ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ-ವಿತರಕ ನರ್ಗಿಸ್ ಬಾಬು ನಿಧನ

By Govindaraj SFirst Published Aug 11, 2022, 10:25 PM IST
Highlights

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಹಾಗೂ ವಿತರಕ ನರ್ಗಿಸ್ ಬಾಬು ಇಂದು ಸಂಜೆ 7 ಗಂಟೆಗೆ ನಿಧನರಾಗಿದ್ದಾರೆ. ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನರ್ಗಿಸ್ ಬಾಬು,  ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಇಂದು ನರ್ಗಿಸ್ ಬಾಬು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.

ಬೆಂಗಳೂರು (ಆ.11): ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಹಾಗೂ ವಿತರಕ ನರ್ಗಿಸ್ ಬಾಬು ಇಂದು ಸಂಜೆ 7 ಗಂಟೆಗೆ ನಿಧನರಾಗಿದ್ದಾರೆ. ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನರ್ಗಿಸ್ ಬಾಬು,  ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಇಂದು ನರ್ಗಿಸ್ ಬಾಬು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. 76 ವರ್ಷದ ನರ್ಗಿಸ್ ಬಾಬುಕನ್ನಡದಲ್ಲಿ ಸುಂದರ ಪುರಷ, ಯಾರಿಗೆ ಬೇಡ ದುಡ್ಡು, ಧನ್ ಧನಾ ಧನ್, ಅನಂತ್ ಗೌಡ ವರ್ಸಸ್ ರೆಡ್ಡಿ ಸಿನಿಮಾಗಳನ್ನ ನರ್ಗಿಸ್ ಬಾಬು ನಿರ್ಮಾಣ ಮಾಡಿದ್ದಾರೆ.

ಅನಂತ್ ನಾಗ್, ಶಶಿಕುಮಾರ್, ನೆನಪಿರಲಿ ಪ್ರೇಮ್ ಅಂತಹ ನಟರ ಸಿನಿಮಾಗಳನ್ನ ನರ್ಗಿಸ್ ಬಾಬು ನಿರ್ಮಾಣ ಮಾಡಿದರು. ಕಳೆದ 50 ವರ್ಷಗಳಿಂದ ವಿತರಕರಾಗಿ 600ಕ್ಕೂ ಹೆಚ್ಚು ಸಿನಿಮಾಗಳನ್ನ ವಿತರಣೆ ಮಾಡಿದ್ದಾರೆ. ಇನ್ನು ನರ್ಗಿಸ್ ಬಾಬುಗೆ ಒಟ್ಟು ಆರು ಜನ ಮಕ್ಕಳಲ್ಲಿ ಕಮಾರ್ ಹಾಗು ವಸೀಮ್ ಎಂಬ ಇಬ್ಬರು ಮಕ್ಕಳು ನಿರ್ಮಾಪಕರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ‌. ನಾಳೆ (ಶುಕ್ರವಾರ) ಮುನಿರೆಡ್ಡಿ ಪಾಳ್ಯದಲ್ಲಿ ಅಂತ್ಯ ಸಂಸ್ಕಾರ ಮಾಡಲು ಕುಟುಂಬ ವರ್ಗ ನಿರ್ಧರಿಸಿದೆ.

Latest Videos

ದಕ್ಷಿಣ ಭಾರತದ ಖ್ಯಾತ ನಟಿ ಮೀನಾ ಪತಿ ವಿದ್ಯಾಸಾಗರ್‌ ಇನ್ನಿಲ್ಲ

ಖ್ಯಾತ ನಟ ನರಸಿಂಹರಾಜು ಹಿರಿಯ ಪುತ್ರಿ ಧರ್ಮವತಿ ಹೃದಯಾಘಾತದಿಂದ ನಿಧನ: ಸ್ಯಾಂಡಲ್‌ವುಡ್‌ನ ಹಾಸ್ಯ ಚಕ್ರವರ್ತಿಯಾಗಿ ಮಿಂಚಿದ ನಟ ನರಸಿಂಹ ರಾಜು ಅವರ ಹಿರಿಯ ಪುತ್ರಿ ಧರ್ಮವತಿ ನಿಧನರಾಗಿದ್ದಾರೆ. ಇಂದು (ಜೂನ್ 4) ಮುಂಜಾನೆ 5.30ಕ್ಕೆ ಧರ್ಮವತಿ ಕೊನೆಯುಸಿರೆಳೆದರು ಎನ್ನವ ಮಾಹಿತಿಯನ್ನು ಕುಟುಂಬದವರು ತಿಳಿಸಿದ್ದಾರೆ. ಧರ್ಮವತಿ ಅವರಿಗೆ 71 ವರ್ಷ ವಯಸ್ಸಾಗಿತ್ತು. ಮೂವರು ಮಕ್ಕಳನ್ನು ಅವರು ಅಗಲಿದ್ದಾರೆ. ಹೃದಯಾಘಾತದಿಂದ ಧರ್ಮವತಿ ನಿಧನರಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ಧರ್ಮವತಿ ಪುತ್ರ, ನಟ ಅರವಿಂದ್  ಸಾಮಾಜಿಕ ಜಾಲತಾಣದಲ್ಲಿ ಅಮ್ಮ ಇನ್ನಿಲ್ಲ ಎನ್ನುವ ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ.  

ಧರ್ಮವತಿ ನಿಧನಕ್ಕೆ ಚಿತ್ರರಂಗದ ಅನೇಕ ಗಣ್ಯರು, ಸ್ನೇಹಿತರು, ಆಪ್ತರು ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಧರ್ಮವತಿ ಅವರ ಅಗಲಿಕೆಯಿಂದ ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಕನ್ನಡ ಚಿತ್ರರಂಗಕ್ಕೆ ನಟ ನರಸಿಂಹ ರಾಜು ಕೊಡುಗೆ ಅಪಾರ. ಅನೇಕ ಸಿನಿಮಾಗಳಲ್ಲಿ ನಟಿಸಿರುವ ನರಸಿಂಹ ರಾಜು ಅದ್ಭುತ ಪಾತ್ರಗಳ ಮೂಲಕ ಕನ್ನಡ ಚಿತ್ರರಸಿಕರನ್ನು ರಂಜಿಸಿದ್ದರು. ಸದ್ಯ ಅವರ ಕುಟುಂಬದ ಕೆಲವು ಸದಸ್ಯರು ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇಗುಲದ ಪ್ರಧಾನ ಅರ್ಚಕ ಡಾ. ಪ್ರಸನ್ನ ಕುಮಾರ್ ನಿಧನ

ನರಸಿಂಹ ರಾಜು ಎರಡನೇ ಪುತ್ರಿ, ಧರ್ಮವತಿ ಅವರ ಸಹೋದರಿ ಸುಧಾ ನರಸಿಂಹ ರಾಜು ಅವರು ನಟಿಯಾಗಿ ಖ್ಯಾತಿಗಳಿಸಿದ್ದಾರೆ. ಸುಧ ಅವರು ಈಗಾಗಲೇ ಅನೇಕ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದಾರೆ. ಸುಧಾ ನರಸಿಂಹರಾಜು ಸದ್ಯ ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಧಾರಾವಾಹಿಯಲ್ಲಿ ನಾಯಕಿಯ ತಾಯಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

click me!