
ಸ್ಯಾಂಡಲ್‌ವುಡ್‌ನ(Sandalwood) ಯುವರಾಜ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರ ಬಹು ನಿರೀಕ್ಷಿತ 'ರೈಡರ್' (Rider) ಚಿತ್ರದ ಮೊದಲ ಹಾಡು ಯೂಟ್ಯೂಬ್‌ನಲ್ಲಿ (Youtube) ಬಿಡುಡೆಯಾಗಿದೆ. ಈ ಹಾಡಿಗೆ ಈಗಾಗಲೇ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿದೆ (Trending). ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ (Arjun Janya) ಸಂಯೋಜಿಸಿರುವ ಈ ಹಾಡಿನಲ್ಲಿ ನಿಖಿಲ್ ಸ್ಟೈಲಿಶ್ ಲುಕ್ನಲ್ಲಿ ನಟಿ ಕಾಶ್ಮೀರಿ ಪರ್ದೇಸಿ ಜೊತೆ ಬೊಂಬಾಟ್ ಸ್ಟೆಪ್ಸ್ ಹಾಕಿದ್ದು, 20 ಲಕ್ಷಕ್ಕೂ ಹೆಚ್ಚು ಸಿನಿರಸಿಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
'ಸೀತಾರಾಮ ಕಲ್ಯಾಣ' (Seetharama Kalyana) ಚಿತ್ರದ ಮೂಲಕ ಲವರ್ ಬಾಯ್ ಆಗಿ ಸ್ಯಾಂಡಲ್ವುಡ್ ಪ್ರೇಕ್ಷಕರನ್ನು ರಂಜಿಸಿದ್ದ ನಿಖಿಲ್ ಕುಮಾರಸ್ವಾಮಿ 'ರೈಡರ್' ಚಿತ್ರದಲ್ಲಿ ಬಾಸ್ಕೆಟ್ ಬಾಲ್ ಪ್ಲೇಯರ್ (Basketball Player) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ ಕುಮಾರ್ ಕೊಂಡ (Vijay Kumar Konda) ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ನಿಖಿಲ್‌ಗೆ ನಾಯಕಿಯಾಗಿ ಯುವ ನಟಿ ಕಾಶ್ಮೀರಿ ಪರ್ದೇಸಿ (Kashmira Pardeshi) ನಟಿಸಿದ್ದು, ಮತ್ತೊಬ್ಬ ನಾಯಕಿಯಾಗಿ ಅನುಷಾ ರೈ (Anusha Rai) ಅಭಿನಯಿಸಿದ್ದಾರೆ. ರಿಲೀಸ್ ಆಗಿರುವ 'ಡವ್ವ ಡವ್ವ' ರೊಮ್ಯಾಂಟಿಕ್ ಹಾಡಿಗೆ ಚೇತನ್ ಕುಮಾರ್ ಸಾಹಿತ್ಯವಿದ್ದು, ಅರ್ಮಾನ್ ಮಲಿಕ್ (Armaan Malik) ಕಂಠಸಿರಿಯಲ್ಲಿ ಹಾಡು ಮೂಡಿಬಂದಿದೆ. ಚಿತ್ರಕ್ಕೆ ಲಹರಿ ಮ್ಯೂಸಿಕ್ ಹಾಗೂ ಟಿ-ಸಿರೀಸ್ ಬಂಡವಾಳ ಹೂಡಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
ಶುಭಾ ಪೂಂಜಾ ಮನೆಯಲ್ಲಿ ನಿಧಿ ಸುಬ್ಬಯ್ಯ: ಗೆಳತಿಯರ ಸರ್‌ಪ್ರೈಸ್ ಭೇಟಿ
'ರೈಡರ್' ಆ್ಯಕ್ಷನ್ ಚಿತ್ರವಾಗಿದ್ದು, ಈಗಾಗಲೇ ಚಿತ್ರದ ಟೀಸರ್ (Teaser) ಹಾಗೂ ಪೋಸ್ಟರ್ ಲುಕ್‌ನ (First Look)ಮೂಲಕ ವೀಕ್ಷಕರ ಗಮನ ಸೆಳೆಯುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ. ಕೆ.ಎಮ್.ಪ್ರಕಾಶ್ ಸಂಕಲನ, ಶರತ್ ಚಕ್ರವರ್ತಿ ಸಂಭಾಷಣೆ, ಭೂಷನ್ ಕೋರಿಯೊಗ್ರಾಫಿ, ಡಾ.ರವಿವರ್ಮ ಸಾಹಸ ಚಿತ್ರಕ್ಕಿದೆ. ದತ್ತಣ್ಣ, ಚಿಕ್ಕಣ್ಣ, ಶೋಭರಾಜ್, ರಾಜೇಶ್ ನಟರಂಗ, ಶಿವರಾಜ್.ಕೆ.ಆರ್.ಪೇಟೆ, ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ, ಸಂಪದ ಹುಲಿವಾನ, ನಿಹಾರಿಕ ಸೇರಿದಂತೆ ದೊಡ್ಡ ತಾರಬಳಗ ಚಿತ್ರದಲ್ಲಿದೆ.
ಕೇರಳ ರಣ ಮಳೆಗೆ 18 ಸಾವು, ಸಿಎಂ ಪಿಣರಾಯಿ ಜೊತೆ ಮೋದಿ ಮಾತುಕತೆ, ನೆರವಿನ ಭರವಸೆ!
ಇನ್ನು ಇತ್ತೀಚೆಗಷ್ಟೇ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ (Revathi)ದಂಪತಿಗೆ ಗಂಡು ಮಗು ಜನನವಾಗಿತ್ತು. ಕೋವಿಡ್ ವೈರಸ್ ಹಾವಳಿ ಮೊದಲ ಲಾಕ್‌ಡೌನ್ ಏಪ್ರಿಲ್ 17,2020ರಲ್ಲಿ ದಂಪತಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸದ್ಯ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಆರಂಭದಿಂದಲೂ ಸೆಲೆಬ್ರಿಟಿ ಕಪಲ್‌ಗಳು. ಮದುವೆಗೂ ಮುನ್ನ ನಿಖಿಲ್ ಪತ್ನಿ ಜೊತೆ ಹಂಚಿಕೊಳ್ಳುತ್ತಿದ್ದ ಫೋಟೋಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದವು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.