ಅದನ್ನು ನಾವು ಗಮನಿಸಿದ್ರೆ, ಅರ್ಥ ಮಾಡ್ಕೊಂಡ್ರೆ ಯಾರೂ ಅಂಥ ಶುದ್ಧ ಕೋಪಕ್ಕೆ ಅರ್ಹರಲ್ಲ ಅಂತ ಅನ್ನಿಸಿಬಿಡುತ್ತೆ.. ನಾವು ಅವ್ರಿಗೆ ಅಷ್ಟು ಇಂಪಾರ್ಟೆಂಟ್ ಕೊಡೋದೇ ಸರಿಯಲ್ಲ ಅಂತ ಅನ್ನಿಸಿಬಿಡುತ್ತೆ....
ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಅವರು ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಬ್ಯುಸಿ ಆಗಿದ್ದು ಗೊತ್ತೇ ಇದೆ. ಇದೀಗ, ಅವರ ನಟನೆಯ ಮುಂಬರುವ ಮ್ಯಾಕ್ಸ್ (Max) ಚಿತ್ರವು ಈ ತಿಂಗಳು 25ರಂದು (25 December 2024) ಬಿಡುಗಡೆಗೆ ಸಜ್ಜಾಗಿದೆ. ಈ ನಡುವೆ ನಟ ಸುದೀಪ್ ಮಾತನಾಡಿರುವ ಹಳೆಯ ವೀಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಅವು ಸಾಕಷ್ಟು ವ್ಯೂಸ್, ಲೈಕ್ಸ್ ಹಾಗೂ ಕಾಮೆಂಟ್ಸ್ ಪಡೆಯುತ್ತವೆ. ಕಾರಣ, ನಟ ಸುದೀಪ್ ಅವರ ಮ್ಯಾಗ್ನೆಟಿಕ್ ವ್ಯಕ್ತಿತ್ವ ಅನ್ನಬಹುದು.
ಹೌದು, ನಟ ಸುದೀಪ್ ಅವರದು ಬಹುಮುಖ ಪ್ರತಿಭೆ ವ್ಯಕ್ತಿತ್ವ. ಜೊತೆಗೆ, ಅವರು ತಮಗೆ ಜೀವನದಲ್ಲಿ ಆಗಿರುವ ಅನುಭವಗಳ ಮೂಲಕ ತಮ್ಮದೇ ಆದ ರೀತಿಯಲ್ಲಿ 'ಲೈಫ್ ಲೆಸನ್' ತರ ಮಾತನಾಡುತ್ತಿರುತ್ತಾರೆ. ಕೆಲವೊಮ್ಮೆ ಸಂದರ್ಶನಗಳಲ್ಲಿ ಪ್ರಶ್ನೆಗೆ ಉತ್ತರ ರೂಪದಲ್ಲಿ, ಇನ್ನೂ ಕೆಲವೊಮ್ಮೆ ಎಲ್ಲೋ ವೇದಿಕೆಗಳಲ್ಲಿ ಜೀವನ, ಜೀವನ ಪಾಠ, ತಮ್ಮ ಬಗ್ಗೆ, ಬೇರೆಯವರ ಬಗ್ಗೆ ಅಭಿಪ್ರಾಯ, ಅನಿಸಿಕೆಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. ಅಂತಹದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮದಗಜ ಮಹೇಶ್ ಸಾರಥ್ಯದಲ್ಲಿ ಮತ್ತೆ 'ಅಯೋಗ್ಯ'ರಾಗಲು ಹೊರಟ ಸತೀಶ್-ರಚಿತಾ!
ಕೋಪ ಅನ್ನೋದು ಪ್ರೀತಿಗಿಂತ ಪ್ಯೂರ್.. ಯಾಕಂದ್ರೆ, ಪ್ರೀತಿಸಿದೋರನ್ನ ನಾವು ದಿನಾ ನೆನಪಿಸಿಕೊಳ್ತೀವೋ ಇಲ್ವೋ, ಆದ್ರೆ ಕೋಪ ಯಾರ್ ಬಗ್ಗೆ ಇದ್ಯೋ ಅವ್ರನ್ನಂತೂ ಖಂಡಿತ ನೆನಪು ಮಾಡ್ಕೋತೀವಿ. ನಮ್ಗೆ ಯಾರ್ ಬಗ್ಗೆ ತುಂಬಾ ಕೋಪ ಇದೆಯೋ ಅವ್ರು ನಮ್ಮ ತಲೆನಲ್ಲಿ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ನಿದ್ದೆ ಬರುವವರೆಗೂ ಇದ್ದೇ ಇರುತ್ತಾರೆ. ಆದರೆ, ಪ್ರೀತಿಸಿದವರ ಸಂಗತಿ ಹಾಗಲ್ಲ. ಕೋಪ ಅಚ್ಟು ಶುದ್ಧ, ಪ್ಯೂರ್ ಅಂದಾಗ ಅಲ್ಲಿ ನಾವು ಯಾರನ್ನ ಕೂರಿಸ್ತೀವಿ ಅನ್ನೋದು ತುಂಬಾ ಇಂಪಾರ್ಟೆಂಟು.
ಯಾಕೆ ಅಂದ್ರೆ, ನಾವ್ ಯಾವತ್ತೂ ಪ್ರೀತಿಸಿದವ್ರಿಗಿಂತ ಹೆಚ್ಚಿನ ಇಂಪಾರ್ಟೆಟ್ ಅವ್ರಿಗೆ ಕೋಪ ತರಿಸಿದವ್ರಿಗೆ ಕೊಡ್ತಾ ಇರ್ತೀವಿ.. ಅದನ್ನು ನಾವು ಗಮನಿಸಿದ್ರೆ, ಅರ್ಥ ಮಾಡ್ಕೊಂಡ್ರೆ ಯಾರೂ ಅಂಥ ಶುದ್ಧ ಕೋಪಕ್ಕೆ ಅರ್ಹರಲ್ಲ ಅಂತ ಅನ್ನಿಸಿಬಿಡುತ್ತೆ.. ನಾವು ಅವ್ರಿಗೆ ಅಷ್ಟು ಇಂಪಾರ್ಟೆಂಟ್ ಕೊಡೋದೇ ಸರಿಯಲ್ಲ ಅಂತ ಅನ್ನಿಸಿಬಿಡುತ್ತೆ.. ಅದಕ್ಕೇ ಫಾರ್‌ಗಿವ್ ಅಂಡ್ ಫಾರ್‌ಗೆಟ್... ನನ್ ಪ್ರಕಾರ ಅದಕ್ಕಿಂತ ತುಂಬಾ ಒಳ್ಳೆಯ ಸಂಗತಿಗಳು ಮಾತಾಡೋದಕ್ಕೆ ಹಾಗೂ ಜೀವನದಲ್ಲಿ ಎಂಜಾಯ್ ಮಾಡೋದಕ್ಕೆ ಇದೆ. ಸೋ, ಕೋಪಕ್ಕೆ ಹೆಚ್ಚಿನ ಮಹತ್ವ ನೀಡ್ಬಾರ್ದು..' ಎಂದಿದ್ದಾರೆ ನಟ ಕಿಚ್ಚ ಸುದೀಪ್.
ಸಾವಿಗೆ ಶರಣಾದ ನಟಿ ಶೋಭಿತಾ ಶಿವಣ್ಣ ಎಂಥ ಹುಡುಗಿ ಆಗಿದ್ದಳು?
ಅಂದಹಾಗೆ, ನಟ ಕಿಚ್ಚ ಸುದೀಪ್ ಅವರು ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 11 ಶೋ ನಡೆಸಿಕೊಡುತ್ತಿದ್ದಾರೆ. ಅದು ಈಗಾಗಲೇ ಎಂಟು ವಾರಗಳನ್ನು ದಾಟಿ ಮುನ್ನಡೆಯುತ್ತಿದ್ದು, 'ಮುಂದಿನ ಸೀಸನ್ ನಾನು ಹೋಸ್ಟ್ ಮಾಡೋದಿಲ್ಲ, ಇದೇ ನನ್ನ ಲಾಸ್ಟ್ ಬಿಗ್ ಬಾಸ್ ಹೋಸ್ಟಿಂಗ್' ಎಂದಿದ್ದಾರೆ ಸುದೀಪ್. ಸುದೀಪ್ ನಟನೆಯ 'ಮ್ಯಾಕ್ಸ್' ಚಿತ್ರವು ಈ ವರ್ಷ, ಡಿಸೆಂಬರ್ 25ರಂದು ಬಿಡುಗಡೆ ಆಗಲಿದೆ. ಮ್ಯಾಕ್ಸ್ ಚಿತ್ರದಲ್ಲಿ ವರಲಕ್ಷ್ಮೀ ಶರತ್‌ಕುಮಾರ್ ಅವರು ಕಿಚ್ಚ ಸುದೀಪ್ ಅವರಿಗೆ ನಾಯಕಿ.