ಆ ನಟ ನನ್ನ ಕ್ರಷ್​, ಅವ್ರ ಮದ್ವೆಯಾದಾಗ ಹಾರ್ಟ್​ ಬ್ರೇಕ್​ ಆಗೋಯ್ತು- ಬಿಕ್ಕಿ ಬಿಕ್ಕಿ ಅತ್ತೆ ಎಂದ ಸಾನ್ವಿ ಸುದೀಪ್

Published : Mar 19, 2025, 12:11 PM ISTUpdated : Apr 25, 2025, 06:23 PM IST
ಆ ನಟ ನನ್ನ ಕ್ರಷ್​, ಅವ್ರ ಮದ್ವೆಯಾದಾಗ ಹಾರ್ಟ್​ ಬ್ರೇಕ್​ ಆಗೋಯ್ತು- ಬಿಕ್ಕಿ ಬಿಕ್ಕಿ ಅತ್ತೆ ಎಂದ ಸಾನ್ವಿ ಸುದೀಪ್

ಸಾರಾಂಶ

ಕಿಚ್ಚ ಸುದೀಪ್‌ ಪುತ್ರಿ ಸಾನ್ವಿ, ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮೇಲೆ ತಮಗಿದ್ದ ಕ್ರಷ್ ಬಗ್ಗೆ ಮಾತನಾಡಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ಅವರ 'ಸ್ಟೂಡೆಂಟ್ ಆಫ್ ದಿ ಇಯರ್' ಚಿತ್ರ ನೋಡಿದಾಗಿನಿಂದ ಅವರ ಮೇಲೆ ಕ್ರಷ್ ಇತ್ತು. ಅವರು ಕಿಯಾರಾ ಅಡ್ವಾಣಿ ಅವರನ್ನು ಮದುವೆಯಾದಾಗ ತುಂಬಾ ಬೇಸರವಾಯಿತು ಎಂದು ಹೇಳಿದ್ದಾರೆ. ಅಲ್ಲು ಅರ್ಜುನ್ ಕೂಡ ಕ್ರಷ್ ಲಿಸ್ಟ್‌ನಲ್ಲಿದ್ದಾರೆ ಎಂದು ಸಾನ್ವಿ ಹೇಳಿದ್ದಾರೆ.

ಸಿನಿ ತಾರೆಯರು ಎಂದರೆ ಅವರಿಗೆ ಹಲವು ಮಂದಿ ಕ್ರಷ್​ ಇರುತ್ತಾರೆ. ಅದು ನಟನೇ ಆಗಿರಬಹುದು, ನಟಿಯೇ ಆಗಿರಬಹುದು. ಅವರ ಅಭಿಮಾನಿಗಳ ಸಂಖ್ಯೆ ಎಷ್ಟು ದೊಡ್ಡದಿರುತ್ತದೆಯೋ ಅವರು ಹಲವರ ಕ್ರಷ್​ ಕೂಡ ಆಗಿಬಿಟ್ಟಿರುತ್ತಾರೆ. ತಮ್ಮ ಕನಸಿನ ಹುಡುಗ, ಹುಡುಗಿ ಹೀಗೆಯೇ ಇರಬೇಕು ಎಂದೋ ಅಥವಾ ಅವರೇ ತಮ್ಮ ಪ್ರೇಮಿ ಎಂದೋ ಅಂದುಕೊಂಡುಬಿಡುತ್ತಾರೆ. ಅವರ ಮದುವೆ ಫಿಕ್ಸ್ ಆದಾಗ ಇಲ್ಲವೇ ಅವರು ಇನ್ನೊಬ್ಬರ ಜೊತೆ ಇರುವುದನ್ನು ನೋಡಿದಾಗ ಕರುಳು ಚುರುಕ್​ ಎನ್ನುವುದು, ಹಾರ್ಟ್​ ಬ್ರೇಕ್​ ಆಗೋದು ಇದ್ದೇ ಇರುತ್ತದೆ. ಹಾಗೆಂದು ಇದು ಸಾಮಾನ್ಯ ಜನರ ಮಾತು ಎಂದುಕೊಂಡರೆ ಅದು ತಪ್ಪು. ಸೆಲೆಬ್ರಿಟಿಗಳಿಗೂ ಹಾಗೂ ಅವರ ಮಕ್ಕಳಿಗೂ ಇಂಥದ್ದೊಂದು ಕ್ರಷ್​ ಇದ್ದೇ ಇರುತ್ತದೆ. ಅದರ ಬಗ್ಗೆನೇ ಇದೀಗ ಕಿಚ್ಚ ಸುದೀಪ್​ ಅವರ ಮಗಳು ಸಾನ್ವಿ ಸುದೀಪ್​ ಮಾತನಾಡಿದ್ದಾರೆ.

ತಮಗೆ ಬಾಲಿವುಡ್​ ನಟನ ಬಗ್ಗೆ ಇದ್ದ ಕ್ರಷ್​ ಹಾಗೂ ಅವರ ಮದುವೆಯಾದಾಗ ತಮಗಾಗಿರುವ ನೋವಿನ ಬಗ್ಗೆ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಅವರು  ಯೂಟ್ಯೂಬ್ ಚಾನೆಲ್‌ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ತಮಗೆ ಚಿಕ್ಕಂದಿನಿಂದಲೂ ಒಬ್ಬ ಸಿನಿಮಾ ತಾರೆಯ ಮೇಲೆ ಕ್ರಷ್ ಆಗಿತ್ತು.  ಅವರ ಮದುವೆಯಾದಾಗ ಹಾರ್ಟ್​ ಬ್ರೇಕ್​ ಆಗೋಯ್ತು. ತುಂಬಾ ಬೇಸರಗೊಂಡು ಬಿಕ್ಕಿ ಬಿಕ್ಕಿ ಅತ್ತಿರುವುದಾಗಿ ಸಾನ್ವಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಸ್ನೇಹಿತರಿಗೂ ಈ ಕ್ರಷ್​ ಬಗ್ಗೆ ಗೊತ್ತಿದ್ದರಿಂದ ಆ ನಟನ ಮದುವೆಯಾಗುತ್ತಿದ್ದಂತೆಯೇ ತಮಗೆ ಸಂತಾಪ ಸೂಚಿಸಿರುವ ಸಂದೇಶವನ್ನೂ ಕಳುಹಿಸಿದ್ದ ಬಗ್ಗೆ ನೆನಪಿಸಿಕೊಂಡಿದ್ದಾರೆ.

ಚಿಕ್ಕವಳಿದ್ದಾಗ ಸಲ್ಮಾನ್​ ಖಾನ್​ ಮನೆಗೆ ಹೋದಾಗ ನಡೆದ ಘಟನೆಯನ್ನು ನೆನಪಿಸಿಕೊಂಡ ಸಾನ್ವಿ ಸುದೀಪ್​

ಅಷ್ಟಕ್ಕೂ ಆ ನಟ, ಬಾಲಿವುಡ್​ನ ಸಿದ್ಧಾರ್ಥ್​ ಮಲ್ಹೋತ್ರಾ. ನಟಿ ಕಿಯಾರಾ ಅಡ್ವಾಣಿ ಪತಿ! ಕರಣ್ ಜೋಹರ್ ಅವರ 2012 ರ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರನ್ನು ಮೊದಲ ಬಾರಿಗೆ ನೋಡಿದಾಗಿನಿಂದ ಅವರ ಮೇಲೆ ಕ್ರಷ್ ಆಗಿದ್ದೆ ಎಂದು ಸಾನ್ವಿ ಹೇಳಿದ್ದಾರೆ. ಸಿದ್ಧಾರ್ಥ್ ಕಿಯಾರಾ ಅಡ್ವಾಣಿ ಅವರನ್ನು ಮದುವೆಯಾದಾಗ ನಾನು ತುಂಬಾ ಅಸಮಾಧಾನಗೊಂಡಿದ್ದೆ ಮತ್ತು ತುಂಬಾ ಅತ್ತಿದ್ದೆ ಎಂದು ಸಾನ್ವಿ ಒಪ್ಪಿಕೊಂಡಿದ್ದಾರೆ. 2023 ರಲ್ಲಿ ಸಿದ್ಧಾರ್ಥ್ ವಿವಾಹವಾದಾಗ ತಮ್ಮ  ಸ್ನೇಹಿತರು ಸಂತಾಪ ಸೂಚಿಸುವ ಸಂದೇಶಗಳನ್ನು ಕಳುಹಿಸಿದ್ದರು ಎಂದು ನಟಿ ಸ್ಮರಿಸಿಕೊಂಡಿದ್ದಾರೆ. ನನ್ನ ಕ್ರಷ್​ನಲ್ಲಿ ಅಲ್ಲು ಅರ್ಜುನ್ ಕೂಡ ಒಬ್ಬರು. ಆದರೆ,  ಅತಿ ಹೆಚ್ಚು ಸೆಲೆಬ್ರಿಟಿ ಕ್ರಷ್ ಸಿದ್ಧಾರ್ಥ್ ಮಲ್ಹೋತ್ರಾ ಎಂದಿದ್ದಾರೆ.  'ನಾನು ಅವರನ್ನು ನೋಡಿದ ಕ್ಷಣದಿಂದಲೇ ಅವರ ಮೇಲೆ ಕ್ರಷ್ ಆಗಿದ್ದೆ. ಅವರು ಮದುವೆಯಾದಾಗ ನಾನು ಬಿಕ್ಕಿ ಬಿಕ್ಕಿ ಅತ್ತಿದ್ದೆ' ಎಂದಿದ್ದಾರೆ.

'ಸಿದ್ಧಾರ್ಥ್ ಅವರು ಮದುವೆಯಾಗುವ ಮೊದಲು,  ಅವರ ಎಲ್ಲಾ ಪೋಸ್ಟರ್‌ಗಳನ್ನು  ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಹಂಚಿಕೊಳ್ಳುತ್ತಿದ್ದೆ ಮತ್ತು ಅವೆಲ್ಲವನ್ನೂ 'ಹೈಲೈಟ್ಸ್' ವಿಭಾಗದಲ್ಲಿ ಉಳಿಸುತ್ತಿದ್ದೆ.  ನನ್ನ ಪ್ರೊಫೈಲ್‌ನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರ ಚಿತ್ರಗಳೇ ತುಂಬಿ ಹೋಗಿವೆ.  700ಕ್ಕೂ ಅಧಿಕ ಫೋಟೋಗಳು ಇದ್ದವು. ಅವರು ಮದುವೆಯಾದ ನಂತರ, ಅವುಗಳನ್ನು ನನ್ನ ಪ್ರೊಫೈಲ್‌ನಲ್ಲಿ ಹೊಂದಲು ನನಗೆ ಸ್ವಲ್ಪ ಮುಜುಗರವಾಯಿತು. ನಾನು ಒಂದು ದಿನ  ನಟಿಯಾಗಬೇಕು ಎಂದು ಯೋಚಿಸುತ್ತಿದ್ದೆ, ಅವರು ನನ್ನ ಪ್ರೊಫೈಲ್  ನೋಡಿದರೆ, ಆ ನಂತರ ಅವರು ನನ್ನ ಬಗ್ಗೆ ಏನು ಯೋಚಿಸಬಹುದು ಎಂದು ಎಲ್ಲಾ ಡಿಲೀಟ್​ ಮಾಡಿದೆ. ಹಾಗೆ  ಮಾಡುವಾಗಲೂ ಅಳುತ್ತಿದ್ದೆ' ಎಂದಿದ್ದಾರೆ.

ಪಿಯು ಪರೀಕ್ಷೆಯಲ್ಲಿ ಸ್ನೇಹಿತ ಕಾಪಿ ಮಾಡಲು ಕೊಟ್ಟಿಲ್ಲ ಎಂದು ಸುದೀಪ್‌ ಮಾಡಿದ್ದ ಕಿತಾಪತಿ ಏನು ನೋಡಿ!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ