ಅಣ್ಣಾವ್ರು ದೈಹಿಕವಾಗಿ ಅಗಲಿ ಇಂದಿಗೆ 15 ವರ್ಷಗಳು ಕಳೆದಿವೆ. ರಾಜ್ ಹಾಗೂ ಪಾರ್ವತಮ್ಮ ಸಮಾಧಿಗೆ ಕುಟುಂಬಸ್ಥರು ಈ ದಿನ ಪೂಜೆ ಸಲ್ಲಿಸಿದ್ದಾರೆ.
ಅಭಿಮಾನಿಗಳ ದೇವರು, ಆರಾಧ್ಯ ದೈವ, ವರನಟ ಡಾ.ರಾಜ್‌ಕುಮಾರ್ ಕರುನಾಡನ್ನು ದೈಹಿಕವಾಗಿ ಅಗಲಿ ಇಂದಿಗೆ 15 ವರ್ಷಗಳು ಕಳೆದಿವೆ. ಆದರೆ ಇಂದಿಗೂ ರಾಜ್ ಅಭಿಮಾನಿಗಳ ಹೃದಯದಲ್ಲಿಅಜರಾಮರ.
ಅಪರೂಪದ ವಿಡಿಯೋ; ಪೋನ್‌ನಲ್ಲಿ ಮಾತನಾಡುತ್ತಿರುವ ಅಣ್ಣಾವ್ರು!
ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ರಾಜ್‌ಕುಮಾರ್ ಅವರನ್ನು ಸ್ಮರಿಸುತ್ತಿದ್ದಾರೆ. 'ಅಣ್ಣ ನೀವು ಮತ್ತೆ ಹುಟ್ಟಿ ಬನ್ನಿ, ನಿಮಗಾಗಿ ಕಾದಿದೆ ಕರುನಾಡು,' ಎಂದು ಟ್ಟೀಟ್ ಮಾಡುತ್ತಿದ್ದಾರೆ. ಕೋವಿಡ್19 ಹಿನ್ನೆಲೆಯಲ್ಲಿ ಸಮಾಧಿ ಬಳಿ ಬರಲು ಗುಂಪು ಗುಂಪಾಗಿ ಅಭಿಮಾನಿಗಳಿಗೆ ಅವಕಾಶವಿಲ್ಲ. ಆದರೆ ಕೋವಿಡ್ ಮಾರ್ಗಸೂಚಿಯಂತೆ ಮಾಸ್ಕ್ ಹಾಕಿದವರನ್ನು ಮಾತ್ರ ಒಳಗಡೆ ಬಿಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬರುವ ಕಾರಣ ಕಂಠೀರವ ಸ್ಟುಡಿಯೋಗೆ ಬ್ಯಾರಿಕೇಡ್ ಹಾಕಿ, ಭದ್ರತೆ ನೀಡಲಾಗಿದೆ.
ಎಲ್ಲಾ ಸ್ಟಾರ್ ನಟರನ್ನು ಹಿಂದಿಕ್ಕಿದ್ದ ಡಾ.ರಾಜ್; ಯಾರಿಗೆಷ್ಟು ವೋಟ್?
ಬೆಳಗ್ಗೆ ರಾಘವೇಂದ್ರ ರಾಜ್‌ಕುಮಾರ್ ಕುಟುಂಬ ಪೂಜೆ ಸಲ್ಲಿಸಿದ್ದಾರೆ. ಆನಂತರ ಶಿವರಾಜ್‌ಕುಮಾರ್ ಕುಟುಂಬ ಪೂಜೆ ಮಾಡಿದ್ದಾರೆ. 'ಅಪ್ಪಾಜಿ ಅಗಲಿ 15 ವರ್ಷ ಆಯ್ತು. ಕಳೆದ ವರ್ಷವೂ ಕೊರೋನಾ ಇತ್ತು. ಈ ವರ್ಷವೂ ಅದೇ ತರ ಆಗಿದೆ. ಹೀಗಾಗಿ ಆಡಂಬರ ಬೇಡ ಎಂದು ಸರಳವಾಗಿ ಪೂಜೆ ಮಾಡಬೇಕು ಅಂತ ನಿರ್ಧಾರ ಮಾಡಲಾಗಿತ್ತು. ಅಭಿಮಾನಿಗಳು ಹುಷಾರಾಗಿರಬೇಕು. ಎಲ್ಲರಿಗೂ ಕುಟುಂಬವಿದೆ. ಮಾಸ್ಕ್ ಹಾಕಿಕೊಂಡು ಓಡಾಡೋದನ್ನ ಮರಿಬೇಡಿ. ಮೈ ಮರೆತು, ಮತ್ತೆ ಸಂಕಷ್ಟದ ದಿನಗಳನ್ನ ಎದುರಿಸೋದು ಬೇಡ. ಯುಗಾದಿ ಮೊದಲು ಅಪ್ಪಾಜಿ ಪೂಜೆ ಮಾಡೋ ದಿನ ಬಂದಿದೆ. ಯುಗಾದಿ ಹಬ್ಬವನ್ನು ನಾವು ಸಡಗರದಿಂದಲೇ ಆಚರಿಸುತ್ತೇವೆ. ಇಡೀ ಕುಟುಂಬ ಈ ಹಬ್ಬದ ದಿನ ಸೇರುತ್ತೇವೆ. ಶಿವಪ್ಪ ಸಿನಿಮಾದ ಟೈಟಲ್ ಬದಲಾಗಿದೆ. ಈ ಸಿನಿಮಾಗೆ ಹೊಸ ಟೈಟಲ್ ಹಬ್ಬದ ದಿನ ಅನೌನ್ಸ್ ಮಾಡುತ್ತೇವೆ,' ಎಂದು ಶಿವರಾಜ್‌ಕುಮಾರ್ ಮಾತನಾಡಿದ್ದಾರೆ.
ಆಡಿಸಿ ನೋಡು, ಬೀಳಿಸಿ ನೋಡು, ಉರುಳಿ ಹೋಗದ ಡಾ. ರಾಜ್ ಪ್ರೀತಿಯ 'ಕಸ್ತೂರಿ ನಿವಾಸ'ಕ್ಕೆ 50 ವರ್ಷ!
'15 ವರ್ಷ ಕಳೆದೋಯ್ತು ಅಪ್ಪಾಜಿ ಅವರಿಲ್ಲ, ಅನ್ನೋ ಫೀಲಿಂಗ್ ಸಹ ನಮಗೆ ಬಂದಿಲ್ಲ. ಅವರು ನಮಗೆ ಬಿಟ್ಟು ಹೋದ ಪ್ರೀತಿ, ವಿಶ್ವಾಸ ಕೊಟ್ಟೋಗಿರೋ ಭಾವನೆಗಳಿಗೆ ತುಂಬಾ ಹೆಮ್ಮೆ ಪಡುತ್ತೇವೆ. ಲಾಕ್‌ಡೌನ್ ಯಾವ ರೀತಿ ಆಗುತ್ತೆ, ಇಲ್ಲವೋ ಅನ್ನೋದು ನನಗೆ ಗೊತ್ತಿಲ್ಲ. ನಮಗೂ ನ್ಯೂಸ್ ಮಾಧ್ಯಮದ ಮೂಲಕವೇ ಗೊತ್ತಾಗುತ್ತಿದೆ. ವೈರಸ್ ವಿರುದ್ದ ಹೋರಾಟಕ್ಕೆ ಕೆಲವು ರೂಲ್ಸ್ ಫಾಲೋ ಮಾಡಬೇಕಾಗುತ್ತೆ. ಹೋರಾಡಿ ಮುಂದೆ ಬರಬೇಕು ಅನ್ನೋ ದೊಡ್ಡ ಚಾಲೆಂಜ್ ನಮ್ ಮುಂದೆ ಇರಬೇಕು. ನಮ್ಮ ಸುರಕ್ಷತೆಯಿಂದ ನಾವಿರೋದು ತುಂಬಾ ಮುಖ್ಯ. ಲಾಕ್‌ಡೌನ್ ಆಗೋಲ್ಲ ಅನ್ಸತ್ತೆ. ಆಗದೇ ಇರೋತರ ನಾವು ನೋಡ್ಕೋಬೇಕು. ಕನ್ನಡ ಇಂಡಸ್ಟ್ರಿಗೆ ಆಗಿರೋ ಲಾಸ್ ಬಗ್ಗೆ ಬೇರ ಬೇರೆ ಇನ್‌ಫಾರ್ಮ್ಮೇಷನ್ ಬರುತ್ತೆ. ಎಲ್ಲಾ ಸಿನಿಮಾಗಳು ಚೆನ್ನಾಗಿ ನಡೀಬೇಕು, ಅಂದ್ರೆ 100 % ತುಂಬಾ ಮುಖ್ಯ ಆಗುತ್ತೆ. ಯುವರತ್ನ ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್‌ಗೆ ಧನ್ಯವಾದಗಳನ್ನು ಹೇಳುತ್ತೀನಿ,' ಎಂದು ಪುನೀತ್ ರಾಜ್‌ಕುಮಾರ್, ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸುವ ವೇಳೆ ಮಾಧ್ಯಮದ ಜೊತೆ ಮಾತನಾಡಿದರು.