
ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಖ್ಯಾತಿಯ ನಟ ಶಿವರಾಜ್‌ಕುಮಾರ್ (Shiva Rajkumar) ಅವರು ಗಂಭೀರ ಖಾಯಿಲೆಗೆ ತುತ್ತಾಗಿದ್ದು ಗೊತ್ತೇ ಇದೆ. ಚಿಕಿತ್ಸೆಗಾಗಿ ಸದ್ಯದಲ್ಲೇ ಶಿವಣ್ಣ ಅಮೆರಿಕಾಗೆ ತೆರಳಲಿದ್ದು, ನಾಲ್ಕು ಸೆಷನ್ ಟ್ರೀಟ್‌ಮೆಂಟ್ ಬಳಿಕ 2025ರ ಜನವರಿಯಲ್ಲಿ ನಟ ಶಿವರಾಜ್‌ಕುಮಾರ್ ಅವರಿಗೆ ಅಮೆರಿಕಾದಲ್ಲಿ ಸರ್ಜರಿ ಆಗಲಿದೆ. ಹೀಗಾಗಿ ಶಿವಣ್ಣ ಅವರು ಸದ್ಯ ತಮ್ಮ ಎಲ್ಲ ಸಿನಿಮಾಗಳ ಶೂಟಿಂಗ್ ಪೋಸ್ಟ್‌ಪೋನ್ ಮಾಡಿದ್ದಾರೆ.
'ಭೈರತಿ ರಣಗಲ್' ಸಿನಿಮಾ ಶೂಟಿಂಗ್ ಮುಗಿಸಿರುವ ಶಿವಣ್ಣ ಅವರು ಅಲ್ಲಿ ಶೂಟಿಂಗ್ ಸೆಟ್‌ನಲ್ಲಿ ಹೇಗಿದ್ದರು? ಅವರಿಗೆ ಅದಾಗಲೇ ಕಾಡುತ್ತಿದ್ದ ಅನಾರೋಗ್ಯವನ್ನು ನಟ ಶಿವಣ್ಣ ಹೇಗೆ ಮ್ಯಾನೇಜ್ ಮಾಡಿದ್ದಾರೆ. ಅಲ್ಲಿ ಅವರ ಜೊತೆ ನಟಿಸಿರುವ ಸಹನಟ-ನಟಿಯರು ಆ ಬಗ್ಗೆ ಏನುಹೇಳುತ್ತಾರೆ ಎಂಬ ಕುತೂಹಲ ಸಹಜವಾಗಿ ಎಲ್ಲರಲ್ಲೂ ಇದೆ. ಮೊಟ್ಟಮೊದಲನೆಯದಾಗಿ ನಟ ಶಿವಣ್ಣ ಬೇಗ ಹುಶಾರಾಗಿ ಬರಲಿ ಎಂಬುದು ಕರುನಾಡು ಸೇರಿದಂತೆ ಅವರ ಎಲ್ಲ ಅಭಿಮಾನಿಗಳ ಹಾರೈಕೆಯಾಗಿದೆ.
ವಿಜಯ ರಾಘವೇಂದ್ರಗೆ ಜೋಡಿಯಾದ ಡಾಕ್ಟರ್ ಅಶ್ವಿನಿ; ಚಿನ್ನಾರಿ ಮುತ್ತನಿಗೆ ಹೊಸ ಗೃಹಮಂತ್ರಿ!
ಈ ಬಗ್ಗೆ ಶಿವಣ್ಣ ಅಭಿನಯದ 'ಭೈರತಿ ರಣಗಲ್' ಸಿನಿಮಾದಲ್ಲಿ ಅವರ ಸಹನಟಿಯಾಗಿ ನಟಿಸಿರುವ 'ಚಿಟ್ಟೆ' ಖ್ಯಾತಿಯ ನಟಿ ಛಾಯಾ ಸಿಂಗ್ (Chaya Singh) ಮಾತನ್ನಾಡಿದ್ದಾರೆ. 'ಎಲ್ಲೂ ಹೇಳ್ದೇ ಇರೋ ವಿಷ್ಯನ ಹೇಳ್ತೀನಿ ನಿಮ್ಗೆ.. ನಾವು ಶೂಟಿಂಗ್ ಮಾಡ್ಬೇಕಾದ್ರೆ ಗೀತಮ್ಮ ಬಂದ್ಬಿಟ್ಟು ಪೊಲಿಟಿಕಲ್ ಫೀಲ್ಡ್‌ನಲ್ಲಿದ್ರು.. ಅವ್ರ ಮನಸ್ಸಲ್ಲಿ ತುಂಬಾನೇ ಇತ್ತು.. ತುಂಬಾ ವಿಷ್ಯಗಳು ಅವರ ತಲೆನಲ್ಲಿ ಓಡ್ತಾ ಇತ್ತು. ಆದ್ರೆ ಅದ್ಯಾವುದನ್ನೂ ತೋರಿಸಿಕೊಳ್ಳದೇ ಶಾಟ್‌ಗೆ ಬಂದಾಗ ಅದಕ್ಕೆ ಮಾತ್ರ ಇಟ್ಕೊಂಡು, ಬೇರೆಯವ್ರ ಜೊತೆಗೂ ನಗಾಡ್ತಾ, ಸೆಟ್ ವಾತಾವರಣವನ್ನು ಲೈಟ್ ಆಗಿ ಇಟ್ಕೊಂಡು, ತುಂಬಾ ಚೆನ್ನಾಗಿ ಮಾಡ್ತಾ ಇದ್ರು..
ಅವ್ರ ವ್ಯವಹಾರ, ಪತ್ನಿಯ ರಾಜಕೀಯ ಅಥವಾ ಅವರ ಹೆಲ್ತ್ ಇಶ್ಯೂ, ಹೀಗೆ ಯಾವುದನ್ನೂ, ಯಾವುದನ್ನು ಅಂದ್ರೆ ಯಾವುದನ್ನೂ ಶೂಟಿಂಗ್ ಸ್ಪಾಟ್‌ನಲ್ಲಿ ತೋರಿಸಿಕೊಳ್ತಾನೇ ಇರ್ಲಿಲ್ಲ... ನಿಜವಾಗಿಯೂ ನಟ ಶಿವಣ್ಣ ತುಂಬಾನೇ ಗ್ರೇಟ್..' ಅಂದಿದ್ದಾರೆ ನಟಿ ಛಾಯಾ ಸಿಂಗ್.
ನನ್ನ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿದೆ, ಅಮೆರಿಕಾದಲ್ಲಿ ಸರ್ಜರಿ ಆಗಲಿದೆ: ಶಿವರಾಜ್‌ಕುಮಾರ್
'ಆರ್‌ಆರ್‌ಆರ್' ಸಿನಿಮಾ (RRR) ಖ್ಯಾತಿಯ ತೆಲುಗು ನಟ ರಾಮ್‌ಚರಣ್ ಜೊತೆಗಿನ ಸಿನಿಮಾದಲ್ಲಿ ನಟನೆ. ಹೌದು, ಕನ್ನಡದ ನಟ ಶಿವರಾಜ್‌ಕುಮಾರ್ ಅವರು ತೆಲುಗು ನಟ ರಾಮ್‌ಚರಣ್ ಜೊತೆಗೂಡಿ 'RC-16' ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ, ಸದ್ಯ ಅನಾರೋಗ್ಯದ ಕಾರಣಕ್ಕೆ ಇದನ್ನು ಮುಂದೂಡಲಾಗಿದೆ. ಟ್ರೀಟ್‌ಮೆಂಟ್ ಬಳಿಕ ಶೂಟಿಂಗ್ ಟೀಮ್ ಸೇರಿಕೊಳ್ಳಲಿದ್ದಾರಂತೆ ಶಿವಣ್ಣ.
ಈ ಬಗ್ಗೆ ಮಾತನಾಡಿರುವ ನಟ ಶಿವಣ್ಣ ಅವರು 'ನಾನು ನನ್ನ ಅನಾರೋಗ್ಯವನ್ನು ನನ್ನ ಅಭಿಮಾನಿಗಳು ಸೇರಿದಂತೆ ಯಾರಿಂದಲೂ ಮುಚ್ಚಿಡುವ ಅಗತ್ಯವಿಲ್ಲ. ಆದರೆ, ಯಾರೂ ಅನಾವಶ್ಯಕ ಆತಂಕ ಪಡಬೇಡಿ. ಹೌದು, ಎಲ್ಲರಂತೆ ನಾನು ಕೂಡ ಮನುಷ್ಯ, ನನಗೂ ಅನಾರೋಗ್ಯ ಸಹಜವಾಗಿ ಕಾಡುತ್ತದೆ. ಹೌದು, ನನಗೆ ಹುಶಾರಿಲ್ಲ, ಆದರೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೇನೆ. ಅಮೆರಿಕಾದಲ್ಲಿ ಟ್ರೀಟ್‌ಮೆಂಟ್ ಹಾಗೂ ಅಲ್ಲಿಯೇ ಜನವರಿಯಲ್ಲಿ ಸರ್ಜರಿ ನಡೆಯಲಿದೆ' ಎಂದಿದ್ದಾರೆ.
ಹಾಗಿದ್ರೆ ಶಿವಣ್ಣಂಗೆ 'ಜೈ' ಅಂದೇಬಿಟ್ರು ದರ್ಶನ್ ಫ್ಯಾನ್ಸ್; ಶಿವರಾಜ್‌ಕುಮಾರ್ ಹೇಳಿದ್ದೇನು?
ನಟ ಶಿವರಾಜ್‌ಕುಮಾರ್ ಅವರೇ ಸ್ವತಃ ಹೇಳಿದಂತೆ 'ನನ್ನ ಅನಾರೋಗ್ಯ ಹಾಗು ಕಂಡೀಷನ್ ಬಗ್ಗೆ ಕನ್ನಡ ಸಿನಿಮಾ ಉದ್ಯಮದಲ್ಲಿ ಸುದೀಪ್, ಯಶ್, ರಕ್ಷಿತ್ ಸೇರಿದಂತೆ ಅನೇಕರಿಗೆ ತಿಳಿದಿದೆ. ಈ ಬಗ್ಗೆ ನನ್ನ ಎಲ್ಲ ಆಪ್ತರು ಬಹಳಷ್ಟು ಧೈರ್ಯ ಹೇಳಿದ್ದಾರೆ. ಹೌದು, ನನಗೆ ಆ ಖಾಯಿಲೆ ಬಂದುಬಿಟ್ಟಿದೆ. ಆ ಬಗ್ಗೆ ಪ್ರಾರಂಭದಲ್ಲಿ ನಾನು ಭಯಪಟ್ಟರೂ ಈಗ ಧೈರ್ಯ ತಂದುಕೊಂಡಿದ್ದೇನೆ. ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೇನೆ, ಮುಂದೆಯೂ ತೆಗೆದುಕೊಳ್ಳಲಿದ್ದೇನೆ, ಎಲ್ಲವೂ ಸರಿಯಾಗಲಿದೆ ಎಂಬ ವಿಶ್ವಾಸ ನನಗಿದೆ' ಎಂದಿದ್ದಾರೆ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.