
ಬೆಂಗಳೂರು(ಸೆ. 03) ಹಿರಿಯ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಶೀಘ್ರ ಚೇತರಿಕೆಗಾಗಿ ಕರ್ನಾಟಕ ಚಲನಚಿತ್ರ ರಂಗ ಪ್ರಾರ್ಥಿಸಿದೆ. ಬೆಂಗಳೂರಿನ ಕಲಾವಿದರ ಸಂಘದಲ್ಲಿ ಎಲ್ಲ ಕಲಾವಿದರು ಭಾಗಿಯಾಗಿದ್ದರು.
ನಟ ಯಶ್, ನಟಿ ಸಂಸದೆ ಸುಮಲತಾ ಅಂಬರೀಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಅವಿನಾಶ್, ಮಾಳವಿಕಾ ಅವಿನಾಶ್ ಸೇರಿದಂತೆ ಚಿತ್ರರಂಗದ ಕೆಲ ಗಣ್ಯರು ಭಾಗಿಯಾಗಿ ಪ್ರಾರ್ಥಿಸಿದರು. ಈ ವೇಳೆ ಮಾತನಾಡಿದ ಯಶ್ ನನ್ನ ಸಿನಿಮಾದ ಒಂದು ಹಾಡನ್ನು ಎಸ್‌ಪಿಬಿ ಹಾಡಿದ್ದಾರೆ. ಅದು ನನಗೆ ಇವತ್ತಿಗೂ ಖುಷಿ ಕೊಡುತ್ತಿದೆ. ಇನ್ನೊಬ್ಬರ ನೋವಿನಲ್ಲಿ ನಾವು ಭಾಗಿ ಆಗೋದು ಮುಖ್ಯ. ಎಸ್‌ಪಿಬಿ ಕರ್ನಾಟಕದಲ್ಲಿ ಭಾವನಾತ್ಮಕವಾಗಿ ಬೆರೆತು ಹೋಗಿದ್ದಾರೆ. ಎಸ್‌ಪಿಬಿ ಹಂಸಲೇಖರಿಂದ ನಾವೆಲ್ಲಾ ಸಾಕಷ್ಟು ಬದುಕಿನ ಪಾಠ ಕಲಿತಿದ್ದೇವೆ. ಎಸ್ ಪಿ ಬಿ ಜೀವ ಆಸ್ಪತ್ರೆಯಲ್ಲಿ ಹೋರಾಡುತ್ತಿರೋದ್ರಿಂದ ನಾವೆಲ್ಲಾ ಸೇರಿ ಅವರು ಬೇಗ ಚೇತರಿಸಿಕೊಳ್ಳಲು ಪಾರ್ಥಿಸುತ್ತೇವೆ ಎಂದರು.
ಚೆನ್ನೈನಿಂದ ಬಂದ ಇಂಪಾದ ಸುದ್ದಿ, SPB ಅಭಿಮಾನಿಗಳಿಗೊಂದು ಶುಭ ಸುದ್ದಿ
ಆದಷ್ಟು ಬೇಗ ಎಸ್ ಪಿ ಬಿ ಎದ್ದು ಬರ್ತಾರೆ ಅನ್ನೋ ನಂಬಿಕೆ ನನಗಿದೆ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಲು ಮರೆಯಲಿಲ್ಲ.
ಸಂಸದೆ, ನಟಿ ಸುಮಲತಾ ಮಾತನಾಡಿ, ಕಲೆಗೆ ಅತಿ ದೊಡ್ಡ ಸಾಕ್ಷಿ ನಮ್ಮ ಬಾಲಸುಬ್ರಹ್ಮಣ್ಯಂ, ಸಿನಿಮಾ ರಂಗದಲ್ಲಿ ಅವರನ್ನ ಪ್ರೀತಿಸದೇ ಇರೋರು ಯಾರು ಇಲ್ಲ. ಅವರ ಸಾಫ್ಟ್ ನೇಚರ್ ನಮಗೆಲ್ಲಾ ಇಷ್ಟ. ಅಂಬರೀಶ್ ಅವರು ಎಸ್ ಪಿ ಬಿ ಅನ್ನ ತುಂಬಾ ಪ್ರೀತಿಸುತ್ತಿದ್ದರು. ಅಂಬಿ ಸಂಭ್ರಮ ಮಾಡಿದಾಗ ಎಸ್ ಪಿ ಬಿ ಹಾಡಬೇಕು ಅಂತ ನನಗೆ ಆಸೆ ಇತ್ತು. ಬೆಂಗಳೂರಿನಗಿ ಬಂತು ಅಂಬಿ ಸಂಭ್ರಮದಲ್ಲಿ ಹಾಡಿದ್ದರು. ಬಾಲು ಅವರು ಟ್ರ್ಯಾಕ್ ಗೆ ಹಾಡೋಲ್ಲ ಅವರು ಲೈವ್ ಬ್ಯಾಂಡ್ ನಲ್ಲೇ ಹಾಡೋದು ಎಂದು ಸ್ಮರಿಸಿಕೊಂಡರು.
ಆದರೆ ಅಂಬಿ ಸಂಭ್ರಮಕ್ಕಾಗಿ ಅಂಬಿಗಾಗಿ ಟ್ರ್ಯಾಕ್ಸ್ ಗೆ ಹಾಡಿದ್ದರು. ಎಸ್ಪಿಬಿ ಯನ್ನ ನಾವು ಕಳೆದುಕೊಳ್ಳೋಕೆ ಸಿದ್ಧರಿಲ್ಲ. ಅವರು ಆದಷ್ಟು ಬೇಗ ಗುಣ ಮುಖ ಆಗಬೇಕು. ಮತ್ತೆ ಅವರ ಧ್ವನಿಯನ್ನ ಕೇಳಬೇಕು.. ಅವರಿಗೆ ದೀರ್ಘಾಯಸ್ಸು ಸಿಗಬೇಕು ಎಂದು ಪ್ರಾರ್ಥಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.