ಸಿನಿಮಾರಂಗದಲ್ಲಿ ನಿರ್ಮಾಪಕರಾಗಿ ಕ್ರಿಯಾಶೀಲರಾಗಿದ್ದ ರಾಜ್ಯದ ಪ್ರತಿಷ್ಠಿತ ರಾಜಕಾರಣಿಯೊಬ್ಬರು ರಾಧಿಕಾ ಅಪ್ಪ ದೇವರಾಜ್ ಸೇರಿದಂತೆ ಇಡೀ ಫ್ಯಾಮಿಲಿಗೆ ಪರಿಚಯವಾಗಿದ್ದರು. ಬಳಿಕ ಹಲವು ವರ್ಷಗಳಲ್ಲಿ ರಾಧಿಕಾ ಅವರೊಟ್ಟಿಗೆ ಮದುವೆಯೂ ಆದರು.
ಸ್ಯಾಂಡಲ್‌ವುಡ್ ಸ್ವೀಟಿ ಖ್ಯಾತಿಯ ನಟಿ ರಾಧಿಕಾ ಕುಮಾರಸ್ವಾಮಿಯವರ ಪರ್ಸನಲ್ ಲೈಫ್ ಹಾಗೂ ಪ್ರೊಪೆಷನಲ್ ಲೈಫ್ ಎರಡೂ ತುಂಬಾ ಕುತೂಹಲಕಾರಿಯಾಗಿದೆ. ತಮ್ಮ 14ನೇ ವಯಸ್ಸಿಗೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ರಾಧಿಕಾ ಅವರು ಎನ್ನಲಾಗಿದೆ. ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ತುಳು ಮೂಲದ ರತನ್ ಕುಮಾರ್ ಎಂಬವರೊಂದಿಗೆ ರಾಧಿಕಾ ಮದುವೆಯಾಗಿತ್ತಂತೆ. 26 ನವೆಂಬರ್ 2000ದಲ್ಲಿ ಮಂಗಳೂರಿನ ದೇವಸ್ಥಾನದಲ್ಲಿ ಮದುವೆಯಾಗಿದ್ದರು ಎನ್ನಲಾಗಿದೆ. ಆದರೆ, ಮದುವೆ ಬಳಿಕ ಒಂದೂವರೆ ವರ್ಷದಲ್ಲೇ ಗಂಡ ಅಪಘಾತದಲ್ಲಿ ನಿಧನರಾದರಂತೆ.
ಅತ್ತೆ ಮನೆಯಲ್ಲಿ ಬಹಳಷ್ಟು ಸಂಕಟ, ನೋವು ಹಾಗೂ ಹಿಂಸೆಯನ್ನು ಅನುಭವಿಸಿದ ರಾಧಿಕಾ ಜೀವನದಲ್ಲಿ ಏನಾದ್ರೂ ಸಾಧನೆ ಮಾಡಬೇಕು ಎಂದು ಯೋಚನೆ ಮಾಡಿದರಂತೆ. ಅದರಂತೆ ತಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿದ ಅವರು ಸಿನಿಮಾರಂಗದ ಕಡೆಗೆ ಮುಖ ಮಾಡಿದರಂತೆ. ಅವರ ಮೊದಲ ಸಿನಿಮಾ ಸೃಜನ್ ಲೋಕೇಶ್ ನಾಯಕತ್ವದ 'ನೀಲ ಮೇಘ ಶ್ಯಾಮ'. ಆದರೆ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ನಟ ವಿಜಯರಾಘವೇಂದ್ರ ಜತೆಗಿನ 'ನಿನಗಾಗಿ' ಸಿನಿಮಾ. ಈ ಸಿನಿಮಾದ ಬಳಿಕ ನಟಿ ರಾಧಿಕಾ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಮುಂದುವರೆದರು.
ಕೊನೆಗೂ ಅಕ್ಕನಿಗೆ ಒಳ್ಳೇ ಜೋಡಿ ಸಿಕ್ತು; ಜಸ್ಕರಣ್-ಅನುಶ್ರೀ ಫೋಟೋಗೆ ಬಂದೇಬಿಡ್ತು ಕಾಮೆಂಟ್!
ಸಿನಿಮಾರಂಗದಲ್ಲಿ ನಿರ್ಮಾಪಕರಾಗಿ ಕ್ರಿಯಾಶೀಲರಾಗಿದ್ದ ರಾಜ್ಯದ ಪ್ರತಿಷ್ಠಿತ ರಾಜಕಾರಣಿಯೊಬ್ಬರು ರಾಧಿಕಾ ಅಪ್ಪ ದೇವರಾಜ್ ಸೇರಿದಂತೆ ಇಡೀ ಫ್ಯಾಮಿಲಿಗೆ ಪರಿಚಯವಾಗಿದ್ದರು. ಬಳಿಕ ಹಲವು ವರ್ಷಗಳಲ್ಲಿ ರಾಧಿಕಾ ಅವರೊಟ್ಟಿಗೆ ಮದುವೆಯೂ ಆದರು. ಆದರೆ, 2010ರವರೆಗೆ ಎಲ್ಲೂ ತಮ್ಮಿಬ್ಬರ ಮದುವೆ ಬಗ್ಗೆ ಅಧಿಕೃತವಾಗಿ ರಾಧಿಕಾ ಆಗಲೀ ಆ ರಾಜಕಾರಣಿಯಾಗಲಿ ಹೇಳಿರಲಿಲ್ಲ. ಬಳಿಕ ನಟಿ ರಾಧಿಕಾ ಅವರೇ ಬಹಿರಂಗವಾಗಿ ತಾವು 2006ರಲ್ಲಿ ರಾಜಕೀಯ ಮುಖಂಡನನ್ನು ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮಿಬ್ಬರ ದಾಂಪತ್ಯದ ಫಲವಾಗಿ ನಮಗೆ 'ಶಮಿಕಾ' ಎಂಬ ಮಗಳಿದ್ದಾಳೆ ಎಂದೂ ಸಹ ರಾಧಿಕಾ ಹೇಳಿಕೊಂಡಿದ್ದಾರೆ.
ನೋಡುಗರಿಗೆ, ಕೇಳುಗರಿಗೆ ಅಸಹ್ಯ ಅನಿಸಬಾರದು; ಹಾಗೆ ಮಾತನಾಡಬೇಕು: ನಟ ಪ್ರಕಾಶ್ ರಾಜ್
ನಟಿ ರಾಧಿಕಾ ಅವರು ನಟ ಶಿವಣ್ಣರ ಜತೆ 'ಅಣ್ಣ ತಂಗಿ' ಹಾಗೂ 'ತವರಿಗೆ ಬಾ ತಂಗಿ' ಸಿನಿಮಾಗಳಲ್ಲಿ ನಟಿಸಿದ್ದು ಅವೆರಡೂ ಚಿತ್ರಗಳು ಸೂಪರ್ ಹಿಟ್ ಆಗಿವೆ. ನಟ ದರ್ಶನ್ ಹಾಗು ರಿಯಲ್ ಸ್ಟಾರ್ ಉಪೇಂದ್ರ ಜತೆ 'ಅನಾಥರು', ರವಿಚಂದ್ರನ್ ಜತೆಗೆ 'ಹಠವಾದಿ' ಹಾಗೂ 'ಒಡಹುಟ್ಟಿದವಳು' ಚಿತ್ರಗಳಲ್ಲಿ ರಾಧಿಕಾ ನಟಿಸಿದ್ದಾರೆ. ತೆಲುಗು ಚಿತ್ರಗಳಲ್ಲಿ ಸಹ ನಟಿ ರಾಧಿಕಾ ನಟಿಸಿದ್ದು, ಈಗಲೂ ನಟಿಯಾಗಿ-ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ಅವರು ಸಕ್ರಿಯರಾಗಿದ್ದಾರೆ. ಒಟ್ಟಿನಲ್ಲಿ, ಸಿನಿಮಾರಂಗದಲ್ಲಿ ಯಾವುದೇ ಕಾಂಟ್ರೋವರ್ಸಿಗೂ ಒಳಗಾಗದ ನಟಿ ರಾಧಿಕಾ ವೈಯಕ್ತಿಕ ಜೀವನದ ಮೂಲಕ ಸಾಕಷ್ಟು ಸುದ್ದಿಯಾಗಿದ್ದರು.
ಕರ್ನಾಟಕದಲ್ಲಿದ್ದ ಜಮೀನು ಕಳೆದುಕೊಂಡ್ವಿ, ಚೆನ್ನೈನಲ್ಲಿ ಚಿಕ್ಕ ಮನೆಯಲ್ಲಿದ್ವಿ; ಎಸ್‌ಎಸ್ ರಾಜಮೌಳಿ