ಜೂನ್ 5ರಿಂದ ಸ್ಯಾಂಡಲ್‌ವುಡ್ ಶಟ್‌ಡೌನ್‌: ಚಿತ್ರೀಕರಣಕ್ಕೆ ಬ್ರೇಕ್

Published : Jun 03, 2023, 11:28 AM ISTUpdated : Jun 03, 2023, 11:51 AM IST
ಜೂನ್ 5ರಿಂದ ಸ್ಯಾಂಡಲ್‌ವುಡ್ ಶಟ್‌ಡೌನ್‌: ಚಿತ್ರೀಕರಣಕ್ಕೆ ಬ್ರೇಕ್

ಸಾರಾಂಶ

ಜೂನ್ 5ರಿಂದ ಸ್ಯಾಂಡಲ್‌ವುಡ್ ಶಟ್‌ಡೌನ್‌ ಆಗುತ್ತಿದೆ. ಹೊರಾಂಗಣ ಚಿತ್ರೀಕರಣಕ್ಕೆ ಬ್ರೇಕ್ ಬೀಳುತ್ತಿದೆ.  

ಜೂನ್ 5ರಿಂದ ಇಡೀ ಕನ್ನಡ ಸಿನಿಮಾರಂಗ ಶಟ್‌ಡೌನ್‌ ಆಗುತ್ತಿಗೆ. ಸಿನಿಮಾಗಳ ಹೊರಾಂಗಣ ಚಿತ್ರೀಕರಣಕ್ಕೆ ಬ್ರೇಕ್​ ಬೀಳುತ್ತಿದೆ. ಈ ಬಗ್ಗೆ ಹೊರಾಂಗಣ ಚಿತ್ರೀಕರಣ ಸಂಘದಿಂದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಂಬಳ ಹೆಚ್ಚಳ ಸೇರಿದಂತೆ ವಿವಿಧ ಬೇಡಿಗಳನ್ನು ಈಡೇರಿಸುವಂತೆ ಒತ್ತಾಯಿಸಿ  ಹೊರಾಂಗಣ ಚಿತ್ರೀಕರಣ ಕಾರ್ಮಿಕರ ಸಂಘ ಬಂದ್‌ಗೆ ಕರೆನೀಡಿದೆ. ಈ ಬಗ್ಗೆ ಹೊರಾಂಗಣ ಚಿತ್ರೀಕರಣ ಘಟಕದ ಅಧ್ಯಕ್ಷ ಎಹೆಚ್ ಭಟ್ ಬಹಿರಂಗ ಪಡಿಸಿದ್ದಾರೆ. 

ಹೊರಾಂಗಣ ಚಿತ್ರೀಕರಣ ಕಾರ್ಮಿಕರು ಕಳೆದ ಮೂರು ವರ್ಷಗಳಿಂದ ಬೇಡಿಕೆ ಇಡುತ್ತಾ ಬರುತ್ತಿದ್ದಾರೆ. ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಮಾಪಕರ ಸಂಘಕ್ಕೆ ಮನವಿ ಕೂಡ ಕೊಟ್ಟಿದ್ದಾರೆ.  ಆದ್ರೆ ಸಮಸ್ಯೆ ಬಗೆ ಹರಿಸದೇ ಫಿಲ್ಮ್ ಚೇಂಬರ್ ಮತ್ತು ನಿರ್ಮಾಪಕರ ಸಂಘ ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿ ಬಂದ್‌ಗೆ ಕರೆ ನೀಡಲಾಗಿದೆ. ಈ ಬಗ್ಗೆ ಯಾವುದೇ ಗಮನ ಹರಿಸದ ಕಾರಣ ಹೊರಾಂಗಣ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿದೆ.

 ಗೌರವ ಇಲ್ಲ ಕಡೆ ಇರಲ್ಲ;ಕನ್ನಡ ಚಿತ್ರರಂಗ ತೊರೆಯಲು ನಟ ಜೆಕೆ ನಿರ್ಧಾರ!

ಒಂದುವೇಳೆ ಸಮಸ್ಯೆ ಬಗೆ ಹರಿಸದಿದ್ದರೆ ಜೂನ್ 5 ನೇ ತಾರೀಖುನಿಂದ ಹೊರಾಂಗಣ ಚಿತ್ರೀಕರಣ ಬಂದ್ ಮಾಡಲು ಕಾರ್ಮಿಕರ ಸಂಘ ನಿರ್ಧರಿಸಿದೆ. ಅಷ್ಟೆ ಅಲ್ಲ ಪ್ರತಿ ವರ್ಷ ಸುಮಾರು 200 ರಿಂದ 300 ಚಿತ್ರಗಳು ಬಿಡುಗಡೆಯಾಗುತ್ತಿದೆ. ಸರ್ಕಾರ 125 ಚಿತ್ರಗಳಿಗೆ ಸಬ್ಸಿಡಿ ಕೊಡುತ್ತಿದೆ. ಇದನ್ನ ಪಡೆಯಬೇಕಾದ್ರೆ ಹೊರಾಂಗಣ ಚಿತ್ರೀಕರಣ ಸರಬರಾಜು ಮಾಡುವ ಮಾಲೀಕರ ಸಹಿ ಇರಬೇಕು. ಆದರೆ ಹಾಗೆ ನಡೆಯುತ್ತಿಲ್ಲ ಎಂದು ಎಹೆಚ್ ಭಟ್ ಆರೋಪಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!
ಈಗ್ಲೇ ದರ್ಶನ್ 'ಡೆವಿಲ್'ಗೆ ಯಾಕೆ ಟೆನ್ಷನ್..? ನರ್ತಕಿ ಚಿತ್ರಮಂದಿರದ ಮೇಲೆ ಬೇರೆ ಸ್ಟಾರ್‌ಗಳ ಕಣ್ಣು ಬಿತ್ತಾ?