ದಿಢೀರ್ ಕೊರಗಜ್ಜನ ಕ್ಷೇತ್ರಕ್ಕೆ ಬಂದ ನಟಿ ರಚಿತರಾಮ್: ದೇವರ ಬಳಿ ಕೇಳಿಕೊಂಡಿದ್ದೇನು?

Published : May 31, 2023, 03:25 PM IST
ದಿಢೀರ್ ಕೊರಗಜ್ಜನ ಕ್ಷೇತ್ರಕ್ಕೆ ಬಂದ ನಟಿ ರಚಿತರಾಮ್: ದೇವರ ಬಳಿ ಕೇಳಿಕೊಂಡಿದ್ದೇನು?

ಸಾರಾಂಶ

ನಟಿ ರಚಿತಾ ರಾಮ್ ದಿಢೀರ್ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ದೇವರ ಬಳಿ ಮುಂದಿನ ಸಿನಿಮಾಗಳ ಯಶಸ್ಸಿನ ಬಗ್ಗೆ ಕೇಳಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದಾ ಶೂಟಿಂಗ್ ಅಂಥ ಬ್ಯುಸಿಯಾಗಿರುವ ನಟಿ ರಚಿತಾ ರಾಮ್ ಬಿಡುವು ಮಾಡಿಕೊಂಡು ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಇಂದು (ಮೇ 31) ಡಿಂಪಲ್ ಕ್ವೀನ್ ಮಂಗಳೂರಿನ ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮಂಗಳೂರಿನ ಹೊರವಲಯದ ಕುತ್ತಾರು ಬಳಿ ಇರುವ ಕೊರಗಜ್ಜನ ಕ್ಷೇತ್ರ ಇದಾಗಿದೆ. 

ರಚಿತಾ ನಟನೆಯ ಸಿನಿಮಾಗಳು ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಸಾಲು ಸಾಲು ಸಿನಿಮಾಗಳು ನೆಲಕಚ್ಚಿವೆ. ಹಾಗಾಗಿ ಸಿನಿಮಾ ಸಕ್ಸಸ್‌ಗಾಗಿ ಕೊರಗಜ್ಜನ ಮೊರೆ ಹೋಗಿದ್ದಾರೆ. ಮುಂದಿನ ಸಿನಿಮಾಗಳು ಯಶಸ್ಸು ಕಾಣಲಿ ಎಂದು ಕೊರಗಜ್ಜನ ಬಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ ರಚಿತಾ ರಾಮ್. ತಮ್ಮ ನಟನೆಯ ಹೊಸ ಚಿತ್ರಗಳಾದ ಮ್ಯಾಟ್ನಿ, ಬ್ಯಾಡ್ ಮ್ಯಾನರ್ಸ್ ಯಶಸ್ಸಿಗಾಗಿ ಪ್ರಾರ್ಥನೆ ಮಾಡಿದ್ದಾರೆ. ವಿಶೇಷ ಪೂಜೆ ಸಲ್ಲಿಸಿದ ರಚಿತಾ ರಾಮ್2ಗೆ ಕೊರಗಜ್ಜನ ಆದಿ ಕ್ಷೇತ್ರದ ವತಿಯಿಂದ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು. 

ರಚಿತಾ ಪ್ರತಿಕ್ರಿಯೆ 

ಕೊರಗಜ್ಜನ ಭೇಟಿ ಮಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ನಟಿ ರಚಿತಾ ರಾಮ್ ಪ್ರತಿಕ್ರಿಯೆ ನೀಡಿದ್ದಾರೆ. 'ನನ್ನ ಸ್ನೇಹಿತರೆಲ್ಲರೂ ಕೊರಗಜ್ಜ ದೈವದ ಕಾರ್ಣಿಕದ ಬಗ್ಗೆ ಹೇಳಿದ್ದರು. ಹಾಗಾಗಿ ನನಗೂ ಇಲ್ಲಿಗೆ ಬರಬೇಕು ಅನ್ನಿಸಿತು, ಬಂದ್ಬಿಟ್ಟೆ. ಕೊರಗಜ್ಜನ‌ ಕ್ಷೇತ್ರವು ಪ್ರಾಕೃತಿಕ ಸೌಂದರ್ಯವನ್ನೊಳಗೊಂಡಿದ್ದು, ತುಂಬಾ ಚೆನ್ನಾಗಿದೆ.  ಮುಂದಿನ ಜೂನ್ ತಿಂಗಳಲ್ಲಿ ಮ್ಯಾಟ್ನಿ ಮತ್ತು ಬ್ಯಾಡ್ ಮ್ಯಾನರ್ಸ್ ಚಿತ್ರಗಳು ತೆರೆ ಕಾಣಲಿದೆ. ಆ ಚಿತ್ರಗಳು ಯಶಸ್ಸು ಕಾಣಲಿ ಎಂದು ಕೊರಗಜ್ಜನಲ್ಲಿ ಪ್ರಾರ್ಥಿಸಿದೆ' ಎಂದು ಹೇಳಿದ್ದಾರೆ. 

ಕೋಟಿ ದುಡಿದರೂ ಆಭರಣ ಹಾಕಿಲ್ಲ; ರಚಿತಾ ರಾಮ್ ಸಿಂಪ್ಲಿಸಿಟಿ ಮೆಚ್ಚಿದ ನೆಟ್ಟಗರು

ರಚಿತಾ ಸಿನಿಮಾ ಬಗ್ಗೆ 

ನಟಿ ರಚಿತಾ ರಾಮ್ 2013ರಲ್ಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಬುಲ್ ಬುಲ್ ಸಿನಿಮಾ ಮೂಲಕ ಬಣ್ಣದ ಲೋಕದ ಪಯಣ ಪ್ರಾರಂಭಿಸಿದ ನಟಿ ರಚಿತಾ ರಾಮ್ ಮೊದಲ ಸಿನಿಮಾದಲ್ಲೇ ಸಕ್ಸಸ್ ಕಂಡರು. ಬಳಿಕ ಅನೇಕ ಸಿನಿಮಾಗಳಲ್ಲಿ ರಚಿತಾ ಮಿಂಚಿದ್ದಾರೆ. ಆದರೆ ಇತ್ತೀಚಿಗೆ ರಚಿತಾ ನಟನೆಯ ಯಾವ ಸಿನಿಮಾಗಳು ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಹಾಗಾಗಿ ಈಗ ಕೊರಗಜ್ಜನ ಮೊರೆ ಹೋಗಿದ್ದು ಸಿನಿಮಾ ಸಕ್ಸಸ್ ಬಗ್ಗೆ ಕೇಳಿಕೊಂಡಿದ್ದಾರೆ. 

ತಮಿಳು ಧಾರಾವಾಹಿಯಲ್ಲಿ ನಟಿ ರಚಿತಾ ರಾಮ್ ಸಹೋದರಿ; ಗರಂ ಆದ ಕನ್ನಡಿಗರು!

ಸದ್ಯ ರಚಿತಾ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವೀರಂ, ಮ್ಯಾಟ್ನಿ, ಬ್ಯಾಡ್ ಮ್ಯಾನರ್ಸ್, ಶಬರಿ ಸರ್ಚಿಂಗ್ ಫಾರ್ ರಾವಣ, ಲವ್ ಮಿ ಆರ್ ಹೇಟ್ ಮಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅಭಿಷೇಕ್ ಅಂಬರೀಶ್ ಜೊತೆ ನಟಿಸಿರುವ ಬ್ಯಾಡ್ ಮ್ಯಾನರ್ಸ್ ಸಿನಿಮಾ ರಿಲೀಸ್‌ಗೆ ಸಿದ್ಧವಾಗುತ್ತಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
ಕರ್ನಾಟಕ ನನ್ನ ಅಣ್ಣನ ಮನೆ.. 'ಅಖಂಡ 2'ನಲ್ಲಿ ಬಾಲಯ್ಯ ಡೈಲಾಗ್‌ಗೆ ಶಿಳ್ಳೆ-ಚಪ್ಪಾಳೆ ಜೈಜೈ ಘೋಷ!