
ಈ ಮಾತು ಸಂದರ್ಶನವೊಂದರಲ್ಲಿ ಡಾ ರಾಜ್‌ಕುಮಾರ್ (Dr rajkumar) ಪತ್ನಿ ಪಾರ್ವತಮ್ಮ ರಾಜ್‌ಕುಮಾರ್ (Parvathamma Rajkumar) ಅವರು ಹೇಳಿರುವ ಮಾತು. ಡಾ ರಾಜ್‌ಕುಮಾರ್ ಕುಟುಂಬ ಈಗ ಶ್ರೀಮಂತರು. ಆದರೆ, ಡಾ ರಾಜ್‌ಕುಮಾರ್ ಅವರನ್ನು ಪಾರ್ವತಮ್ಮನವರು ಮದುವೆಯಾದಾಗ ಅವರ ಮನೆಯಲ್ಲಿ ಬಡತನವಿತ್ತು. ಎಲ್ಲರೂ ಗಂಜಿಯನ್ನೇ ಊಟ ಮಾಡುವಂಥ ಪರಿಸ್ಥಿತಿ ಇತ್ತು ಎನ್ನುವುದು ಹಲವರಿಗೆ ಗೊತ್ತಿರುವಂಥ ಸಂಗತಿ. ಆ ಸಮಯದಲ್ಲಿ, ಪರಿಸ್ಥಿತಿಯಲ್ಲಿ ನಡೆದಿದ್ದ ಘಟನೆಯೊಂದನ್ನು ಪಾರ್ವತಮ್ಮನವರು ಅಂದು ಹಂಚಿಕೊಂಡಿದ್ದು ಇಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಈ ಬಗ್ಗೆ ಪಾರ್ವತಮ್ಮನವರು 'ನನಗೆ ನಡೆದುಕೊಂಡು ಹೋಗುವುದು ತುಂಬಾ ಕಷ್ಟವಾಗುತ್ತಿತ್ತು. ನಮ್ಮದು ಅಂತ ಕಾರು ಇಲ್ಲ, ಟ್ಯಾಕ್ಸಿನಲ್ಲಿ ಹೋಗೋದಕ್ಕೆ ಆಗದ ಪರಿಸ್ಥಿತಿ ಇತ್ತು ನಮ್ಮದು. ನನ್ನ ಪತಿ (ಡಾ ರಾಜ್‌ಕುಮಾರ್) ಜೊತೆ ಈ ಕಷ್ಟ ಹೇಳಿಕೊಳ್ಳುತ್ತಿದ್ದೆ. ಆಗ ನನ್ನ ಮೈದನ ವರದಪ್ಪ ಅವರು ನನಗೆ ಹೇಳಿದ ಆ ಮಾತನ್ನು ನಾನು ಎಂದಿಗೂ ಮರೆಯಲಾಗುವುದಿಲ್ಲ. ವರದಪ್ಪ ಅವರು ಸೇತುವೆ ಕೆಳಗೆ ಜೀವನ ನಡೆಸುತ್ತಿದ್ದ ಕುಟುಂಬವನ್ನು ತೋರಿಸಿ, ಅವರಿಗಿಂತ ನಿನ್ನ ಜೀವನ ಚೆನ್ನಾಗಿದೆ, ಪರವಾಗಿಲ್ಲ ಅಲ್ವಾ?
'ಯುಐ' ಸಿನಿಮಾದ ಕಲೆಕ್ಷನ್ ಎಷ್ಟು? ಎರಡೇ ದಿನದಲ್ಲಿ ಬಾಕ್ಸ್ ಆಫೀಸ್‌ಗೆ ಅಷ್ಟೊಂದು ಹಣ ಬಂತಾ?
ನೀನು ನಿನ್ನ ಮನೆಯೊಳಗೆ ಇರ್ತೀಯಾ, ಮನೆಯೊಳಗೆ ಮಲ್ಕೋತೀಯಾ ಅಲ್ವಾ? ನಿನಗೆ ನಿನ್ನದು ಅಂತ ಒಂದು ಸೂರು ಇದೆ. ಅವರಿಗೆಲ್ಲ ಎಲ್ಲಿದೆ ಅದು? ಎಂದು ಅಂದು ಹೇಳಿದ್ದ ಮಾತನ್ನು ನಾನು ಎಂದಿಗೂ ಮರೆಯಲ್ಲ. ಆಗ ನಮಗೆ ಅದೃಷ್ಟ ಇದ್ರೆ ಅದೇನು ಬರಬೇಕು ಅಂತಿದೆಯೋ ಅದು ತನ್ನಷ್ಟಕ್ಕೆ ತಾನೇ ಬರುತ್ತೆ. ನಾವು ಆಸೆ ಪಡಬಾರದು, ದೇವರು ಕೊಟ್ಟಿದ್ದರಲ್ಲಿ ತೃಪ್ತಿ ಪಡಬೇಕು ಎಂಬುದನ್ನು ಅರಿತುಕೊಂಡೆ' ಎಂದಿದ್ದಾರೆ ದೊಡ್ಮನೆ ಅಮ್ಮ ಪಾರ್ವತಮ್ಮ ರಾಜ್‌ಕುಮಾರ್.
ನಟ ಡಾ ರಾಜ್‌ಕುಮಾರ್ ಪತ್ನಿ ಎಂಬುದಷ್ಟೇ ಪಾರ್ವತಮ್ಮನವರ ಹೆಗ್ಗಳಿಕೆ ಅಲ್ಲ. ಅವರು ಬಹಳಷ್ಟು ಕಾದಂಬರಿ ಓದಿ, ಅದರಲ್ಲಿ ಡಾ ರಾಜ್‌ಕುಮಾರ್ ಅವರಿಗೆ ಯಾವುದು ಹೊಂದಿಕೆ ಆಗುತ್ತದೆ ಎಂಬುದನ್ನು ನಿರ್ಧರಿಸಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅವರ ಮೂವರು ಗಂಡುಮಕ್ಕಳಿಗೆ ಕೂಡ ಸಿನಿಮಾ ಮಾಡುವಾಗ ಸರಿಯಾದ ಕಥೆ, ಸಿನಿಮಾ ಬಜೆಟ್, ಚಿತ್ರದ ನಾಯಕಿಯರು ಹಾಗೂ ಪಾತ್ರವರ್ಗ ಎಲ್ಲವನ್ನೂ ಸ್ವತಃ ಪಾರ್ವತಮನ್ಮನವರೇ ಮ್ಯಾನೇಜ್ ಮಾಡುತ್ತಿದ್ದರು. ಅವರು ನಿರ್ಮಾಪಕಿಯಾಗಿ ಬೆಳೆದ ರೀತಿ ಎಂಥವರಿಗೂ ಮಾದರಿ ಎನ್ನಬಹುದು.
ಉಪೇಂದ್ರ 'UI' ಸಿನಿಮಾ ಬ್ಯಾನ್ ಆಗ್ಬೇಕು, ಈ ಕೂಗಾಟ ಶುರುವಾಗಿದ್ದು ಯಾಕೆ, ಯಾರ ಕುಮ್ಮಕ್ಕು?
ಆದರೆ ಇಂದು ಪಾರ್ವತಮ್ಮನವರಾಗಲೀ, ಡಾ ರಾಜ್‌ಕುಮಾರ್ ಅವರಾಗಲೀ ನಮ್ಮೊಂದಿಗಿಲ್ಲ. ಅವರ ಸಾಧನೆ, ಅವರ ಸಾಧನೆಯ ಫಲ ಮಾತ್ರ ಮುಂದುವರಿದುಕೊಂಡು ಹೋಗುತ್ತಿದೆ. ಇಂದು ಅವರ ಕಿರಿಯ ಮಗ ಪುನೀತ್ ರಾಜ್‌ಕುಮಾರ್ ಕೂಡ ನಮ್ಮೊಂದಿಗೆ ಇಲ್ಲ. ಆದರೆ, ಪಾರ್ವತಮ್ಮನವರು ನಿರ್ಮಾಪಕಿಯಾಗಿ ಹಾಕಿಕೊಟ್ಟ ದಾರಿಯಲ್ಲಿ ಆ ಕುಟುಂಬದ ಸೊಸೆಯಂದಿರಾದ ಗೀತಾ ಶಿವರಾಜ್‌ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರುಗಳು ನಡೆಸಿಕೊಂಡು ಹೋಗುತ್ತಿದ್ದಾರೆ. ಸದ್ಯ ಶಿವಣ್ಣಾವರು ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಅಮೆರಿಕಾಗೆ ಹೋಗಿರವುದು ಗೊತ್ತೇ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.