2ನೇ ಮದ್ವೆ ಆಗೋ ಆಲೋಚನೆ ಬಂದಿದ್ದು ಸುಳ್ಳುಲ್ಲ, ಆ ವ್ಯಕ್ತಿ ಸರಿ ಅಂದ್ರೆ ಚಿರು ಒಪ್ಪಿಗೆ ಕೊಡ್ತಾನೆ: ಮೇಘನಾ ರಾಜ್

Published : Mar 08, 2025, 11:39 AM ISTUpdated : Mar 08, 2025, 11:50 AM IST
2ನೇ ಮದ್ವೆ ಆಗೋ ಆಲೋಚನೆ ಬಂದಿದ್ದು ಸುಳ್ಳುಲ್ಲ, ಆ ವ್ಯಕ್ತಿ ಸರಿ ಅಂದ್ರೆ ಚಿರು ಒಪ್ಪಿಗೆ ಕೊಡ್ತಾನೆ: ಮೇಘನಾ ರಾಜ್

ಸಾರಾಂಶ

ಮೇಘನಾ ರಾಜ್ ಎರಡನೇ ಮದುವೆ ಬಗ್ಗೆ ಹಬ್ಬಿದ್ದ ಗಾಸಿಪ್‌ಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ರಾಯನ್‌ಗೆ ತಂದೆಯ ಸ್ಥಾನದ ಬಗ್ಗೆಯೂ ಮಾತನಾಡಿದ್ದಾರೆ. ಸಮಾಜದ ನಿರೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಚಿರು ಅಗಲಿದ ನಂತರ ಅವರ ಆಶೀರ್ವಾದ ರೂಪದಲ್ಲಿ ಸಹಾಯ ಸಿಗುತ್ತಿದೆ ಎಂದು ಹೇಳಿದ್ದಾರೆ. ಜೀವನದಲ್ಲಿ ಮುಂದೆ ಯಾರಾದರೂ ಬಂದರೆ ಚಿರು ಅವರೇ ನಿರ್ಧರಿಸುತ್ತಾರೆ ಎಂದಿದ್ದಾರೆ.

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್ ಎರಡನೇ ಮದ್ವೆ ಮಾಡಿಕೊಳ್ಳುತ್ತಾರಾ? ಎರಡು ಮದ್ವೆ ಬಗ್ಗೆ ಆಲೋಚನೆ ಇದ್ಯಾ? ರಾಯನ್ ರಾಜ್‌ಗೆ ತಂದೆ ಸ್ಥಾನದಲ್ಲಿ ಯಾರೂ ಬೇಡ್ವಾ? ರಾಯನ್ ಅಪ್ಪ ಅಂತ ಕೇಳುವುದಿಲ್ವಾ? ಎಂದು ಸಾಕಷ್ಟು ಪ್ರಶ್ನೆಗಳು ಎದುರಾಗಿತ್ತು. ಇಷ್ಟೂ ಗಾಸಿಪ್‌ಗಳ ಬಗ್ಗೆ ಸ್ಪಷ್ಟ ಕ್ಲಾರಿಟಿ ನೀಡಿದ ಮೇಘನಾ ರಾಜ್ ಸರ್ಜಾ.  

'ಮೇಘನಾ ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದಾಳೆ ಅಂತ ಗಾಸಿಪ್ ಎದ್ದಿದ್ದು ನೋಡಿ ಬೇಸರ ಆಗಿದ್ದ ಎಂಟರ್ಟೈನ್‌ ಆಗ್ತೀನಿ ಅಷ್ಟೇ. ಜನರು ಹೀಗೆ ಮಾತನಾಡುವುದು ಅಂತ ನಾವು ಒಪ್ಪಿಕೊಳ್ಳಬೇಕು ಏಕೆಂದರೆ ನನ್ನ ಬಗ್ಗೆ ಮಾತ್ರವಲ್ಲ ವಿಜಯ್ ರಾಘವೇಂದ್ರ ಬಗ್ಗೆನೂ ಹೀಗೆ ಮಾತನಾಡಿದ್ದಾರೆ. ಈ ರೀತಿ ಮಾತನಾಡುವುದರಿಂದ ಆಕೆಗೆ ಖುಷಿ ಕೊಡುತ್ತದೆ ಅಂತ ಮಾಡ್ತಾರೋ ಅಥವಾ ಅವಳನ್ನು ಮತ್ತೆ ಹೆಚ್ಚು ಹರ್ಟ್ ಮಾಡೋಣ ಅಂತ ಮಾಡುತ್ತಿದ್ದಾರೋ ಗೊತ್ತಿಲ್ಲ. ರಾಯನ್‌ಗೆ ತಂದೆ ಅಂದ್ರೆ ಚಿರು ಇದ್ದಾರೆ. ರಾಯನ್‌ಗೆ ಫಿಸಿಕಲಿ ತಂದೆ ಬೇಕು ಅನ್ನೋ ಆಲೋಚನೆ ನನಗೆ ಬಂದಿಲ್ಲ ಅಂತ ಹೇಳಿದರೆ ಸುಳ್ಳಾಗುತ್ತದೆ. ಏಕೆಂದರೆ ಮಹಿಳೆಯಾಗಿ ನನ್ನ ಮಗನನ್ನು ನೋಡಿರೆ ಅನಿಸುತ್ತದೆ ಏಕೆಂದರೆ ಚಿರು ಬಗ್ಗೆ ಮಾತನಾಡದ ದಿನವಿಲ್ಲ. ದಿನ ಚಿರು ಹಾಡುಗಳು ನೋಡುತ್ತಾನೆ, ಸಿನಿಮಾಗಳು ನೋಡುತ್ತಾನೆ ಅಪ್ಪ ಬಗ್ಗೆ ಹೇಳುತ್ತಿರುತ್ತೀನಿ. ಒಂದೊಂದು ಗುಣಗಳು ಚಿರು ರೀತಿ ಇದೆ ಹೀಗಾಗಿ ನಿಮ್ಮ ಅಪ್ಪನ ತರ ಮಾಡೋದು ನೀನು ಅಂತಲೇ ಹೇಳುತ್ತಿರುತ್ತೀನಿ. ತಂದೆ ಅಂತ ಒಬ್ಬರು ನಮ್ಮ ಜೀವನದಲ್ಲಿ ಇದ್ದಾರೆ ಅನ್ನೋದು ರಾಯನ್‌ಗೆ ಗೊತ್ತಿದೆ. ಹೌದು ಫಿಸಿಕಲ್‌ ಫಿಗರ್ ಇದ್ರೆ ಚೆನ್ನಾಗಿರುತ್ತದೆ ಅನಿಸುತ್ತದೆ ಆ ಆಲೋಚನೆ ನನಗೆ ಬಂದಿದೆ' ಎಂದು ಆರ್‌ಜೆ ಮಯೂರ ಯೂಟ್ಯೂಬ್ ಚಾನೆಲ್‌ನಲ್ಲಿ ಮೇಘನಾ ರಾಜ್ ಮಾತನಾಡಿದ್ದಾರೆ. 

ದುಡ್ಡು ಕೊಡ್ತಾರೆ ಎಂತ ಪ್ರಮೋಷನ್ ಮಾಡೋಕೆ ಆಗಲ್ಲ, ಇದುವರೆಗೂ ಕೆಟ್ಟ ಪದ ಬಳಸಿಲ್ಲ: ಧನರಾಜ್

'ಸಮಾಜದಲ್ಲಿ ಒಪ್ಪಿಕೊಳ್ಳುತ್ತಾರೋ ಅನ್ನೊದಕ್ಕಿಂತ ಜನರು ನನ್ನ ಬಗ್ಗೆ ಏನು ಯೋಚನೆ ಮಾಡುತ್ತಾರೆ ಅಂತ ತಲೆ ಕೆಡಿಸಿಕೊಳ್ಳುವುದಿಲ್ಲ. ನಿಜಕ್ಕೂ ಅದು ದೊಡ್ಡ ಪ್ರೆಶರ್ ಆಗಿರುತ್ತದೆ. ನನ್ನ ಬಗ್ಗೆ ನಾನೇ ಒಂದು ಇಮೇಜ್ ಕ್ರಿಯೇಟ್ ಮಾಡಿಕೊಂಡರೆ ನನಗೆ ನಾನು ಮಾಡಿಕೊಂಡಿದ್ದು ಅಂತ ಆಗುತ್ತೆ ಆದರೆ ನನ್ನ ಸಿನಿಮಾದಿಂದ ನೋಡಿ ಸೋಷಿಯಲ್ ಮೀಡಿಯಾದಲ್ಲಿ ಫಾಲೋ ಮಾಡುವ ಫ್ಯಾಮಿಲಿ ಸೇರಿಕೊಂಡು ಒಂದು ಇಮೇಜ್ ಕ್ರಿಯೇಟ್ ಮಾಡುತ್ತಿದ್ದಾರೆ. ಇದು ನಾನು ಮಾಡಿರುವುದು ಅಲ್ಲ ಅವರು ಮಾಡಿರುವುದರಿಂದ ನನಗೆ ಪ್ರೆಶರ್ ಆಗುತ್ತಿದೆ. ಏನಾದರೂ ಬೇರೆ ರೀತಿ ಯೋಚನೆ ಮಾಡಬೇಕು ಅಂದ್ರೆ ಆಗುತ್ತಿಲ್ಲ. ಇಂಡಸ್ಟ್ರಿಯಲ್ಲಿ ನನ್ನ ಸ್ಥಾನವನ್ನು ಎದುರಿಸಿರುವ ವ್ಯಕ್ತಿಯೊಬ್ಬರು ಅಕ್ಕನ ಸ್ಥಾನದಲ್ಲಿ ನಿಂತುಕೊಂಡು ನೀನು ಮತ್ತೊಬ್ಬರ ಜೊತೆ ಖುಷಿಯಾಗಿ ಇರುವುದನ್ನು ನೋಡಬೇಕು ಅನ್ನುತ್ತಿದ್ದರು. ನನ್ನ ಜೀವನದಲ್ಲಿ ಮುಂದೆ ಯಾರಾದರೂ ವ್ಯಕ್ತಿ ಬಂದ್ರೆ ಅವರು ಸರಿ ಎಂದು ಚಿರು ಮುಂದೆವರೆಸುತ್ತಾನೆ. ಆಗುತ್ತಿಲ್ಲ ಅಂದ್ರೆ ಚಿರು ತಡೆಯುತ್ತಿದ್ದಾರೆ. ಏನೇ ಆದರೂ ಚಿರು ನನ್ನ ಜೊತೆಗಿದ್ದಾನೆ. ನಾನು ಹೀಗೆ ಇರುವುದು ಬೆಸ್ಟ್‌ ಅನಿಸಿದರೆ ಚಿರು ನೋಡಿಕೊಳ್ಳುತ್ತಾರೆ. ನನ್ನ ಸುತ್ತ ಇರುವ ಎನರ್ಜಿಗಳ ಬಗ್ಗೆ ನಂಬಿಕೆ ಇದೆ. ಚಿರು ಅಗಲಿದ ಮೇಲೆ ಅದೆಷ್ಟೋ ಮಿರಾಕಲ್ ರೀತಿಯಲ್ಲಿ ನನಗೆ ಆಶೀರ್ವಾದ ಸಿಕ್ಕಿದೆ. ದೇವರ ಹತ್ತಿರ ಹೋಗಿದ್ದಾನೆ ಹೀಗಾಗಿ ನನಗೆ ಒಳ್ಳೆಯದನ್ನು ಮಾಡುತ್ತಿದ್ದಾನೆ' ಎಂದು ಮೇಘನಾ ರಾಜ್ ಹೇಳಿದ್ದಾರೆ. 

ಅಪ್ಪ ಕೊಟ್ಟ 100 ರೂ. ಖರ್ಚು ಮಾಡಿದ್ದಕ್ಕೆ ಪ್ರಶ್ನೆ ಮಾಡಿದ್ರು ಅಂತ ತಿಂಗಳಿಗೆ 12 ಸಾವಿರ ದುಡಿಯಲು ಶುರು ಮಾಡ್ದೆ: ಮೋಕ್ಷಿತಾ

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Yash Toxic Day 1 Box Collection: ಯಶ್ ‘ಟಾಕ್ಸಿಕ್’ ಮೊದಲ ದಿನದ ಕಲೆಕ್ಷನ್ ಎಷ್ಟು?
ರಣರಣ ರಣರಂಗದ ನಡುವೆ ಪ್ರೇಮ, ಕಾಮ, ನಿರ್ನಾಮ: ‘ಟಾಕ್ಸಿಕ್’ನಲ್ಲಿ ಇದೆ ಮತ್ತೊಂದು ಕಥೆ!