HM Mahesh Passed Away: ಸಂಗೀತಾ ಕ್ಯಾಸೆಟ್‌ ಮಾಂತ್ರಿಕ ಎಚ್‌.ಎಂ. ಮಹೇಶ್‌ ಇನ್ನಿಲ್ಲ

By Kannadaprabha News  |  First Published Mar 5, 2022, 7:48 AM IST

*  ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಮಹೇಶ್‌ 
*  ಕ್ಯಾಸೆಟ್‌ ಜಗತ್ತಿಗೆ ಮಹೇಶ್‌ ಕೊಡುಗೆ ಅಪಾರ
*  ಮಹೇಶ್‌ ನಿರ್ಗಮನದಿಂದ ಸಂಗೀತಲೋಕಕ್ಕೆ ಅಪಾರ ನಷ್ಟ


ಬೆಂಗಳೂರು(ಮಾ.05): ಗ್ರಾಮಾಫೋನ್‌ ಮತ್ತು ಕ್ಯಾಸೆಟ್‌ ಲೋಕದ ದೊರೆ ಎಂದೇ ಹೆಸರಾಗಿದ್ದ ಮಾಸ್ಟರ್‌ ರೆಕಾರ್ಡಿಂಗ್‌ ಸಂಸ್ಥೆಯ(Master Recording Company) ಸಂಸ್ಥಾಪಕ ಎಚ್‌.ಎಂ.ಮಹೇಶ್‌(72)(HM Mahesh)ನಿಧನರಾಗಿದ್ದಾರೆ. ಹಲವು ತಿಂಗಳಿಂದ ಅವರು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು.

1979ರಲ್ಲಿ ತನ್ನ 35ರ ಹರೆಯದಲ್ಲಿ ಸಂಗೀತಾ ಕ್ಯಾಸೆಟ್‌ ಸಂಸ್ಥೆ(Sangeeta Cassette Company) ಆರಂಭಿಸಿ ಕನ್ನಡ(Kannada) ಚಿತ್ರಗೀತೆ ಮತ್ತು ಭಕ್ತಿಗೀತೆಗಳನ್ನು ಮನೆಮನೆಗೆ ತಲುಪಿಸಿದ ಎಚ್‌ಎಂ ಮಹೇಶ್‌, ಕನ್ನಡದ ಗಾಯನ ಪ್ರತಿಭೆಗಳನ್ನು ಸಂಗೀತ ಜಗತ್ತಿಗೆ ಪರಿಚಯಿಸಿದವರು. ಕಾಸರಗೋಡಿನಲ್ಲಿ ಹುಟ್ಟಿದ ಅವರು ಮಂಗಳೂರಿನ(Maangaluru) ಸೈಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ಪದವಿ ಪಡೆದಿದ್ದರು.

Tap to resize

Latest Videos

Shane Warne Dies ಸ್ಪಿನ್ ದಿಗ್ಗಜ ಶೇನ್ ವಾರ್ನ್ ಇನ್ನಿಲ್ಲ

ಎಲ್ಲರ ಮೆಚ್ಚಿನ ‘ಗಜಮುಖನೆ ಗಣಪತಿಯೆ ನಿನಗೆ ವಂದನೆ’ ಹಾಡನ್ನು ಪಿ.ಬಿ.ಶ್ರೀನಿವಾಸ್‌ ಮತ್ತು ಎಸ್‌.ಜಾನಕಿಯವರಿಂದ ಹಾಡಿಸಿದವರು ಮಹೇಶ್‌. ರಾಜ್‌ಕುಮಾರ್‌(Dr Rajkumar) ಅಭಿನಯದ ಸಂಪತ್ತಿಗೆ ಸವಾಲ್‌ ಚಿತ್ರದಲ್ಲಿ ರಾಜ್‌ಕುಮಾರ್‌ ಹಾಡಿದ ಯಾರೇ ಕೂಗಾಡಲಿ ಹಾಡಿನ ಕ್ಯಾಸೆಟ್ಟಿನಿಂದ ಅಪಾರ ಜನಪ್ರಿಯತೆ ಗಳಿಸಿದ ಸಂಗೀತಾ ಕ್ಯಾಸೆಟ್‌, ಮುಂದೆ ರಾಜ್‌ಕುಮಾರ್‌ ಕಂಠಸಿರಿಯಲ್ಲಿ ಮಂತ್ರಾಲಯಕೆ ಹೋಗೋಣ, ಗುರುವಾರ ಬಂತಮ್ಮ ಮುಂತಾದ ಭಕ್ತಿಗೀತೆಗಳ ಧ್ವನಿಸುರುಳಿಯನ್ನು ಹೊರತಂದಿತು.

ಕ್ಯಾಸೆಟ್‌ ಜಗತ್ತಿಗೆ ಮಹೇಶ್‌ ಅವರ ಕೊಡುಗೆ ಅಪಾರವಾದದ್ದು. ಅವರು ಕನ್ನಡದ ಪ್ರತಿಭೆಗಳನ್ನು ಜಗತ್ತಿಗೆ ಪರಿಚಯಿಸಿದವರು. ಹಾಗೆಯೇ ಕನ್ನಡ ಭಕ್ತಿಗೀತೆ, ಜನಪದ ಗೀತೆ ಮತ್ತು ಭಾವಗೀತೆಗಳನ್ನು ಜನಪ್ರಿಯಗೊಳಿಸಿದವರು. ಅವರ ನಿರ್ಗಮನದಿಂದ ಸಂಗೀತಲೋಕಕ್ಕೆ ಅಪಾರ ನಷ್ಟವಾಗಿದೆ ಎಂದು ಲಹರಿ ಸಂಸ್ಥೆ ವೇಲು ಸಂತಾಪ(Condolences) ವ್ಯಕ್ತಪಡಿಸಿದ್ದಾರೆ.
 

click me!