
ನಿರ್ದೇಶಕ ರಾಘವ್ ಸೂರ್ಯ (Raghva Surya) ನಿರ್ದೇಶನ ಮಾಡುತ್ತಿರುವ ಕಂಟ್ರಿಮೇಡ್ (Country Made) ಸಿನಿಮಾದ ಮುಹೂರ್ತ ಬೆಂಗಳೂರಿನ ದೇವಸ್ಥಾನದಲ್ಲಿ ನಡೆಯಿತು. ಮುಹೂರ್ತದಲ್ಲಿ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದ ದುನಿಯಾ ವಿಜಯ್ (Duniya Vijay) ಇಡೀ ಚಿತ್ರತಂಡದ ಬಗ್ಗೆ ಮತ್ತು ಚಿತ್ರರಂಗಕ್ಕೆ ಕಾಲಿಡುತ್ತಿರುವ ಹೊಸ ಪ್ರತಿಭೆಗಳ ಬಗ್ಗೆ ಮಾತನಾಡಿದ್ದಾರೆ.
ಕಂಟ್ರಿಮೇಡ್ ಸಿನಿಮಾದಲ್ಲಿ ಗಂಟುಮೂಟೆ (Gantumoote) ಖ್ಯಾತಿಯ ನಿಶ್ಚಿತ್ (Nishvit) ಕೊರಾಡಿ ನಾಯಕನಾಗಿ ಮತ್ತು ಲವ್ ಮಾಕ್ಟೇಲ್ 2 (Love mocktail 2) ಖ್ಯಾತಿಯ ರೇಚಲ್ ಡೇವಿಡ್ (Rachel David) ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ನಿರ್ದೇಶಕ ರಾಘವ್ ಮೂಲತಃ ದಾವಣಗೆರೆಯವರಾಗಿದ್ದು, ಇದೇ ಮೊದಲ ಬಾರಿ ನಿರ್ದೇಶನ ಮಾಡುತ್ತಿದ್ದಾರೆ ಎನ್ನಲಾಗಿದೆ. 'ರವಿ ಮತ್ತು ರಘು ನಮಗೆ ವೈಯಕ್ತಿಕವಾಗಿ ಮಾಡಿರುವ ಸಹಾಯವನ್ನು ಎಂದೂ ಮರೆಯುವುದಕ್ಕೆ ಆಗೋಲ್ಲ. ರಾಘವ್ ದಾವಣಗೆರೆಯವರು. ಚಿತ್ರರಂಗಕ್ಕೆ ಕಾಲಿಟ್ಟಿರುವ ಯುವ ಪ್ರತಿಭೆ. ಎಂಜೀನಿಯರಿಂಗ್ (Engineering) ಮುಗಿಸಿಕೊಂಡು ಬಂದಿದ್ದಾರೆ. ನಮ್ಮಲ್ಲಿ ವಿದ್ಯಾವಂತರು ನಿರ್ದೇಶಕರು ಸಿನಿಮಾ ಮಾಡಲು ಮುಂದೆ ಬರುವುದು ಖುಷಿಯ ವಿಚಾರ. ಅವರು ಅವರ ಮನೆತನದವರು ತುಂಬಾ ಒಳ್ಳೆಯವರು,' ಎಂದು ದುನಿಯಾ ವಿಜಯ್ ಮಾತನಾಡಿದ್ದಾರೆ.
'ಆಗಿನಿಂದಲೂ ಸಿನಿಮಾ ಮಾಡಬೇಕು ಎಂಬುದು ರಘು ಆಸೆ. ತುಂಬಾ ಒಳ್ಳೆಯ ಬೆಳವಣಿಗೆ ಇದೆ. ಕಷ್ಟಪಟ್ಟು ಒಳ್ಳೆಯ ಸ್ಥಾನ ಸಿಕ್ಕಿದೆ. ನಿನಗೆ ಅದನ್ನು ಉಳಿಸಿಕೊಂಡು ಹೋಗು ಅಂತ ಹೇಳಿದ್ದೀನಿ. ಕಂಟ್ರಿಮೇಡ್ ತಂಡದ ಹೀರೋನ ಟಾಮ್ ಆ್ಯಂಡ್ ಜರಿ ಸಿನಿಮಾದಲ್ಲಿ ನೋಡಿದ್ದೀನಿ. ತುಂಬಾನೇ ಮುದ್ದಾಗಿದ್ದಾನೆ. ಈಗ ಚಿತ್ರರಂಗಕ್ಕೆ ಬರುತ್ತಿರುವವರು ತುಂಬಾನೇ ಮುದ್ದಾಗಿದ್ದಾರೆ. ಲವ್ ಮಾಕ್ಟೇಲ್ ನಟಿಯನ್ನೂ ನೋಡಿದ್ದೀನಿ. ಇವರ ಲವ್ ಎಲ್ಲಾ ಮಾಕ್ಟೇಲ್ ಆಗಿಬಿಟ್ಟಿದೆ. ಈಗ ಲವ್ ಮಾಕ್ಟೇಲ್ ಸಿನಿಮಾ ಚೆನ್ನಾಗಿ ಆಗ್ತಿದೆ. ಅದರಲ್ಲಿ ಮಾಡಿರುವ ಪ್ರತಿಭೆ ಇವರು. ಖಂಡಿತಾ ಈ ಸಿನಿಮಾದಲ್ಲೂ ಚೆನ್ನಾಗಿ ಅಭಿನಯಿಸುತ್ತಾರೆ,' ಎಂದು ವಿಜಯ್ ಹೇಳಿದ್ದಾರೆ.
'ಎಲ್ಲರೂ ಬೆಳೆಯಬೇಕು. ನಾನು ರಘುಗೆ ಒಳ್ಳೆಯದಾಗಲಿ ಎಂದು ಬಯಸುವೆ. ಅವನು ತುಂಬಾ ಶ್ರದ್ಧೆ ಇರುವಂಥ ಹುಡುಗ ಪ್ರಮಾಣಿಕವಾಗಿ ಕೆಲಸ ಮಾಡುತ್ತಾನೆ. ಸಿನಿಮಾ ಅನ್ನೋದೆ ದೊಡ್ಡ ಕ್ಷೇತ್ರ. ನಿರ್ದೇಶನ ಅಂದ್ರೆನೇ ಭಯ ಹುಟ್ಟಿಸುವ ಕೆಲಸ ಅದು. ಅದಕ್ಕೆ ಯಾರೆ ನಿರ್ದೇಶನ (Direction) ಮಾಡಿದ್ದೀನಿ ಅಂದರೂ ಒಳ್ಳೆಯದು ಆಗಲಿ ಎಂದೇ ಶುಭ ಹಾಹೈಸುತ್ತೀನಿ,' ಎಂದಿದ್ದಾರೆ ವಿಜಯ್.
'ನನ್ನ ಸಿನಿಮಾ ನಿರ್ದೇಶನ ಬಗ್ಗೆ ಸಮಯ ಬಂದಾಗ ಮಾತನಾಡುತ್ತೇನೆ. ಮಾಧ್ಯಮ ಸ್ನೇಹಿತರು ನನಗೆ ಕೊಡುತ್ತಿರುವ ಪ್ರೀತಿ ಮತ್ತು ವಿಶ್ವಾಸಕ್ಕೆ ನಾನು ಫಿದಾ ಆಗಿದ್ದೀನಿ. ನಿಮ್ಮ ಸಪೋರ್ಟ್ ಮರೆಯುವುದಕ್ಕೇ ಆಗೋಲ್ಲ. ಟಾಲಿವುಡ್‌ಗೆ (Tollywood) ಹೋಗಿ ಬಂದಿದ್ದೀನಿ ಅಲ್ಲಿನ ಅನುಭವ ಚೆನ್ನಾಗಿದೆ. ಮತ್ತೆ ಎರಡು ಮೂರು ದಿನಗಳಲ್ಲಿ ಹೋಗುವೆ. ಯುವಕರು ಸಿನಿಮಾ ಚೆನ್ನಾಗಿ ಮಾಡುತ್ತಿದ್ದಾರೆ. ಲವ್ ಮಾಕ್ಟೇಲ್ 2 ಡಾರ್ಲಿಂಗ್ ಕೃಷ್ಣ ಅವರಿಗೂ ಒಳ್ಳೆಯದು ಆಗಲಿ. ನಾನು ಸಿನಿಮಾವನ್ನು ಇನ್ನೂ ನೋಡಿಲ್ಲ. ಬೇಗ ನೋಡ್ತೀನಿ' ಎಂದು ವಿಜಯ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.