
ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್(Meghana Raj) ಮತ್ತು ರಾಯನ್ ರಾಜ್ ಸರ್ಜಾ (Rayaan Raj Sarja) ಇಂದು ಚಿರಂಜೀವಿ ಸರ್ಜಾ (Chiranjeevi Sarja) ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್ ಕೊಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ಮೇಘನಾ ವಿತ್ ರಾಯನ್ ಹವಾ ಜೋರಾಗಿದೆ.
36ನೇ ವಸಂತಕ್ಕೆ ಕಾಲಿಟ್ಟ ಚಿರಂಜೀವಿ ಸರ್ಜಾ ಹುಟ್ಟುಹಬ್ಬವನ್ನು(Birthday) ಸ್ಪೆಷಲ್ ಮಾಡಬೇಕು ಎಂದು ಚಿರು ಕೊನೆಯ ಭಾರಿ ನಟಿಸಿದ ಸಿನಿಮಾ 'ರಾಜಮಾರ್ತಾಂಡ' (Rajamartanda) ತಂಡ ವಿಶೇಷ ವಿಡಿಯೋ ಬಿಡುಗಡೆ ಮಾಡುತ್ತಿದ್ದಾರೆ. ರಾಯನ್ ರಾಜ್ ರಿಲೀಸ್ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಇಡೀ ಚಿತ್ರದ ಮೊದಲ ಟೀಸರ್‌ನ ರಾಯನ್ ಯುಟ್ಯೂಬ್‌ನಲ್ಲಿ (Youtube) ಬಿಡುಗಡೆ ಮಾಡಿದ್ದ.
'At the end of Tribulations is always Triumph.ಸಾಧನೆ ಮಾಡಲು ಬೆಂಕಿ ಇರುವ ಟ್ರಯಲ್ ಒಂದೇ ದಾರಿ ಆದರೆ ಆ ಟ್ರಯಲ್ (trial) ಸುಲಭವಾದ ಹಾದಿಯಲ್ಲ. ಎಲ್ಲಾ ರೀತಿ ಭರವಸೆಗಳನ್ನು ಕಳೆದುಕೊಂಡಾಗ, ಜೀವನವೇ ಸ್ಥಿರವಾದಾಗ ಟನಲ್ ಕೊನೆಯಲ್ಲಿ ಬೆಳಕು ಕಾಣುತ್ತದೆ. ನನಗೆ ಆ ಬೆಳಕು ಚಿರುನೇ. ಆ ಬೆಳಕಿನ ಕಡೆ ನನ್ನ ಜರ್ನಿ ಸಾಗುತ್ತಿದೆ. ಬೆಳಕಿನ ಕಿರಣಗಳು ಜೋರಾಗಿದೆ. ಹ್ಯಾಪಿ ಬರ್ತಡೇ ಡಿಯಲ್ ಗಂಡ (Husband), ನನ್ನ ಲೈಫ್ ನನ್ನ ಬೆಳಕು' ಎಂದು ಮೇಘನಾ ರಾಜ್ ಬರೆದುಕೊಂಡಿದ್ದಾರೆ.
ಚಿರು ಹುಟ್ಟುಹಬ್ಬದ ಪ್ರಯುಕ್ತ ಮೇಘನಾ ರಾಜ್ ಸ್ಪೆಷಲ್ ಫೋಟೋಶೂಟ್ ಮಾಡಿಸಿದ್ದಾರೆ. ಮಹಾರಾಣಿ (MahaRani) ರೀತಿ ಅಲಂಕರಿಸಿಕೊಂಡು ಚಿರು ಫೋಟೋ ಜೊತೆ ಪೋಸ್ ಕೊಟ್ಟಿದ್ದಾರೆ. ಅಲ್ಲದೆ ಇಂದು ಶೇರ್ ಮಾಡಿಕೊಂಡಿರುವ ಫೋಟೋದಲ್ಲಿ ಮೇಘನಾ ಮತ್ತು ಚಿರು ಇಬ್ಬರೂ ಕೆಂಪು ಮತ್ತು ನೀಲಿ ಬಣ್ಣದ ಟೀ-ಶರ್ಟ್ (T-Shirt) ಧರಿಸಿ ಕನ್ನಡಿ ಮುಂದೆ ನಿಂತು ಕ್ಲಿಕಿಸಿಕೊಂಡಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಚಿರು ಸರ್ಜಾಗೆ ಶುಭಾಶಯಗಳು ಹರಿದು ಬರುತ್ತಿದೆ.
ಕಳೆದ ವರ್ಷ ಜೂನ್ 7ರಂದು ಚಿರಂಜೀವಿ ಸರ್ಜಾ ಕೊನೆ ಉಸಿರೆಳೆದರು. ಇಡೀ ಕನ್ನಡ ಚಿತ್ರರಂಗ ಊಹಿಸಿಕೊಳ್ಳಲಾಗದ ಶಾಕ್‌ನಲ್ಲಿತ್ತು. ಅದರಲ್ಲೂ ಮೇಘನಾ ರಾಜ್ ಗರ್ಭಿಣಿ ಎಂದು ತಿಳಿದ ಮೇಲೆ ಅದೆಷ್ಟೋ ಹೆಣ್ಣು ಮಕ್ಕಳು ಭಾವುಕರಾಗಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.