ಮಧ್ಯರಾತ್ರಿ ಹಾಸಿಗೆಯಲ್ಲಿ ಮಲಗಿದ್ದ ದೆವ್ವ ನೋಡಿ ಬೆಚ್ಚಿಬಿದ್ದ ಸೀರುಂಡೆ ರಘು; ಘಟನೆ ಕೇಳಿ ಎಲ್ಲರಿಗೂ ಢವಢವ

By Vaishnavi Chandrashekar  |  First Published Dec 4, 2024, 1:17 PM IST

ಸಿನಿಮಾ ಚಿತ್ರೀಕರಣದ ವೇಳೆ ಭಯ ಬೀಳಿಸುವ ಘಟನೆ. ಎಷ್ಟು ಕಷ್ಟದಲ್ಲಿ ಚಿತ್ರೀಕರಣ ಮಾಡಿದರು ಎಂದು ರಿವೀಲ್ ಮಾಡಿದ ರಘು. 


ನವೆಂಬರ್ 29ರಂದು ನಾ ನಿನ್ನ ಬಿಡಲಾರೆ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ, ದೆವ್ವ-ಭೂತದ ಕಹಾನಿಯನ್ನು ಅದ್ಭುತವಾಗಿ ತೋರಿಸಿದ್ದಾರೆ. ಭಾರತಿ ಬಾಲಿ ನಿರ್ಮಾಪಕರು ಹಾಗೂ ನವೀನ್‌ ಜಿಎಸ್‌ ನಿರ್ದೇಶಕರು. ಈ ಸಿನಿಮಾದಲ್ಲಿ ನಡೆಯದ ಭಯಂಕರ ಘಟನೆಯನ್ನು ಸೀರುಂಡೆ ರಘು ಹಂಚಿಕೊಂಡಿದ್ದಾರೆ. 

'ಒಂದು ದಿನ ರಾತ್ರಿ ಸುಮಾರು 1.30-1.45 ಸಮಯದಲ್ಲಿ ಶೂಟಿಂಗ್ ನಡೆಯುತ್ತಿತ್ತು ನನ್ನ ಭಾಗದ ಶೂಟಿಂಗ್ ತಡವಾಗಿದ್ದ ಕಾರಣ ಜಾಗ ಸಿಕ್ಕ ಕಡೆ ಮಲಗುವುದಕ್ಕೆ ಪ್ಲ್ಯಾನ್ ಮಾಡಿದೆ. ಲಾಸ್ಟ್‌ ರೂಮಿನಲ್ಲಿ ಎರಡು ಹಾಸಿಗೆ ಇತ್ತು ಒಂದರ ಮೇಲೆ ನಾನು ಮಲಗಿಕೊಂಡೆ. ಯೂಟ್ಯೂಬರ್‌ ಹುಡುಗಿಯೊಬ್ಬರು ಬಂದಿದ್ದರು....ನನಗೆ ಹೊರಗಡೆ ನಡೆಯುತ್ತಿರುವ ಸೌಂಡ್ ಪ್ರತಿಯೊಂದು ಕೇಳಿಸುತ್ತಿದೆ. ಆಗ ನಿದ್ರೆ ಬರಲು ಶುರುವಾಯ್ತು ಹಾಸಿಗೆಯ ಎಡ್ಜ್‌ನಲ್ಲಿ ಒಂದು ಕೈ ಇತ್ತು ಅದನ್ನು ತಾಗಿತ್ತು ತಕ್ಷಣವೇ ಸಾರಿ ಮೇಡಂ ಎಂದು ಹೇಳಿ ತಿರುಗಿ ಮಲಗಿಕೊಂಡೆ. ಸ್ವಲ್ಪ ಸಮಯದ ನಂತರ ಆ ಹುಡುಗಿ ಯಾಕೆ ಬಂದು ಮಲ್ಕೊಂಡೆ ಅಂತ ಯೋಚನೆ ಮಾಡಲು ಶುರು ಮಾಡಿದೆ ಹೀಗಾಗಿ ತಿರುಗಿ ಮಾಡನಾಡುವ ಪ್ರಯತ್ನ ಮಾಡುತ್ತಿದ್ದೀನಿ ಆದರೆ ತಿರುಗಲು ಆಗುತ್ತಿಲ್ಲ. ಹೇಗೋ ಪ್ರಯತ್ನ ಮಾಡಿ ತಿರುಗಿ ನೋಡಿದರೆ ಯಾರೂ ಇರಲಿಲ್ಲ. ಮನುಷ್ಯನಿಗೆ ಈ ರೀತಿ ಆಗುತ್ತಿರುತ್ತದೆ ಎಂದು ಕೆಲವರು ಹೇಳುತ್ತಾರೆ ಹೀಗಾಗಿ ನನ್ನ ಬ್ರಹ್ಮೆ ಎಂದುಕೊಂಡು ರಾಘವೇಂದ್ರ ಸ್ವಾಮಿ ನೆನಪಿಸಿಕೊಂಡು ಮಲಗಿಕೊಂಡೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಸೀರುಂಡೆ ರಘು ಮಾತನಾಡಿದ್ದಾರೆ.

Tap to resize

Latest Videos

ಶೂ, ಚಪ್ಪಲಿಯಿಂದ ಪಾದ ವಾಸನೆ ಬರ್ತಿದ್ಯಾ? ಟೆನ್ಶನ್ ಕಮ್ಮಿ ಮಾಡುತ್ತೆ ಈ ಟ್ರಿಕ್

'ಎದೆಯಲ್ಲಿ ಡವಡವ ಅನ್ನುತ್ತಿದೆ ಏನ್ ಮಾಡಿದರೂ ನಿದ್ರೆ ಬರುತ್ತಿಲ್ಲ ಕಣ್ಣು ಬಿಟ್ಟು ನೋಡುತ್ತೀನಿ ಎಂದು ತರ ನೆರಳು ಕಾಣಿಸಿತ್ತು....ಒಂದು ಮಗು ಬೆರಳ ಇಟ್ಟುಕೊಂಡು ಯಾರೋ ಈ ಕಡೆಯಿಂದ ಆ ಕಡೆ ನಡೆದಾಡುತ್ತಿದ್ದಾರೆ. ನನಗೆ ಎಲ್ಲವೂ ಕಾಣಿಸುತ್ತಿದೆ ಆದರೆ ಚಲ್ ಚಲ್ ಎಂದು ಗೆಜ್ಜೆ ಸೌಂಡ್ ಕೇಳಿಸುತ್ತಿದೆ ಅದಿಕ್ಕೆ ಭಯದಿಂದ ಎದ್ದು ಹೊರಗಡೆ ಬಂದೆ. ಅಲ್ಲಿ ನನ್ನ ಸ್ನೇಹಿತರು ಕೂತಿದ್ದರು ಫ್ರೀ ಇದ್ದ ಕಾರಣ ಬನ್ನಿ ಮಲಗೋಣ ಎಂದು ಕರೆದುಕೊಂಡು ಬಂದೆ. ಮಲಗಿದ ಸ್ವಲ್ಪ ಹೊತ್ತಿಗೆ ರಘು ಬಿಡಿಸಿ ರಘು ಆಗುತ್ತಿಲ್ಲ ಅಂತಿದ್ದರು ಕುತ್ತಿಗೆಯನ್ನು ಬಿಗಿಯಾಗಿ ಇಟ್ಟುಕೊಂಡಿದ್ದರು, ನಾನು ಅವರ ಮೇಲೆ ಕುಳಿತುಕೊಂಡು ಕಷ್ಟ ಪಟ್ಟು ಅವರ ಕೈಯನ್ನು ಬಿಡಿಸಿದೆ. ಆಗ ಏನೋ ಫೀಲ್ ಆಯ್ತು ಎಂದು ಭಯ ವ್ಯಕ್ತ ಪಡಿಸಿದ್ದರು ಕೆಲವು ನಿಮಿಷಗಳ ಹಿಂದೆ ನನಗೂ ಹೀಗೆ ಆಯ್ತು ಎಂದು ನಾನು ಆಗ ಹೇಳಿದೆ' ಎಂದಿದ್ದಾರೆ ರಘು. 

ವೇದಿಕೆಯ ಮೇಲೆ ಕಾಲ್ಗೆಜ್ಜೆ, ಕಲರ್ ಕಲರ್ ಪಂಚೆ ಧರಿಸಲು ಕಾರಣ ತೆರೆದಿಟ್ಟ ರಘು ದೀಕ್ಷಿತ್!

click me!