Ashwath Narayan Passes Away: ಕನ್ನಡ ಚಿತ್ರರಂಗದ ಹಿರಿಯ ನಟ ಅಶ್ವತ್ಥ ನಾರಾಯಣ ನಿಧನ

By Kannadaprabha NewsFirst Published Feb 7, 2022, 4:32 AM IST
Highlights

ಕನ್ನಡ ಚಿತ್ರರಂಗದ ಹಿರಿಯ ನಟ ಅಶ್ವತ್ಥನಾರಾಯಣ (82) ಅವರು ಭಾನುವಾರ ಬೆಳಗ್ಗೆ ಕೊನೆ ಉಸಿರೆಳೆದಿದ್ದಾರೆ. ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆ. 

ಬೆಂಗಳೂರು (ಫೆ.07): ಕನ್ನಡ ಚಿತ್ರರಂಗದ (Sandalwood) ಹಿರಿಯ ನಟ ಅಶ್ವತ್ಥನಾರಾಯಣ (82) (Ashwath Narayan) ಅವರು ಭಾನುವಾರ ಬೆಳಗ್ಗೆ ಕೊನೆ ಉಸಿರೆಳೆದಿದ್ದಾರೆ. ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆ. ಮೃತರು ಮೂವರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. 

ಬೆಂಗಳೂರಿನ (Bengaluru) ಶಿವನಹಳ್ಳಿಯಲ್ಲಿ ವಾಸವಿದ್ದ ಅಶ್ವತ್ಥನಾರಾಯಣ ಅವರು ಮಕ್ಕಳು ತಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಇತ್ತೀಚೆಗೆ ಪೊಲೀಸ್‌ ಠಾಣೆಯ ಮೆಟ್ಟಿಲು ಹತ್ತುವ ಮೂಲಕ ಸುದ್ದಿ ಆಗಿದ್ದರು. ಅವರು ಹನ್ನೊಂದನೇ ವಯಸ್ಸಿಗೆ ರಂಗಭೂಮಿಗೆ ಬಂದವರು. ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು 'ವಾಲ್ಮೀಕಿ' (Valmiki) ಚಿತ್ರ. 'ಚಂದವಳ್ಳಿ ತೋಟ' (Chandavalli Thota) ಚಿತ್ರದ ನಂತರ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದುಕೊಂಡು 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ 600ಕ್ಕೂ ಹೆಚ್ಚು ನಾಟಕಗಳಲ್ಲಿ ಬಣ್ಣ ಹಚ್ಚಿದ್ದಾರೆ.

Latest Videos

Actor Ashwath Narayan: ಅಶ್ವಥ್ ನಾರಾಯಣ್ ದಂಪತಿ ಜೀವನಕ್ಕೆ ಆಸರೆಯಾದ ಸುವರ್ಣ ನ್ಯೂಸ್

ಅದರಲ್ಲಿ ಬೇಡರ ನಾಯಕನ ಪಾತ್ರ ಹಾಗೂ 'ಕುಲವಧು' (Kulavadhu) ಚಿತ್ರದಲ್ಲಿ ಮಾಡಿದ್ದ ದಲ್ಲಾಳಿ ಬ್ರಾಹ್ಮಣ ಪಾತ್ರ ಅವರಿಗೆ ಹೆಸರು ತಂದಿತು. ಈ ಚಿತ್ರಗಳಲ್ಲಿ ಅವರ ಪಾತ್ರ ನೋಡಿದ ಡಾ.ರಾಜ್‌ಕುಮಾರ್‌ (Dr.Rajkumar) ಅವರೇ ಮುಂದೆ 'ಚಂದವಳ್ಳಿ ತೋಟ' ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದರು. 'ಚಂದವಳ್ಳಿ ತೋಟ' ಚಿತ್ರದ ನಂತರ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದುಕೊಂಡು 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 

ಅಲ್ಲದೆ 600ಕ್ಕೂ ಹೆಚ್ಚು ನಾಟಕಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅರ್ಚಕ, ಕುತಂತ್ರಿ ಬ್ರಾಹ್ಮಣ ಪಾತ್ರ, ತಾತ, ಮಕ್ಕಳಿಂದ ಶೋಷಣೆಗೊಳಗಾಗುವ ತಂದೆ... ಹೀಗೆ ಹಲವು ರೀತಿಯ ಪೋಷಕ ಪಾತ್ರಗಳಿಗೆ ಅಶ್ವತ್ಥನಾರಾಯಣ ಅವರನ್ನೇ ಆಯ್ಕೆ ಮಾಡಿಕೊಳ್ಳುವ ಮಟ್ಟಕ್ಕೆ ಜನಪ್ರಿಯತೆ ಪಡೆದುಕೊಂಡಿದ್ದರು. ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.

click me!