ಶೆಟ್ರೇ, ನೀವು ಎಷ್ಟು ಸಲ ಅಂತ ನಮ್ ಹೃದಯ ಗೆಲ್ತೀರಾ? ನಿಮ್ಮನ್ನ ನೋಡಿ ತುಂಬಾ ಕಲಿಯೋದಿದೆ ಅಂದಿದ್ಯಾರು?

By Shriram Bhat  |  First Published Sep 2, 2024, 5:33 PM IST

ರಿಷಬ್ ಶೆಟ್ಟಿ ಅವರು ಸನಾತನ ಧರ್ಮದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ. ಮತ್ತು ಸಾಧ್ಯವಾದಾಗಲೆಲ್ಲಾಅವರು ತಮ್ಮ ಸುತ್ತಮುತ್ತಲಿನ ದೇವಾಲಯಗಳಿಗೆ ಭೇಟಿ ಕೊಡುತ್ತಾರೆ. ಈ ಸಾರಿ ಅವರ ಭೇಟಿ ಜೂನಿಯರ್ ಎನ್‌ಟಿಆರ್ ಹಾಗೂ ಪ್ರಶಾಂತ್ ಅವರೊಂದಿಗೆ ಆಗುತ್ತಿರುವುದು ವಿಶೇಷ...


ಸ್ಯಾಂಡಲ್‌ವುಡ್ ನಟ-ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು ದೇವಸ್ಥಾನಗಳ ಭೇಟಿ ಮುಂದುವರಿಸಿದ್ದಾರೆ. ಇತ್ತೀಚೆಗಷ್ಟೇ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದ ರಿಷಬ್ ಅವರು ಇದೀಗ ಮೂಡುಗಲ್ಲು ಕೇಶವನಾಥೇಶ್ವರ ದರ್ಶನ ಪಡೆದಿದ್ದಾರೆ. ನಟ ರಿಷಬ್ ಶೆಟ್ಟಿ ಅವರೊಂದಿಗೆ ಟಾಲಿವುಡ್ ನಟ ಜೂನಿಯರ್ ಎನ್‌ಟಿಆರ್ (Junior NTR) ಹಾಗು ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಕೂಡ ಜತೆಯಾಗಿದ್ದಾರೆ.  ಈ ಮೂಲಕ ತಮ್ಮ ಧಾರ್ಮಿಕ ಕ್ಷೇತ್ರ ಭೇಟಿ ಸರಣಿಯನ್ನು ಮುಂದುವರೆಸಿದ್ದಾರೆ. 

ಹೌದು, ರಿಷಬ್ ಶೆಟ್ಟಿ ಅವರು ಸನಾತನ ಧರ್ಮದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ. ಮತ್ತು ಸಾಧ್ಯವಾದಾಗಲೆಲ್ಲಾಅವರು ತಮ್ಮ ಸುತ್ತಮುತ್ತಲಿನ ದೇವಾಲಯಗಳಿಗೆ ಭೇಟಿ ಕೊಡುತ್ತಾರೆ. ಈ ಸಾರಿ ಅವರ ಭೇಟಿ ಜೂನಿಯರ್ ಎನ್‌ಟಿಆರ್ ಹಾಗೂ ಪ್ರಶಾಂತ್ ಅವರೊಂದಿಗೆ ಆಗುತ್ತಿರುವುದು ವಿಶೇಷ. ಸದ್ಯ ಅವರು ಮೂಡುಗಲ್ಲು ಕೇಶವನಾಥೇಶ್ವರನ ದರ್ಶನ ಪಡೆದಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. 

Tap to resize

Latest Videos

undefined

ವಿಕ್ರಾಂತ್ ರೋಣ ಬಳಿಕ ಮತ್ತೆ ಒಂದಾದ ಸುದೀಪ್-ಅನೂಪ್; ಸಾಥ್ ಕೊಟ್ಟು ಹನುಮಾನ್ ನಿರ್ಮಾಪಕರು!

ಮೊನ್ನೆ ಉಡುಪಿಗೆ ಹೋದ ಬೆನ್ನಲ್ಲೇ ಶ್ರಂಗೇರಿಗೆ ಕೂಡ ಹೋಗಿ ಬಂದಿದ್ದಾರೆ ತೆಲುಗು ನಟ ಜೂನಿಯರ್ ಎನ್‌ಟಿಆರ್. ಅವರ ಅಮ್ಮ ಕುಂದಾಪುರದವರು ಆಗಿರುವ ಕಾರಣಕ್ಕೆ ಅವರಿಗೆ ಬಾಲ್ಯದಿಂದಲೂ ತುಳುನಾಡು ಮಂಗಳೂರಿನ ನಂಟು ಇದೆ. ಹೀಗಾಗಿ ಅವರು ಸಾಧ್ಯವಾದಾಗಲೆಲ್ಲ ಮಂಗಳೂರಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಈ ಬಾರಿ ಅವರಿಗೆ ಪ್ರಶಾಂರ್ ನೀಲ್ ಹಾಗು ರಿಷಭ್ ಶೆಟ್ಟಿ ಜತೆಯಾಗಿದ್ದಾರೆ. 

ನಟ ರಿಷಬ್ ಶೆಟ್ಟಿ ಅವರಿಗೆ ಇತ್ತೀಚೆಗಷ್ಟೇ ಕಾಂತಾರ ಸಿನಿಮಾದ ಅಮೋಘ ನಟನೆಗಾಗಿ 'ನ್ಯಾಷನಲ್ ಅವಾರ್ಡ್' ದೊರಕಿದ್ದು ಗೊತ್ತೇ ಇದೆ. ಅವರ ಮುಂಬರುವ ಸಿನಿಮಾ 'ಕಾಂತಾರ - ಪ್ರೀಕ್ವೆಲ್' ಶೂಟಿಂಗ್ ಹಂತದಲ್ಲಿದೆ. ಅದಕ್ಕಾಗಿ ಅವರು ಬಹಳಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ ಹಾಗೂ ಮಾಡಿಕೊಳ್ಳುತ್ತಲೇ ಇದ್ದಾರೆ. ಕಾಂತಾರ ಸಿನಿಮಾವನ್ನು ನಿರ್ದೇಶಿಸಿ ಅದರಲ್ಲಿ ತಾರೇ ನಾಯಕರಾಗಿಯೂ ನಟಿಸಿದ್ದರು ರಿಷಬ್ ಶೆಟ್ಟಿ. 

ನಮ್ಮ ಅಭಿಮಾನಿಗಳು ನಮ್ಮದೇ ಪ್ರತಿಬಿಂಬ; ಕಿಚ್ಚ ಸುದೀಪ್ ಮಾತಿಗೆ ಬಿತ್ತು ಭಾರೀ ಚಪ್ಪಾಳೆ!

ಮುಂಬರುವ 'ಕಾಂತಾರ - ಪ್ರೀಕ್ವೆಲ್'ನಲ್ಲೂ ಅದೇ ಮುಂದುವರೆಯಲಿದೆ. ಅಂದಹಾಗೆ, ಸೋಷಿಯಲ್ ಮೀಡಿಯಾದಲ್ಲಿ ಒಬ್ಬರು 'ಶೆಟ್ರೇ... ನೀವು ಎಷ್ಟು ಸರಿ ನಮ್ ಹೃದಯ ಗೆಲ್ತೀರ.... ನಿಮ್ಮನ್ನ ನೋಡಿ ನಾವು ತುಂಬಾ ಕಲಿಯೋದಿದೆ...' ಎಂದು ಕಾಮೆಂಟ್ ಮಾಡಿದ್ದಾರೆ. ಅದನ್ನು ಬಹಳಷ್ಟು ಜನರು ಲೈಕ್ ಮಾಡಿದ್ದಾರೆ!

 

 

click me!