ದಾಸನಿಗಿಲ್ಲ ಬಿಡುಗಡೆ ಭಾಗ್ಯ, ಜೈಲಲ್ಲೇ ಹುಟ್ಟುಹಬ್ಬ! ಮುಂದಿನ ವರ್ಷ ಸಿಗೋಣ ಎಂದಿದ್ದ ದರ್ಶನ್

Published : Feb 04, 2026, 03:31 PM IST
darshan thoogudeepa

ಸಾರಾಂಶ

ನಟ ದರ್ಶನ್ ಅವರ 49ನೇ ಹುಟ್ಟುಹಬ್ಬವನ್ನು ಈ ಬಾರಿ ಜೈಲಿನಲ್ಲಿ ಕಳೆಯುವುದು ಬಹುತೇಕ ಖಚಿತವಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಅವರು, ಬಿಡುಗಡೆಯಾಗುತ್ತಾರೆಂಬ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದ್ದು, ದಾಸನಿಲ್ಲದ ಹುಟ್ಟುಹಬ್ಬ ಆಚರಣೆಗೆ ಫ್ಯಾನ್ಸ್ ಸಜ್ಜಾಗುತ್ತಿದ್ದಾರೆ.

ದರ್ಶನ್ ಹುಟ್ಟುಹಬ್ಬಕ್ಕೆ ಇನ್ನು ಹನ್ನೆರಡು ದಿನಗಳು ಮಾತ್ರ ಬಾಕಿ ಇವೆ. ಈ ಬಾರಿ ಬರ್ತ್​ಡೇ ಹೊತ್ತಿಗಾದರೂ ದರ್ಶನ್ ಹೊರಗೆ ಬರಬಹುದು ಅಂದುಕೊಂಡಿದ್ರು ಡಿ ಫ್ಯಾನ್ಸ್. ಆದ್ರೆ ದರ್ಶನ್ ಕೇಸ್ ನಡೀತಿರೋ ಹಾದಿ ನೋಡಿದ್ರೆ, ಸದ್ಯಕ್ಕಂತೂ ದಾಸನಿಗೆ ಬಿಡುಗಡೆ ಭಾಗ್ಯ ಸಿಕ್ಕಲಾರದು. ಈ ಬಾರಿ ದರ್ಶನ್‌ಗೆ ಜೈಲಿನಲ್ಲೇ ಹುಟ್ಟುಹಬ್ಬ ಫಿಕ್ಸ್.

ದಾಸನಿಗಿಲ್ಲ ಬಿಡುಗಡೆ ಭಾಗ್ಯ, ಜೈಲಲ್ಲೇ ಹುಟ್ಟುಹಬ್ಬ!

ಯೆಸ್ ಇದೇ ಫೆಬ್ರುವರಿ 16ಕ್ಕೆ ದರ್ಶನ್​ ಹುಟ್ಟುಹಬ್ಬ. ದರ್ಶನ್ ಹೊರಗಿದ್ರೆ 49ನೇ ಹುಟ್ಟುಹಬ್ಬವನ್ನ ಫ್ಯಾನ್ಸ್ ದೊಡ್ಡದಾಗಿ ಸೆಲೆಬ್ರೇಟ್ ಮಾಡ್ತಾ ಇದ್ರು. ಆದ್ರೆ ದರ್ಶನ್‌ಗೆ ಈ ಸಾರಿ ಜೈಲಲ್ಲೇ ಹುಟ್ಟುಹಬ್ಬದ ದಿನ ಕಳೆಯೋ ಸ್ಥಿತಿ ಬಂದಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಬೇಲ್ ರದ್ದಾಗಿ ದರ್ಶನ್ ಮತ್ತೆ ಜೈಲು ಸೇರಿದ ಮೇಲೆ , ಹೊಸ ವರ್ಷಕ್ಕೆ ಕೊನೆ ಪಕ್ಷ ಹುಟ್ಟುಹಬ್ಬದ ವೇಳೆಗೆ ದರ್ಶನ್ ಹೊರಬರ್ತಾರೆ ಅಂತ ಫ್ಯಾನ್ಸ್ ಭಾವಿಸಿದ್ರು. ಆದ್ರೆ ಆ ನಿರೀಕ್ಷೆ ಸುಳ್ಳಾಗಿದೆ.

ಮುಂದಿನ ವರ್ಷ ಸಿಗೋಣ ಎಂದಿದ್ದ ದಾಸ

ಅಸಲಿಗೆ ದರ್ಶನ್ ಬೇಲ್‌ಗೆ ಅರ್ಜಿಯನ್ನೇ ಸಲ್ಲಿಸಿಲ್ಲ. ಕೇಸ್ ಈಗಷ್ಟೇ ಹಿಯರಿಂಗ್ ಹಂತಕ್ಕೆ ಬಂದಿದ್ದು, ವಕೀಲರು ಹೇಳೋವರೆಗೂ ದರ್ಶನ್ ಬೇಲ್ ಬಗ್ಗೆ ಯೋಚಿಸುವ ಗೋಜಿಗೂ ಹೋಗಿಲ್ಲ. ಸೋ ಈ ಸಾರಿ ಬರ್ತ್ ಡೇ ದಿನ ದಾಸ ಕಂಬಿ ಹಿಂದೆ ಕಳೆಯೋದು ಫಿಕ್ಸ್. 2024ರ ಜೂನ್​ನಲ್ಲಿ ರೇಣುಕಾಸ್ವಾಮಿ ಮರ್ಡರ್ ಕೇಸ್​ ಆರೋಪ ಹೊತ್ತು ಜೈಲ್ ಸೇರಿದ್ದ ದರ್ಶನ್‌ಗೆ ಡಿಸೆಂಬರ್‌ನಲ್ಲಿ ಬೇಲ್ ಸಿಕ್ಕಿತ್ತು. ಸೋ ಕಳೆದ ವರ್ಷ ಬರ್ತ್​ಡೇ ಹೊತ್ತಿಗೆ ದರ್ಶನ್ ಹೊರಗಡೆ ಇದ್ರು. ಆದ್ರೆ ಫ್ಯಾನ್ಸ್‌ಗೆ ಸಿಕ್ಕಿರಲಿಲ್ಲ. ವಿಡಿಯೋವೊಂದನ್ನ ಮಾಡಿ, ಬೆನ್ನು ನೋವಿನ ಕಾರಣಕ್ಕೆ ಈ ಬಾರಿ ಸಿಕ್ಕಲ್ಲ. ಮುಂದಿನ ವರ್ಷ ಸಿಗೋಣ ಅಂದಿದ್ರು. ಆದ್ರೆ ಈ ವರ್ಷ ಮತ್ತೆ ಜೈಲು ಸೇರಿದ್ದಾರೆ.

ಪ್ರತಿ ವರ್ಷ ದರ್ಶನ್​ ಬರ್ತ್​ಡೇಯಂದು ಅವರ ನಿವಾಸವಿರೋ ಆರ್ ಆರ್ ನಗರ ಜಗಮಗಿಸ್ತಾ ಇತ್ತು. ಮನೆಯ ರಸ್ತೆಯುದ್ದಕ್ಕೂ ಕಟೌಟ್ಸ್ , ಪೋಸ್ಟರ್ಸ್ ರಾರಾಜಿಸ್ತಾ ಇದ್ದವು. ಸಾವಿರಾರು ಅಭಿಮಾನಿಗಳು ದೂರ ದೂರದಿಂದ ಹರಿದು ಬರ್ತಾ ಇದ್ರು. ಬಂದ ಫ್ಯಾನ್ಸ್‌ಗೆ ದರ್ಶನ ಕೊಡ್ತಿದ್ದ ದರ್ಶನ್, ಎಲ್ಲರಿಗೂ ಊಟದ ವ್ಯವಸ್ಥೆ ಕೂಡ ಮಾಡಿಸ್ತಾ ಇದ್ರು. 2023ರಲ್ಲಿ ಕೈ ನೋವಿದ್ರೂ ಎಲ್ಲಾ ಅಭಿಮಾನಿಗಳನ್ನ ಎದುರುಗೊಂಡು ಶೇಕ್ ಹ್ಯಾಂಡ್ ಕೊಟ್ಟಿದ್ರು.

ಇಂಥಾ ದೃಶ್ಯ ಮತ್ತೆ ಅದ್ಯಾವಾಗ ನೋಡೋದಕ್ಕೆ ಸಿಕ್ಕುತ್ತೋ ಗೊತ್ತಿಲ್ಲ. ಸದ್ಯಕ್ಕಂತೂ ಅದು ಅಸಾಧ್ಯ. ಸೋ ದರ್ಶನ್ ಫ್ಯಾನ್ಸ್, ದಾಸನಿಲ್ಲದೇ ಬರ್ತ್​ಡೇ ಸೆಲೆಬ್ರೇಟ್ ಮಾಡಲಿಕ್ಕೆ ಸಜ್ಜಾಗ್ತಾ ಇದ್ದಾರೆ. ಅನೇಕ ಕಡೆ ಅಭಿಮಾನಿ ಸಂಘದಿಂದ ಕಾರ್ಯಕ್ರಮಗಳನ್ನ ಏರ್ಪಡಿಸಲಾಗಿದೆ. ಏನೇ ಆದ್ರೂ ಅದೆಷ್ಟೇ ಸೆಲೆಬ್ರೇಟ್ ಮಾಡಿದ್ರೂ ದರ್ಶನ್ ಇಲ್ಲದ ಬರ್ತ್​ಡೇ ಸಪ್ಪೆನೇ. ಅದ್ರಲ್ಲೂ ದರ್ಶನ್​ ಬರ್ತ್​ಡೇನ ಮೊದಲ ಬಾರಿ ಜೈಲಿನಲ್ಲಿ ಸೆಲೆಬ್ರೇಟ್ ಮಾಡಬೇಕಾಗಿ ಬಂದಿರೋದು ದುರಂತವೇ ಸರಿ.

ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

666 operation Dream Theatre Teaser: ಶಿವರಾಜ್‌ಕುಮಾರ್-ಧನಂಜಯ್ '666 ಆಪರೇಶನ್ ಡ್ರೀಮ್ ಥಿಯೇಟರ್ ಟೀಸರ್' ಬಿಡುಗಡೆ; ಭಾರೀ ಹೈಪ್ ಸೃಷ್ಟಿ!
BBK13: 'ಪ್ರತಿ ವರ್ಷವೂ ನನ್ನ ಹೆಸರು ಕೇಳಿಬರುತ್ತೆ'... ಈ ಬಾರಿ ಬಿಗ್ ಬಾಸ್‌ಗೆ ಹೋಗ್ತಾರಾ ಮೇಘಾ ಶೆಟ್ಟಿ?