ಟಾಪ್ ಸ್ಟಾರ್ ನಟಿ ಪಟ್ಟಕ್ಕೇರಿದ ಈ ಸೋಡಾಬುಡ್ಡಿ ಹುಡುಗಿ ಯಾರೆಂದು ಹೇಳಬಲ್ಲಿರಾ?

Published : Nov 09, 2024, 06:17 PM ISTUpdated : Nov 09, 2024, 08:42 PM IST
ಟಾಪ್ ಸ್ಟಾರ್ ನಟಿ ಪಟ್ಟಕ್ಕೇರಿದ ಈ ಸೋಡಾಬುಡ್ಡಿ ಹುಡುಗಿ ಯಾರೆಂದು ಹೇಳಬಲ್ಲಿರಾ?

ಸಾರಾಂಶ

ಈ ನಟಿ ಇಷ್ಟೊಂದು ಎತ್ತರಕ್ಕೆ ಏರಿದ್ದು ಕೇವಲ ಅವರ ಪ್ರತಿಭೆಯಿಂದ. ಹುಟ್ಟಿನಿಂದಲೇ ನಟನೆಯ ಅಸಾಮಾನ್ಯ ಪ್ರತಿಭೆ ಹೊಂದಿದ್ದ ಹುಡುಗಿ, ಚಿತ್ರರಂಗಕ್ಕೆ ಕಾಲಿಟ್ಟು ಹಂತಹಂತವಾಗಿ ಬೆಳೆದು ನಿಂತರು. ಅವರ ನಟನೆಯ ಸಿನಿಮಾಗಳು ಒಂದರಹಿಂದೊಂದು ಸೂಪರ್ ಹಿಟ್..

ಇಂದಿನ ಈ ಖ್ಯಾತ ನಟಿ 1984ರಲ್ಲಿ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಬಳಿಕ ಅವರು ತಮಿಳು, ತೆಲುಗು; ಕನ್ನಡ ಸೇರಿದಂತೆ ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಈ ನಟಿಗೆ ಭಾರೀ ಹೆಸರು ತಂದುಕೊಟ್ಟ ಚಿತ್ರವೆಂದರೆ ಅದು ರಜನಿಕಾಂತ್ ನಟನೆಯ 'ಪಡೆಯಪ್ಪ'..! ಆ ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡು ಭಾರೀ ಮಿಂಚಿದ್ದರು ಈ ಸ್ಟಾರ್ ನಟಿ!

ಬಹಳಷ್ಟು ಚಿತ್ರಗಳಲ್ಲಿ ನಾಯಕಿಯಾಗಿಯೂ ನಟಿಸಿರುವ ಈ ನಟಿಗೆ ಹೆಚ್ಚು ಹೆಸರು ತಂದುಕೊಟ್ಟಿದ್ದು ನೆಗೆಟಿವ್ ಪಾತ್ರಗಳೇ ಆಗಿವೆ. ಸೆಕ್ಸಿ ಲುಕ್ ಹಾಗೂ ಗ್ಲಾಮರಸ್ ಪಾತ್ರಗಳಿಗೆ ಹೇಳಿ ಮಾಡಿಸಿದಂತಿರುವ ಈ ಬೆಡಗಿ, ಈಗಲೂ ಕೂಡ ಪ್ರಮುಖ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಎಸ್‌ಎಸ್‌ ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾದಲ್ಲಿ ರಾಜಮಾತೆ ಶಿವಗಾಮಿ ಪಾತ್ರದಲ್ಲಿ ಮಿಂಚಿದ್ದಾರೆ. ಸಿನಿಪ್ರೇಕ್ಷಕರ ಮನಸೂರೆ ಗೊಂಡಿದ್ದಾರೆ. ಅವರೇ ನಟಿ ರಮ್ಯಾ ಕೃಷ್ಣನ್.

ಯಾರಿಗೂ ಹೇಳ್ದೇ ಇರೋ ವಿಷ್ಯ ಹೇಳ್ತೀನಿ; ಶಿವಣ್ಣ ಬಗ್ಗೆ ನಟಿ ಛಾಯಾ ಸಿಂಗ್ ಹೇಳಿದ ಗುಟ್ಟು!

ಒಂದು ಕಾಲದಲ್ಲಿ ಕನ್ನಡಕ ಧರಿಸಿ 'ಸೋಡಾ ಬುಡ್ಡಿ'ಯಂತೆ ಕಾಣಿಸುತ್ತಿದ್ದ ಹುಡುಗಿ ರಮ್ಯಾ ಕೃಷ್ಣ (Ramya Krishnan) ಅವರು ಮುಂದೊಂದು ದಿನ ಭಾರತೀಯ ಚಿತ್ರರಂಗವನ್ನು ಆಳುತ್ತಾರೆ ಎಂಬುದನ್ನು ಯಾರೂ ಊಹಿಸಿರಲಿಲ್ಲ. ಆದರೆ, ಕಲ್ಪನೆಗೂ ನಿಲುಕದ ಈ ಘಟನೆ ನಡೆದು ಇಂದು ಇತಿಹಾಸದ ಪುಟ ಸೇರಿದೆ. ಬಾಹುಬಲಿ ಚಿತ್ರದಲ್ಲಿ ಅವರ ಹಾವ-ಭಾವ, ಧ್ವನಿಯ ಏರಿಳಿತ ಹಾಗೂ ಅವರ ಗತ್ತುಗಮ್ಮತ್ತು ನೋಡಿ ಸಿನಿಪ್ರೇಕ್ಷಕರು ಮಾತ್ರವಲ್ಲ, ಇಡೀ ಚಿತ್ರರಂಗವೇ ಬೆಕ್ಕಸಬೆರಗಾಗಿ ನೋಡಿದೆ. 

ಹೌದು, ನಟಿ ರಮ್ಯಾ ಕೃಷ್ಣ ಅವರು ಅಸಾಮಾನ್ಯ ಎತ್ತರಕ್ಕೆ ಏರಿದ್ದಾರೆ. 54 ವರ್ಷವಾದರೂ ಈಗಲೂ ಎನೆರ್ಜಿಟಿಕ್ ಎಂಬಂತೆ ಇದ್ದಾರೆ, ವೇದಿಕೆಗಳಲ್ಲಿ ಸಖತ್‌ ಆಗಿ ಡಾನ್ಸ್ ಮಾಡಿ ಯಂಗ್ ಹುಡಗಿಯರನ್ನೂ ನಾಚಿಸುತ್ತಾರೆ, ಇಂಥ ನಟಿ ರಮ್ಯಾ ಕೃಷ್ಣ ಅವರ, 13ನೇ ವಯಸ್ಸಿನಲ್ಲಿ ತೆಗೆದ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಈಗ ರಾರಾಜಿಸುತ್ತಿದೆ. ಆ ಗ್ರೂಫ್ ಫೋಟೋದಲ್ಲಿ ನಟಿ ರಮ್ಯಾ ಕೃಷ್ಣ ಅವರು ಕನ್ನಡಕ ಧರಿಸಿ ಆರ್ಡಿನರಿಯಲ್ಲಿ ಎಕ್ಸಾ ಆರ್ಡಿನರಿ ಎಂಬಂತೆ ನಿಂತಿದ್ದಾರೆ. 

ವಿಜಯ ರಾಘವೇಂದ್ರಗೆ ಜೋಡಿಯಾದ ಡಾಕ್ಟರ್ ಅಶ್ವಿನಿ; ಚಿನ್ನಾರಿ ಮುತ್ತನಿಗೆ ಹೊಸ ಗೃಹಮಂತ್ರಿ!

ನಟಿ ರಮ್ಯಾ ಕೃಷ್ಣ ಅವರು ಈ ಎತ್ತರಕ್ಕೆ ಏರಿದ್ದು ಕೇವಲ ಅವರ ಪ್ರತಿಭೆಯಿಂದ. ಹುಟ್ಟಿನಿಂದಲೇ ನಟನೆಯ ಅಸಾಮಾನ್ಯ ಪ್ರತಿಭೆ ಹೊಂದಿದ್ದ ಹುಡುಗಿ ರಮ್ಯಾ ಕೃಷ್ಣ ಅವರು ಚಿತ್ರರಂಗಕ್ಕೆ ಕಾಲಿಟ್ಟು ಹಂತಹಂತವಾಗಿ ಬೆಳೆದು ನಿಂತರು. ಅವರ ನಟನೆಯ ಸಿನಿಮಾಗಳು ಒಂದರಹಿಂದೊಂದು ಸೂಪರ್ ಹಿಟ್ ಆಗಿ ಅವರಿಗೆ ಇನ್ನಷ್ಟು ಮತ್ತಷ್ಟು ಅವಕಾಶಗಳ ಸುರಿಮಳೆಗೆ ಕಾರಣವಾಯ್ತು. ಈಗಲೂ ಅವರು ಮಿಂಚುತ್ತಿರುವುದು ತಮ್ಮ ಅಮೋಘ ಪ್ರತಿಭೆಯಿಂದ ಮಾತ್ರ!


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ
ಯಶ್- ರಾಧಿಕಾ ಪುತ್ರಿಗೆ 7 ವರ್ಷಗಳ ಸಂಭ್ರಮ: ಹುಟ್ಟುಹಬ್ಬದ ಕ್ಯೂಟ್​ ಫೋಟೋಗಳು ಇಲ್ಲಿವೆ