಿಯಂತಹ ಕನ್ನಡ ಚಿತ್ರಗಳಲ್ಲಿ ನೆಗೆಟಿವ್‌ ರೋಲ್‌ನಲ್ಲಿ ಮಿಂಚಿದ್ದಾರೆ.

ಅವಿವಾಹಿತೆಗೆ ಹುಟ್ಟಿದ ಈ ಸ್ಟಾರ್‌ ನಟಿ, ಸೂಪರ್ ಸ್ಟಾರ್ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲೇ ಇಲ್ಲ!

ನಟನೆಯ ಹೊರತಾಗಿ, ಹೇಮಾ ಚೌಧರಿ ಒಬ್ಬ ನಿಪುಣ ಕೂಚಿಪುಡಿ ನೃತ್ಯಗಾರ್ತಿ ಮತ್ತು ತನ್ನ ಗುರು ವೆಂಪಟಿ ಚಿನ್ನ ಸತ್ಯಂ ಅವರೊಂದಿಗೆ ಪ್ರಪಂಚದಾದ್ಯಂತ 700 ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಅವರು ಮದ್ರಾಸ್‌ನ ನಟನಾ ಶಾಲೆಯಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಸಹಪಾಠಿಯಾಗಿದ್ದರು. ಅವರು ತಮ್ಮ ನೃತ್ಯ ಕೌಶಲ್ಯಕ್ಕಾಗಿ ಪನೋರಮಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಿತಿಯಲ್ಲಿ ಮೂರು ವರ್ಷಗಳ ಕಾಲ ತೀರ್ಪುಗಾರರಾಗಿಯೂ ಇದ್ದರು.

ಹೇಮಾ ಆಂಧ್ರಪ್ರದೇಶದಲ್ಲಿ ಜನಪ್ರಿಯ ಮಹಿಳಾ ಡಬ್ಬಿಂಗ್ ಕಲಾವಿದೆ ಮತ್ತು ತೆಲುಗು ಚಲನಚಿತ್ರ ನಟಿಯಾಗಿದ್ದ ಬೃಂದಾವನ ಚೌಧರಿ ಅವರಿಗೆ ಜನಿಸಿದರು. ಅವರು ರಜನಿ ಕಾಂತ್ ಮತ್ತು ಇತರರೊಂದಿಗೆ ಚೆನ್ನೈ ಫಿಲ್ಮ್ ಇನ್ಸ್ಟಿಟ್ಯೂಟ್ನಿಂದ ಪದವಿ ಪಡೆದರು.

ಹೇಮಾ ಅವರು ತಮ್ಮ ಪ್ರತಿಯೊಂದು ಚಿತ್ರ ಮುಗಿದ ನಂತರ ದೇಶಾದ್ಯಂತ ಇರುವ ಹಿಂದೂ ದೇವಿಯ ದೇವಾಲಯಗಳಲ್ಲಿ ರೇಷ್ಮೆ ಸೀರೆಯನ್ನು ಅರ್ಪಿಸುವ ಅಭ್ಯಾಸ ಇಟ್ಟುಕೊಂಡಿದ್ದರು. 

click me!