ಮ್ಯಾಕ್ಸಿಮಮ್ ಮಾಸ್ ಆಟ ಆರಂಭ: ಕಿಚ್ಚನ ಹುಟ್ಟುಹಬ್ಬಕ್ಕೆ 'ಮ್ಯಾಕ್ಸ್' ಮೊದಲ ಗೀತೆ ಬಿಡುಗಡೆ!

By Shriram Bhat  |  First Published Sep 2, 2024, 7:40 PM IST

'ಮ್ಯಾಕ್ಸ್' ಒಂದು ಮಾಸ್ ಚಿತ್ರವಾಗಿದ್ದು, ಇದನ್ನು ವಿಜಯ್ ಕಾರ್ತಿಕೇಯ ನಿರ್ದೇಶಿಸಿರುತ್ತಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ, ಮತ್ತು ಮುಂತಾದವರು ಈ ಚಿತ್ರದಲ್ಲಿ ನಟಿಸಿರುತ್ತಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ..


ಇಂದು (02 ಸೆಪ್ಟೆಂಬರ್ 2024) ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೀಗ ಸುದೀಪ್ ಅವರು ಬಹು ಬೇಡಿಕೆಯ ಚಿತ್ರ 'ಮ್ಯಾಕ್ಸ್' ತನ್ನ ಮೊದಲ ಗೀತೆ 'ಮ್ಯಾಕ್ಸಿಮಮ್ ಮಾಸ್...' ಅನ್ನು  ಬಿಡುಗಡೆ ಮಾಡಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬದ ಅಂಗವಾಗಿ‌ ಈ ಮಾಸ್ ಗೀತೆಯನ್ನು ಇಂದು ಬಿಡುಗಡೆ ಮಾಡಿ, ಎಲ್ಲೆಡೆ ಸದ್ದು ಮಾಡುತ್ತಿದೆ.

ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಈ‌ ಹಾಡಿಗೆ, ಖ್ಯಾತ ನಿರ್ದೇಶಕ ಅನೂಪ್ ಭಂಡಾರಿ ಸಾಹಿತ್ಯ ರಚಿಸಿದ್ದು, ಚೇತನ್ ಗಂಧರ್ವ ಮತ್ತು ಎಂಸಿ ಬಿಜ್ಜು ದನಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿರುತ್ತಾರೆ. ಒಟ್ಟಾರೆ ಅಭಿಮಾನಿಗಳಿಗೆ ಈ‌ ಮಾಸ್‌ ಗೀತೆಯು ರಸದೌತಣವನ್ನು ಉಣಬಡಿಸಿದೆ ಎಂದರೆ ಉತ್ಪ್ರೇಕ್ಷೆಯಲ್ಲ. ಈ ಗೀತೆ ಹೊಸ ಟ್ರೆಂಟ್ ಕ್ರಿಯೇಟ್ ಮಾಡುವುದರಲ್ಲಿ ಡೌಟೇ ಇಲ್ಲ ಎನ್ನಲಾಗುತ್ತಿದೆ.

Latest Videos

undefined

ಶೆಟ್ರೇ, ನೀವು ಎಷ್ಟು ಸಲ ಅಂತ ನಮ್ ಹೃದಯ ಗೆಲ್ತೀರಾ? ನಿಮ್ಮನ್ನ ನೋಡಿ ತುಂಬಾ ಕಲಿಯೋದಿದೆ ಅಂದಿದ್ಯಾರು?

'ಮ್ಯಾಕ್ಸ್' ಒಂದು ಮಾಸ್ ಚಿತ್ರವಾಗಿದ್ದು, ಇದನ್ನು ವಿಜಯ್ ಕಾರ್ತಿಕೇಯ ನಿರ್ದೇಶಿಸಿರುತ್ತಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ, ಮತ್ತು ಮುಂತಾದವರು ಈ ಚಿತ್ರದಲ್ಲಿ ನಟಿಸಿರುತ್ತಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ, ಕಲೈಪುಲಿ ಎಸ್ ತನು ವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿರುತ್ತಾರೆ.

ಅಂದಹಾಗೆ, ಜಯನಗರದ ಗ್ರೌಂಡ್‌ನಲ್ಲಿ ಕಿಚ್ಚ ಸುದೀಪ್ ಅವರು ಹುಟ್ಟುಹಬ್ಬವನ್ನು ಗ್ರಾಂಡ್‌ ಆಗಿ ಆಚರಿಸಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಅಲ್ಲಿ ಸೇರಿದ್ದರು. ಈ ವೇಳೆ ನಟ ಸುದೀಪ್ ಅವರು ತಮ್ಮ ಅಭಿಮಾನಿಗಳ ಶಿಸ್ತಿನ ನಡೆಯನ್ನು ಶ್ಲಾಘಿಸಿ ಮಾತನಾಡಿದ್ದಾರೆ. ಜೊತೆಗೆ, ತಾವು ಮನೆಯ ಬಳಿಈ ಬಾರಿ ಹುಟ್ಟುಹಬ್ಬ ಮಾಡಿಕೊಳ್ಳದೇ ಗ್ರೌಂಡ್‌ನಲ್ಲಿ ಆಚರಿಸಿಕೊಂಡ ಬಗ್ಗೆ ಕೂಡ ಸ್ಪಷ್ಟನೆ ನೀಡಿದ್ದಾರೆ. 

'ನನ್ನ ತಂದೆ-ತಾಯಿಗೆ 85-75 ವರ್ಷ ವಯಸ್ಸಾಗಿದೆ. ಹಾಗೇ ನಮ್ಮ ಅಕ್ಕಪಕ್ಕದ ಮನೆಯವ್ರನ್ನೂ ತಲೆಲ್ಲಿ ಇಟ್ಕೊಂಡಾಗ, ಹೀಗೆ ಮಾಡೋದು ಬೆಟರ್ ಅನ್ನಿಸ್ತು.. ಲಾಸ್ಟ್ ಟೈಮ್ ನನ್ನ ಹುಟ್ಟುಹಬ್ಬ ಚೆನ್ನಾಗಿಯೇ ಆದ್ರೂ ಆ ಬ್ಯಾರಿಕೇಡ್‌ಗಳು ಒಡೆದು ಎಲ್ಲಾ ತೊಂದ್ರೆಗಳಾದಾಗ, ನನ್ನ ಪೊಲೀಸ್ ಸಿಬ್ಬಂಧಿ ಮಿತ್ರರಿಗಾದ ತೊಂದರೆ ನೋಡಿದಾಗ, ಎಲ್ಲರೂ ಹೇಳಿದ್ರು, ಮನೆ ಹತ್ರ ಬೇಡ. 

ವಿಕ್ರಾಂತ್ ರೋಣ ಬಳಿಕ ಮತ್ತೆ ಒಂದಾದ ಸುದೀಪ್-ಅನೂಪ್; ಸಾಥ್ ಕೊಟ್ಟು ಹನುಮಾನ್ ನಿರ್ಮಾಪಕರು!

ಅದಕ್ಕೋಸ್ಕರ ಇಲ್ಲಿಗೆ ಬಂದಿದೀನಿ.. ತಮ್ಮನ್ನ ಭೇಟಿ ಮಾಡಬಾರದು ಅಂತಲ್ಲ, ಈ ಕ್ಷಮೆ ನನ್ನ ಮೇಲಿರಲಿ, ಬಟ್, ಇದನ್ನ ಸಾಧ್ಯ ಮಾಡೋದಕ್ಕೆ ಕೆಲಸ ಮಾಡಿದ ಎಲ್ಲರಿಗೂ ನಾನು ಕೃತಜ್ಞತೆ ಅರ್ಪಿಸುತ್ತಿದ್ದೇನೆ' ಎಂದಿದ್ದಾರೆ ಕನ್ನಡದ ಪ್ಯಾನ್ ಇಂಡಿಯಾ ಖ್ಯಾತಿಯ ನಟ ಕಿಚ್ಚ ಸುದೀಪ್. ನಟ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಇಂದು ಅಲ್ಲಿ ಬಹಳಷ್ಟು ಅಭಿಮಾನಿಗಳು ಸೇರಿದ್ದರು. 

click me!