Darshan Birthday: ಬರ್ತ್‌ಡೇ ಮಾಡೋಕೆ ದರ್ಶನ್ ಬರೋಕಾಗಲ್ಲ, ಆದ್ರೆ ಫ್ಯಾನ್ಸ್ ಸೆಲೆಬ್ರೇಶನ್ ಬಿಡೋದೂ ಇಲ್ಲ!

Published : Feb 05, 2026, 05:40 PM IST
Darshan Thoogudeepa

ಸಾರಾಂಶ

ಈ ವರ್ಷ ದರ್ಶನ್ ಜೈಲಿನಲ್ಲೇ ಬರ್ತ್​ಡೇ ಸೆಲೆಬ್ರೇಟ್ ಮಾಡೋ ಸ್ಥಿತಿ ಬಂದಿದೆ. ದರ್ಶನ್​ ‘ದರ್ಶನ’ ಸಿಗದೇ ಹೋದ್ರೂ ಅರ್ಥಪೂರ್ಣವಾಗಿ ಬರ್ತ್​ಡೇ ಸೆಲೆಬ್ರೇಟ್ ಮಾಡೋಣ ಅಂತ ಕೆಲ ಫ್ಯಾನ್ಸ್ ತಯಾರಿ ಮಾಡಿಕೊಂಡಿದ್ದಾರೆ. ಎನಿವೇ ದರ್ಶನ್ ಇಲ್ಲದೇ ಹೋದ್ರೂ ಈ ಉತ್ಸವ ಯಶಸ್ವಿಯಾಗಿ ನಡೆಯಲಿ ಅಂತಿದ್ದಾರೆ ಫ್ಯಾನ್ಸ್.

ಹುಟ್ಟುಹಬ್ಬಕ್ಕೆ ಹೊರಬರಲಾಗದ ದರ್ಶನ್!

ನಟ ದರ್ಶನ್ (Darshan Thoogudeepa) ಹುಟ್ಟುಹಬ್ಬಕ್ಕೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇದೆ. ಆದರೆ, ಹುಟ್ಟುಹಬ್ಬಕ್ಕೆ ದರ್ಶನ್ ಹೊರಬರೋದು ಅಸಾಧ್ಯ. ಮೊದಲ ಬಾರಿ ದರ್ಶನ್ ಇಲ್ಲದೇ 'ಡಿ ಉತ್ಸವ' ಮಾಡೋದಕ್ಕೆ ಫ್ಯಾನ್ಸ್ ಸಜ್ಜಾಗಿದ್ದಾರೆ. ಆದರೆ ಈ ಬಾರಿ ಮನೆ ಮನೆಮುಂದೆ ಜಾತ್ರೆ ಸೇರಲ್ಲ, ಜಾಗರಣೆ ಮಾಡೋ ಪ್ರಮೇಯವೂ ಇಲ್ಲ ಅಂತ ದರ್ಶನ್ ನೆರೆಹೊರೆಯ ಮಂದಿ ನಿಟ್ಟುಸಿರು ಬಿಟ್ಟಿದ್ದಾರೆ.

ದರ್ಶನ್ ಬರಲ್ಲ.. ಫ್ಯಾನ್ಸ್ ಸೆಲೆಬ್ರೇಷನ್ ಬಿಡಲ್ಲ, ಫೆ.16ಕ್ಕೆ ಡಿ ಉತ್ಸವ ಮಾಡಲು ಸಜ್ಜಾದ ಡಿ ಫ್ಯಾನ್ಸ್

ಹೌದು, ಇದೇ ತಿಂಗಳ 16ನೇ ತಾರೀಖು ದರ್ಶನ್ ಹುಟ್ಟುಹಬ್ಬ. ಆದ್ರೆ ಸದ್ಯ ದಾಸನ ಪರಿಸ್ಥಿತಿ ಏನು ಅನ್ನೋದು ಗೊತ್ತೇ ಇದೆ. ರೇಣುಕಾಸ್ವಾಮಿ ಮರ್ಡರ್ ಕೇಸ್​​ನಲ್ಲಿ ಎ-2 ಆಗಿ ಜೈಲು ಸೇರಿರೋ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರೀತಾ ಇದ್ದಾರೆ.

ದರ್ಶನ್ ಹೊರಗಿದ್ರೆ 49ನೇ ಹುಟ್ಟುಹಬ್ಬವನ್ನ ಫ್ಯಾನ್ಸ್ ದೊಡ್ಡದಾಗಿ ಸೆಲೆಬ್ರೇಟ್ ಮಾಡ್ತಾ ಇದ್ರು. ಆದ್ರೆ ದರ್ಶನ್​ಗೆ ಈ ಸಾರಿ ಜೈಲಲ್ಲೇ ಹುಟ್ಟುಹಬ್ಬದ ದಿನ ಕಳೆಯೋ ಸ್ಥಿತಿ ಬಂದಿದೆ. ಕಳೆದ ವರ್ಷ ಆಗಸ್ಟ್​​ನಲ್ಲಿ ಬೇಲ್ ರದ್ದಾಗಿ ದರ್ಶನ್ ಮತ್ತೆ ಜೈಲು ಸೇರಿದ ಮೇಲೆ, ಹೊಸ ವರ್ಷಕ್ಕೆ ಕೊನೆ ಪಕ್ಷ ಹುಟ್ಟುಹಬ್ಬದ ವೇಳೆಗೆ ದರ್ಶನ್ ಹೊರಬರ್ತಾರೆ ಅಂತ ಫ್ಯಾನ್ಸ್ ಭಾವಿಸಿದ್ರು. ಆದ್ರೆ ಆ ನಿರೀಕ್ಷೆ ಸುಳ್ಳಾಗಿದೆ.

ಅಸಲಿಗೆ ದರ್ಶನ್ ಬೇಲ್​ಗೆ ಅರ್ಜಿಯನ್ನೇ ಸಲ್ಲಿಸಿಲ್ಲ. ಕೇಸ್ ಈಗಷ್ಟೇ ಹಿಯರಿಂಗ್ ಹಂತಕ್ಕೆ ಬಂದಿದ್ದು, ವಕೀಲರು ಹೇಳೋವರೆಗೂ ದರ್ಶನ್ ಬೇಲ್ ಬಗ್ಗೆ ಯೋಚಿಸುವ ಗೋಜಿಗೂ ಹೋಗಿಲ್ಲ. ಸೋ ಈ ಸಾರಿ ಬರ್ತ್ ಡೇ ದಿನ ದಾಸ ಕಂಬಿ ಹಿಂದೆ ಕಳೆಯೋದು ಫಿಕ್ಸ್,.

ದರ್ಶನ್ ಸಿಗದೇ ಹೋದ್ರೂ ಬರ್ತ್​ಡೇ ಮಾತ್ರ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಬೇಕು ಅಂತ ಫ್ಯಾನ್ಸ್ ಸಜ್ಜಾಗಿದ್ದಾರೆ., ರಾಜ್ಯದ ನಾನಾ ಕಡೆಗೆ ದರ್ಶನ್ ಅಭಿಮಾನಿ ಸಂಘಗಳು ಅನ್ನದಾನ, ರಕ್ತದಾನ ಶಿಬಿರ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿವೆ.

ಪ್ರತಿ ವರ್ಷ ದರ್ಶನ್​ ಬರ್ತ್​ಡೇಯಂದು ಅವರ ನಿವಾಸವಿರೋ ಆರ್ ಆರ್ ನಗರ ಜಗಮಗಿಸ್ತಾ ಇತ್ತು. ಮನೆಯ ರಸ್ತೆಯುದ್ದಕ್ಕೂ ಕಟೌಟ್ಸ್ , ಪೋಸ್ಟರ್ಸ್ ರಾರಾಜಿಸ್ತಾ ಇದ್ದವು. ಸಾವಿರಾರು ಅಭಿಮಾನಿಗಳು ದೂರ ದೂರದಿಂದ ಹರಿದು ಬರ್ತಾ ಇದ್ರು.

ಬಂದ ಫ್ಯಾನ್ಸ್​ಗೆ ದರ್ಶನ ಕೊಡ್ತಿದ್ದ ದರ್ಶನ್, ಎಲ್ಲರಿಗೂ ಊಟದ ವ್ಯವಸ್ಥೆ ಕೂಡ ಮಾಡಿಸ್ತಾ ಇದ್ರು. 2023ರಲ್ಲಿ ಕೈ ನೋವಿದ್ರೂ ಎಲ್ಲಾ ಅಭಿಮಾನಿಗಳನ್ನ ಎದುರುಗೊಂಡು ಶೇಕ್ ಹ್ಯಾಂಡ್ ಕೊಟ್ಟಿದ್ರು.

ದರ್ಶನ್ ಇಲ್ಲದೇ ಆರ್.ಆರ್ ನಗರ ಸೈಲೆಂಟ್..!

ಹೌದು ದರ್ಶನ್ ಬರ್ತ್​​ಡೇ ಟೈಂನಲ್ಲಿ ಆರ್​.ಆರ್ ನಗರದ ಜನ ಭಯಂಕರ ಕಿರಿಕಿರಿ ಅನುಭವಿಸ್ತಾ ಇದ್ದಿದ್ದು ಸುಳ್ಳಲ್ಲ. ಅದ್ರಲ್ಲೂ ದರ್ಶನ್ ಮನೆಯ ಅಕ್ಕಪಕ್ಕದವರಿಗಂತೂ ಅಭಿಮಾನಿಗಳ ಅರಚಾಟ ., ಪಟಾಕಿ ಸಿಡಿತದಿಂದ ಜಾಗರಣೆ ಮಾಡೋ ಸ್ಥಿತಿ ಬರ್ತಾ ಇತ್ತು.

ದರ್ಶನ್ ಮನೆ ಪಕ್ಕದಲ್ಲಿ ವಾಸವಿದ್ದ ಹಿರಿಯ ಸಾಹಿತಿ ನಾಡೋಜ ಗೋ.ರು ಚೆನ್ನಬಸಪ್ಪ ಹಿಂದೊಮ್ಮೆ ದರ್ಶನ್ ಅಭಿಮಾನಿಗಳಿಂದ ತಮಗಾದ ಕಿರಿಕಿರಿಯನ್ನ ಬಹಿರಂಗವಾಗೇ ಹೇಳಿಕೊಂಡಿದ್ರು. ದರ್ಶನ್ ಬರ್ತ್​ಡೇ ದಿನ ದಾಸನ ಫ್ಯಾನ್ಸ್ ಸಿಡಿಸಿದ ಪಟಾಕಿ ಸದ್ದಿಗೆ ಕಿವಿಯನ್ನೇ ಕಳೆದುಕೊಂಡ ದುರಂತ ಕಥೆಯನ್ನ ಹೇಳಿಕೊಂಡಿದ್ರು.

ಕಳೆದ ವರ್ಷದಿಂದ ಆರ್.ಆರ್ ನಗರ ನಿವಾಸಿಗಳಿಗೆ ಈ ಕಿರಿಕಿರಿಯಂತೂ ತಪ್ಪಿದೆ. ಕಳೆದ ವರ್ಷ ದರ್ಶನ್ ಬೇಲ್ ಸಿಕ್ಕು ಹೊರಗಿದ್ರೂ ಫ್ಯಾನ್ಸ್​ಭೇಟಿ ಮಾಡೋದಕ್ಕೆ ಹೋಗಿರಲಿಲ್ಲ. ಬೆನ್ನು ನೋವಿನ ಕಾರಣ ಹೇಳಿ ಅಭಿಮಾನಿಗಳಿಗೆ ಮುಂದಿನ ವರ್ಷ ಸಿಗೋಣ ಅಂತ ಸಮಾಧಾನ ಮಾಡಿದ್ರು.

ಆದ್ರೆ ಈ ವರ್ಷ ದರ್ಶನ್ ಜೈಲಿನಲ್ಲೇ ಬರ್ತ್​ಡೇ ಸೆಲೆಬ್ರೇಟ್ ಮಾಡೋ ಸ್ಥಿತಿ ಬಂದಿದೆ. ದರ್ಶನ್​ದರ್ಶನ ಸಿಗದೇ ಹೋದ್ರೂ ಅರ್ಥಪೂರ್ಣವಾಗಿ ಬರ್ತ್​ಡೇ ಸೆಲೆಬ್ರೇಟ್ ಮಾಡೋಣ ಅಂತ ಕೆಲ ಫ್ಯಾನ್ಸ್ ತಯಾರಿ ಮಾಡಿಕೊಂಡಿದ್ದಾರೆ. ಎನಿವೇ ದರ್ಶನ್ ಇಲ್ಲದೇ ಹೋದ್ರೂ ಈ ಉತ್ಸವ ಯಶಸ್ವಿಯಾಗಿ ನಡೆಯಲಿ, ಗೌಜು ಗದ್ದಲವಿಲ್ಲದೇ ಒಂದಿಷ್ಟು ಒಳ್ಳೆ ಕೆಲಸ ನಡೆಯಲಿ ಅಂತಿದ್ದಾರೆ ದಾಸನ ಅಸಲಿ ಫ್ಯಾನ್ಸ್..!

ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮುಂಬೈನಲ್ಲಿ ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ಮೊದಲ ಬೀಚ್ ಕ್ಲಬ್ ಶುರು; ದೇವಲೋಕವೋ ಪ್ರೇಮಲೋಕವೋ ಎಂಬಂತಿದೆ!
Photos: ರಶ್ಮಿಕಾ ಮಂದಣ್ಣರನ್ನೇ ಯಾಕೆ ಮದುವೆಯಾದೆ? ವಿವಾಹವಾಗಿ ಕ್ಲಾರಿಟಿ ಕೊಟ್ಟ Vijay Deverakonda