
ಬಹು ಭಾಷಾ ನಟಿಯಾಗಿ ಗುರುತಿಸಿ ಕೊಂಡಿರುವ ನಿಕ್ಕಿ ಗಲ್ರಾನಿ ಸಿನಿಮಾ ವಿಚಾರ ಹೊರತು ಪಡಿಸಿ, ಹೆಚ್ಚಾಗಿ ಮಾಧ್ಯಮಗಳಲ್ಲಾಗಲಿ ಅಥವಾ ಸೋಷಿಯಲ್ ಮೀಡಿಯಾದಲ್ಲಿ ಆಗಲಿ ಕಾಣಿಸಿಕೊಳ್ಳುವುದಿಲ್ಲ. ತಾನಾಯ್ತು, ತನ್ನ ಜೀವನವಾಯ್ತು ಎಂದು ಕೊಂಡು ಬದುಕುತ್ತಿರುವ ಸಿಂಪಲ್ ಹುಡುಗಿ ಅಂದರೆ ತಪ್ಪಾಗಲರದು. ಇದೀಗ ನಿಕ್ಕಿಗೆ ನಿಖಿಲ್ ಹೆಗಡೆ ಮಾಡಿರುವ ವಂಚನೆ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ವಾಚ್‌ಮ್ಯಾನ್ ಜೊತೆ ಡ್ಯಾನ್ಸ್ ಮಾಡಿದ ಸಂಜನಾ ಸಹೋದರಿ ನಟಿ ನಿಕ್ಕಿ
2016ರಲ್ಲಿ ಕೋರಮಂಗಲದಲ್ಲಿ ಸ್ಮಾಲಿಸ್ ರೆಸ್ಟೋ ಕೆಫೆ ನಿರ್ಮಿಸಲು ನಿಖಿಲ್ ಹೆಗಡೆ ಎಂಬಾತನಿಗೆ ನಿಕ್ಕಿ 50 ಲಕ್ಷ ರೂ. ನೀಡಿದ್ದರು, 5 ವರ್ಷ ಕಳೆದರೂ ನಿಕ್ಕಿಗೆ ಯಾವುದೇ ಲಾಭವನ್ನಾಗಲಿ ಅಥವಾ ಹೂಡಿಕೆ ಹಣವನ್ನು ನೀಡಿಲ್ಲ. ಈ ಕಾರಣಕ್ಕೆ ನಿಕ್ಕಿ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಹಿಂದೆ ನಿಖಿಲ್ ಪ್ರತಿ ತಿಂಗಳೂ ಒಂದು ಒಂದು ಲಕ್ಷ ಹಣವನ್ನು ನೀಡುವುದಾಗಿ ಹೇಳಿದ್ದರಂತೆ. ಆದರೆ ಇದುವರೆಗೂ ಯಾವುದೇ ಹಣ ನೀಡದೇ ಸತಾಯಿಸಿದ್ದಾರೆ. ಹಲವು ತಿಂಗಳಿನಿಂದ ನನ್ನ ಕರೆಯನ್ನೂ ಸ್ವೀಕರಿಸುತ್ತಿಲ್ಲ. ಹೀಗಾಗಿ ಐಪಿಸ್ ಸೆಕ್ಷನ್ 420 ಅಡಿಯಲ್ಲಿ ವಂಚನೆ ಪ್ರಕರಣ ದಾಖಲಿಸಿಕೊಂಡು ಆರೋಪಿಗೆ ವಿಚಾರಣೆಗೆ ಬರಲು ನೋಟಿಸ್ ನೀಡಲಾಗಿದೆ, ಎಂದು ಪ್ರಖ್ಯಾತ ವೆಬ್‌ಸೈಟ್‌ವೊಂದು ವರದಿ ಮಾಡಿದೆ.
ಅಕ್ಕ ಜೈಲಿಂದ ಬಂದಿದ್ರೆ ಮಂಗಗಳ ಜೊತೆ ಫನ್ ಮಾಡ್ತಿದ್ದಾರೆ ತಂಗಿ
2014ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ನಿಕ್ಕಿ ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈ ವರ್ಷ ನಿಕ್ಕಿ ಅಭಿನಯದ ಮೂರು ಸಿನಿಮಾಗಳು ಬಿಡುಗಡೆಯ ತಯಾರಿ ನಡೆಸುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.