
ಜಿಮ್ ರವಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ, ಅಪೂರ್ವ ನಾಯಕಿಯಾಗಿರುವ ‘ಪುರುಷೋತ್ತಮ’ ಚಿತ್ರದ ಆಡಿಯೋ ಬಿಡುಗಡೆ
ಇತ್ತೀಚೆಗೆ ನಡೆಯಿತು. ನಟ ಶರಣ್, ಅಭಿಮಾನಿ ವೆಂಕಟೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
‘ಪತಿ, ಪತ್ನಿಯ ಮುನಿಸು ಇಬ್ಬರು ಬೇರೆ ಬೇರೆ ಆಗುವ ಹಂತಕ್ಕೆ ಹೋದಾಗ ಏನಾಗುತ್ತದೆ ಎಂಬುದನ್ನು ಚಿತ್ರದಲ್ಲಿ ನೋಡಬಹುದು. ಹಾಸ್ಯ,
ಭಾವುಕತೆ ಹಾಗೂ ಮನರಂಜನೆ ಇವು ಚಿತ್ರದ ಪ್ರಧಾನ ಅಂಶಗಳು. ಜಿಮ್ ರವಿ ತುಂಬಾ ಚೆನ್ನಾಗಿ ನಟಿಸಿದ್ದಾರೆ’ ಎಂದು ನಿರ್ದೇಶಕ
ಅಮರನಾಥ್ ಹೇಳಿಕೊಂಡರು.
ಚೆಲುವನಾರಾಯಣ ಸ್ವಾಮಿ ದರ್ಶನ ಪಡೆದ ನಟಿ ರಚಿತಾ ರಾಮ್!
ಶರಣ್, ‘ನಾನು ಚಿತ್ರರಂಗಕ್ಕೆ ಬಂದು 100ನೇ ಚಿತ್ರಕ್ಕೆ ಹೀರೋ ಆದೆ. ಜಿಮ್ ರವಿ 150ನೇ ಚಿತ್ರಕ್ಕೆ ಹೀರೋ ಆಗಿ ನನ್ನ ದಾಖಲೆ ಮುರಿದಿದ್ದಾರೆ. ನಾನು ರವಿ ಜಿಮ್‌ನಲ್ಲಿ ತರಬೇತಿ ಪಡೆದುಕೊಂಡಿದ್ದೇನೆ. ಶಾಲೆಯಲ್ಲಿ ಅವರು ಶಿಸ್ತಿನ ಮಾಸ್ಟರ್. ಪುರುಷೋತ್ತಮ ಸಿನಿಮಾ ಯಶಸ್ಸು ಕಾಣಲಿ’ ಎಂದರು. ಈ ಚಿತ್ರದ ನಿರ್ಮಾಣದಲ್ಲಿ ಬೆನ್ನೆಲುಬಾಗಿ ನಿಂತವರು ಉದ್ಯಮಿ ಮೈಸೂರಿನ ವಿಜಯ್ ರಾಮೇಗೌಡ.
ಜಿಮ್ ರವಿ ಹೆಸರಿನ ಯೂಟ್ಯೂಬ್ ಚಾನಲ್‌ನಲ್ಲಿ ಹಾಡುಗಳು ಬಿಡುಗಡೆ ಆಗಿವೆ. ನಾಯಕಿ ಅಪೂರ್ವ, ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್, ವಕೀಲೆ ಪಾತ್ರ ಮಾಡಿರುವ ನಿವೇದಿತಾ, ನೃತ್ಯ ನಿರ್ದೇಶಕ ಕಲೈ ಚಿತ್ರದ ಕುರಿತು ಹೇಳಿಕೊಂಡರು. ಒಗ್ಗರಣೆ ಡಬ್ಬಿ ಮುರಳಿ, ಕಾರ್ಪೋರೇಟರ್ ಮೋಹನ್ ಕುಮಾರ್ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಸಾಕ್ಷಿ ಆದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.