ಉಪೇಂದ್ರ 'UI' ಸಿನಿಮಾ ಬ್ಯಾನ್ ಆಗ್ಬೇಕು, ಈ ಕೂಗಾಟ ಶುರುವಾಗಿದ್ದು ಯಾಕೆ, ಯಾರ ಕುಮ್ಮಕ್ಕು?

By Shriram Bhat  |  First Published Dec 21, 2024, 4:55 PM IST

ಯುಐ (UI) ಸಿನಿಮಾ ಮೂಲಕ ಸದ್ಯ ತುಂಬಾ ಟ್ರೆಂಡಿಂಗ್‌ನಲ್ಲಿ ಇರೋದು ಗೊತ್ತೇ ಇದೆ. ಈ ಯುಐ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ ಅಂತ ಹೇಳೋ ಹಾಗಿಲ್ಲ. ಏಕೆಂದರೆ, ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂಬ ಎರಡು ಅಭಿಪ್ರಾಯ ಬಂದರೆ ಅದಕ್ಕೆ ನಾವು ಮಿಶ್ರ ಪ್ರತಿಕ್ರಿಯೆ ಎನ್ನಬಹುದು. ಆದರೆ, ಇಲ್ಲಿ, ಕೆಲವೊಬ್ಬರು..


ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ (Upendra) ಅವರು ಯುಐ (UI) ಸಿನಿಮಾ ಮೂಲಕ ಸದ್ಯ ತುಂಬಾ ಟ್ರೆಂಡಿಂಗ್‌ನಲ್ಲಿ ಇರೋದು ಗೊತ್ತೇ ಇದೆ. ಈ ಯುಐ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ ಅಂತ ಹೇಳೋ ಹಾಗಿಲ್ಲ. ಏಕೆಂದರೆ, ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂಬ ಎರಡು ಅಭಿಪ್ರಾಯ ಬಂದರೆ ಅದಕ್ಕೆ ನಾವು ಮಿಶ್ರ ಪ್ರತಿಕ್ರಿಯೆ ಎನ್ನಬಹುದು. ಆದರೆ, ಇಲ್ಲಿ, ಕೆಲವೊಬ್ಬರು ಸೂಪರ್ ಆಗಿದೆ, ಹಿಂದೆ ಇಂಥ ಸಿನಿಮಾ ಬಂದಿರಲಿಲ್ಲ, ತುಂಬಾ ಚೆನ್ನಾಗಿದೆ ಎನ್ನುತ್ತಿದ್ದರೆ ಕೆಲವರು 'ಅರ್ಥ ಆಗುತ್ತಿಲ್ಲ' ಎನ್ನುತ್ತಿದ್ದಾರೆ. ಹೀಗಿದ್ದಾಗ ಏನು ಹೇಳೋದು?

ಈ ಯುಐ ಸಿನಿಮಾ ನೋಡಿ ತಲೆ ಕೆಡಿಸಿಕೊಂಡು ಬಹಳಷ್ಟು ಜನರು ರಿವ್ಯೂ ಮಾಡುತ್ತಿದ್ದಾರೆ. ಕಥೆಯ ಗುಟ್ಟು ಬಿಟ್ಟುಕೊಡದೇ ಸಿನಿಮಾ ರಿವ್ಯೂ ಮಾಡಬೇಕಾಗಿರುವ ಕಾರಣಕ್ಕೆ ಅವರೆಲ್ಲರೂ ಕೂಡ ಸಾಕಷ್ಟು ಬುದ್ಧಿವಂತಿಕೆ ತೋರಿಸಬೇಕಿದೆ. ಕಾರಣ, ಸಿನಿಮಾವನ್ನು ಸರಿಯಾಗಿ ವಿಮರ್ಶೆ ಮಾಡಿಬಿಟ್ಟರೆ ಇದೂ ಒಂಥರಾ ಫೈರಸಿಯೇ ಆಗುತ್ತದೆ. ಹೀಗಾಗಿ ಸಿನಿಮಾ ಕಥೆಯ ಸೀಕ್ರೆಟ್ ಸಂಪೂರ್ಣೌಆಗಿ ಬಿಟ್ಟುಕೊಡದೇ ಅದೆಷ್ಟು ಹೇಳಲು ಸಾಧ್ಯವೋ ಅಷ್ಟನ್ನು ಹೇಳುತ್ತಿದ್ದಾರೆ ಮಾಧ್ಯಮಗಳು ಹಾಗೂ ಸೋಷಿಯಲ್ ಮಾಧ್ಯಮಗಳು. 

Tap to resize

Latest Videos

undefined

ತಲೆಗೆ ಹುಳು ಬಿಟ್ಟು ಕೊಳ್ಳೋ ಹಾಗೆ 'ಯುಐ' ಚಿತ್ರ ಮಾಡಿದ್ದೇಕೆ ಉಪ್ಪಿ? ಒಳಗುಟ್ಟು ಇಲ್ಲಿದೆ!

ಆದರೂ ಕೂಡ ಯುಐ ಸಿನಿಮಾ ರೀವ್ಯೂ ಮಾಡಲು ಎಲ್ಲರೂ ತುಂಬ ಕಷ್ಟ ಪಡುತ್ತಿದ್ದಾರೆ ಎನ್ನಬಹುದು. ಕಾರಣ, ಈ ಸಿನಿಮಾದಲ್ಲಿ ಮತ್ತೊಂದು ಸಿನಿಮಾವಿದೆ. ಅವಳಿ ಹುಡುಗರ ಕಥೆಯಿದೆ, ಒಂದರೊಳಗೊಂದು ಮಿಕ್ಸ್ ಮಾಡದೇ ಸಿನಿಮಾ ಚಿತ್ರಕಥೆ ಸಾಗದು. ಹೀಗಿರುವಾಗ ನಿರ್ದೇಶಕ ಹಾಗು ನಟ ಉಪೇಂದ್ರ ಬಹಳಷ್ಟು ಬುದ್ಧಿವಂತಿಕೆಯಿಂದ ತಲೆ ಓಡಿಸಿ ಬುದ್ಧಿವಂತರು ಮಾತ್ರ ಅರ್ಥ ಮಾಡಿಕೊಳ್ಳುವ ಹಾಗೆ ಸಿನಿಮಾ ಮಾಡಿದ್ದಾರೆ ಎನ್ನಬಹುದು. ಇದು ಅವರಿಗೆ ಅನಿವಾರ್ಯ ಕೂಡ!

'ಸಿನಿಮಾ ಒಂದಕ್ಕೆ ವಿಮರ್ಶೆ ಬರೆಯಲು ಸಾಧ್ಯವಾಗದೇ ಚಿತ್ರ ವಿಮರ್ಶಕನೊಬ್ಬ ತಲೆ ಕೆಡಿಸಿಕೊಂಡಿದ್ದಾನೆ. ಅದೆಷ್ಟೇ ಬಾರಿ ನೋಡಿದರೂ ಅವನಿಗೆ ಸಿನಿಮಾ ಅರ್ಥವೇ ಆಗುವುದಿಲ್ಲ. ಆಗ ಈ ಬಗ್ಗೆ ತಿಳಿದುಕೊಳ್ಳಲು ಆ ಚಿತ್ರದ ನಿರ್ದೇಶಕ ಉಪೇಂದ್ರ ಅವರನ್ನು ಹುಡುಕಿಕೊಂಡು ಹೋಗ್ತಾನೆ. ಅಲ್ಲಿ ಅವರು ಸಿಗಲ್ಲ. ಆದರೆ, ಅವರು ಬರೆದು ಸುಟ್ಟು ಹಾಕಲು ಹೋಗಿದ್ದ ಕಥೆಯ ಪ್ರತಿ ಸಿಗುತ್ತದೆ. ಅದನ್ನು ಆ ವಿಮರ್ಶಕ ಓದುತ್ತಾನೆ. 

ಡಾ ರಾಜ್‌ ಫ್ಯಾಮಿಲಿ ಹ್ಯಾಂಡಲ್‌ ಮಾಡೋದು ಕಲಿತಿದ್ದಾರೆ ಸುದೀಪ್ ಅಂದಿದ್ಯಾರು?

ಆ ನಾಮದ ಕಥೆ ಏನು? ಉಪೇಂದ್ರ ಅದನ್ನು ಸುಟ್ಟು ಹಾಕಲು ಯಾಕೆ ಬಯಸಿದ್ದು? ಅದೆಲ್ಲವನ್ನೂ ನೋಡುವ ಕಲ್ಕಿ, ಅದ್ಯಾಕೆ ಹಾಗೆ ನಡೆದುಕೊಳ್ಳುತ್ತಾನೆ? ಕಲ್ಕಿ-ಸತ್ಯ ಅವರಿಬ್ಬರ ಕಥೆಯೇನು? ಈ ಎಲ್ಲವೂ ಸರಿ, ಇನ್ನುಳಿದಿದ್ದೇ ಯುಐ ಸಿನಿಮಾ'. ಹಾಗಿದ್ದರೆ ಇಷ್ಟು ಸಿಂಪಲ್ ಕಥೆ ಸಿನಿಪ್ರೇಕ್ಷಕರಿಗೆ ಯಾಕೆ ಅರ್ಥವಾಗುವುದಿಲ್ಲ. ಅದು ಗೊತ್ತಾಗುತ್ತಿಲ್ಲ, ಅವರನ್ನೇ, ಅಂದರೆ ಅರ್ಥ ಆಗಿಲ್ಲ ಎನ್ನವವರನ್ನೇ ಕೇಳಬೇಕು! ಅದು ಸ್ವತಃ ಉಪೇಂದ್ರ ಅವರಿಗೂ ಅರ್ಥವಾಗಲಾರದು!

ಸಿನಿಮಾ ನೋಡಿದ ಮಂದಿಗೆ ಗೊತ್ತಿದೆ. ಅಲ್ಲಿ ಸಿನಿಮಾದಲ್ಲಿ, ಸಿನಿಮಾ ನೋಡಿದ ಮಂದಿ 'ಉಪೇಂದ್ರ ಸಿನಿಮಾ ಇನ್ಮೇಲೆ ಬ್ಯಾನ್ ಆಗ್ಬೇಕು' ಅಂತ ಸ್ಟ್ರೈಕ್ ಮಾಡುತ್ತಾರೆ. ಅದು ಉದ್ದೇಶಪೂರ್ವಕವಾಗಿ ಉಪ್ಪಿಯವರೇ ಮಾಡಿದ್ದಾರೆ. ಏಕೆಂದರೆ, ಜನರಿಗೆ ಸತ್ಯ ಹೇಳಿದರೆ ಅರ್ಥವಾಗುವುದಿಲ್ಲ, ಅದು ಅವರಿಗೆ ಬೇಕಾಗಿಯೂ ಇಲ್ಲ, ಸತ್ಯ ಹೇಳುವವರನ್ನು, ಸತ್ಯ ತೋರಿಸುವ ಸಿನಿಮಾವನ್ನು ಜನರು ಮುಂದೊಂದು ದಿನ ಬ್ಯಾನ್ ಮಾಡಲು ಹೇಳಬಹುದು ಎಂಬುದನ್ನು ಉಪ್ಪಿ 'ಸೂಚ್ಯ'ವಾಗಿ ತಮ್ಮ 'ಯುಐ' ಸಿನಿಮಾದಲ್ಲಿ ಹೇಳಿದ್ದಾರೆ. ಅದು ಸಿನಿಮಾದಲ್ಲಿ ಅಷ್ಟೇ, ನಿಜವಾಗಿ ಯುಐ ಸಿನಿಮಾ ಬ್ಯಾನ್ ಮಾಡಿ ಅಂತ ಗಲಾಟೆ ಆಗುತ್ತಿಲ್ಲ.

ಚಂದನ್ ಶೆಟ್ಟಿ ವಿಡಿಯೋ ವೈರಲ್, ಅದ್ಯಾಕೆ ಮುಖದ ತುಂಬಾ ಬೆವರು ಸುರಿದ್ರೂ ಬಿಡ್ತಿಲ್ಲ? 

click me!