ಡ್ರಗ್ಸ್‌ ಬಗ್ಗೆ ಮಾತನಾಡಲು ಒತ್ತಾಯಿಸಬೇಡಿ; ಇದೇ ನನ್ನ ಕೊನೇ ಉತ್ತರ!

By Suvarna News  |  First Published Sep 3, 2020, 4:17 PM IST

ಡ್ರಗ್ಸ್‌ ಮಾಫಿಯಾ ಬಗ್ಗೆ ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು ರಾಹುಲ್ ಎಂಬಾತನನ್ನು ಬಂಧಿಸಿದ್ದಾರೆ. ಆತ ನಟಿ ಸಂಜನಾ ಆಪ್ತ ಗೆಳೆಯ ಎಂದು ತಿಳಿದುಬಂದಿದೆ. ಈ ವಿಚಾರದ ಬಗ್ಗೆ ಸಂಜನಾ ಸ್ಪಷ್ಟನೆ ನೀಡಿದ್ದಿಷ್ಟು...


ಕನ್ನಡ ಚಿತ್ರರಂಗದದಲ್ಲಿ ಕೆಲವು ನಟ-ನಟಿಯರು ಡ್ರಗ್ಸ್ ದಾಸರಾಗಿದ್ದಾರೆಂಬುದನ್ನು ಎಂದು ಕೇಳಿ ಅಭಿಮಾನಿಗಳು ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ. ತಮ್ಮ ನೆಚ್ಚಿನ ನಟ-ನಟಿಯರನ್ನು ರೋಲ್‌ ಮಾಡೆಲ್‌ ರೀತಿಯಲ್ಲಿ ನೋಡುವ ವೀಕ್ಷಕರಿಗೆ ಸ್ಪಷ್ಟನೆ ನೀಡಲು, ಹಾಗೂ ಇಂಥ ಕೆಲಸ ಇನ್ನು ಮುಂದೆ ನಡೆಯದಿರಲೆಂದು ಸ್ಯಾಂಡಲ್‌ವುಡ್ ನಿರ್ದೇಶಕ ಇಂದ್ರಜಿತ್ ಲಂಕೇಶ್‌ ದಾಖಲೆಗಳ ಜೊತೆ ಸಿಸಿಬಿ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಇಂದ್ರಜಿತ್ ಏನೋ ಒಂದಿಷ್ಟು ಹೆಸರು ಹೇಳಿ, ತಮ್ಮ ಬಳಿ ಇರೋ ದಾಖಲೆಗಳನ್ನು ಸಲ್ಲಿಸುತ್ತಿದ್ದಾರೆ. ಈ ಬೆನ್ನಲ್ಲೇ ಮತ್ತೊಂದಿಷ್ಟು ಹೆಸರುಗಳು ಹೊರ ಬೀಳುತ್ತಿದ್ದು, ಸ್ಯಾಂಡಲ್‌ವುಡ್‌ನ ಅನೇಕ ನಟಿಯರೊಂದಿಗೂ ಮಾಫಿಯಾ ತಳಕು ಹಾಕಿ ಕೊಂಡಿರುವಂತೆ ಕಾಣಿಸುತ್ತಿದೆ. ಅದರಲ್ಲಿಯೂ ಉತ್ತರ ಭಾರತದಿಂದ ಬಂದು, ಸ್ಯಾಂಡಲ್‌ವುಡ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡ ಅನೇಕ ಹೆಸರುಗಳು ಕೇಳಿ ಬರುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿವೆ. 

Tap to resize

Latest Videos

ಡ್ರಗ್ಸ್ ರಾಣಿ ಅನಿಕಾ ನಂತರ ನಟಿ ರಾಗಿಣಿ ಮಾಜಿ ಪ್ರಿಯಕರ ರವಿಶಂಕರ್ ಹಾಗೂ ನಟಿ ಸಂಜನಾ ಆಪ್ತ ರಾಹುಲ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಾಧ್ಯಮಗಳು ಹಾಗೂ ಸಾರ್ವಜನಿಕರು ಸಂಜನಾಗೆ ಈ ಬಗ್ಗೆ ಸ್ಪಷ್ಟನೆ ನೀಡಲು ಕರೆ ಮಾಡುತ್ತಿರುವ ಕಾರಣ, ಪತ್ರಿಕಾ ಹೇಳಿಕೆ ನೀಡುವ ಮೂಲಕ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ.

ರಾಹುಲ್‌ ನನಗೆ ಗೊತ್ತು:
'ಡ್ರಗ್ಸ್‌ ವಿಚಾರದ ಬಗ್ಗೆ ನಾನು ಮಾತನಾಡಲೇ ಬೇಕು ಎಂದು ಮಾಧ್ಯಮಗಳು ನನಗೆ ಒತ್ತಾಯ ಮಾಡುತ್ತಿವೆ. ಹೌದು ನಾನು ಅನೇಕರು ಪಾರ್ಟಿಯಲ್ಲಿ ಮಧ್ಯಪಾನ ಸೇವಿಸುವುದನ್ನು ನೋಡಿದ್ದೀನಿ. ಬರ್ತಡೇ ಹಾಗೂ ಸೋಷಿಯಲೈಸಿಂಗ್‌ ಮತ್ತು ಫಂಕ್ಷನ್‌ಗಳಲ್ಲಿ ಇದು ತುಂಬಾ ಕಾಮನ್. ಆದರೆ ಇದುವರೆಗೂ ಡ್ರಗ್ಸ್ ವಿಚಾರದ ಬಗ್ಗೆ ಯಾವುದೇ ಅನುಭವ ಇಲ್ಲ. ಆದರೂ ನನಗೆ ಮಾತನಾಡಲು ಒತ್ತಾಯ ಮಾಡಿದರೆ ಕಿರಿಕಿರಿ ಆಗುತ್ತದೆ. ಕನ್ನಡ ಚಿತ್ರರಂಗದ ಹೆಸರು ಇದರಲ್ಲಿ ಕೇಳಿ ಬರುತ್ತಿರುವುದಕ್ಕೆ ಬೇಸರವಾಗುತ್ತಿದೆ. ಚಿತ್ರರಂಗ ನನಗೆ ದೇವಾಲಯವಿದ್ದಂತೆ, ನಾನು ಜೀವನದಲ್ಲಿ ಉತ್ತಮ ಮಟ್ಟದಲ್ಲಿ ಬೆಳೆಯುವುದಕ್ಕೆ ಈ ಇಂಡಸ್ಟ್ರಿಯೇ ಕಾರಣ,' ಎಂದಿದ್ದಾರೆ ಬಿಗ್‌ಹಾಸ್ ಸ್ಫರ್ಧಿಯಾಗಿದ್ದು ಸಂಜನಾ.

"

'ರಾಹುಲ್ ನನಗೆ ರಾಕಿ ಅಣ್ಣ. ತುಂಬಾ ಒಳ್ಳೆಯ ಹುಡುಗ. ಅಕ್ಕ ಎಂದು ಕರೆದು ಮಾತನಾಡಿಸುತ್ತಾರೆ. ಅವರು ರಿಯಲ್ ಎಸ್ಟೇಟ್ ಉದ್ಯಮಿಯೂ ಹೌದು. ಹೌದು, ಆತ ಒಂದು ರೂಪಾಯಿ ಕೆಲಸ ಮಾಡಿ ಸಾವಿರ ರೂಪಾಯಿ ಕೆಲಸ ಮಾಡಿದಂತೆ ತೋರಿಸಿಕೊಳ್ಳುವ ಸ್ವಭಾವವಿದೆ. ಅದು ಸೋಷಿಯಲ್ ಮೀಡಿಯಾದಲ್ಲಿ ಸ್ವಲ್ಪ ಜಾಸ್ತಿನೇ. ಆದರೆ ನನಗೆ ತಿಳಿದಿರುವ ಪ್ರಕಾರ ಡ್ರಗ್ಸ್‌ಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ಅವರು ಬಲಿ ಪಶು ಅಗುವುದಕ್ಕೆ ಕಾರಣ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆ್ಯಕ್ಟಿವ್ ಆಗಿರುವುದು ಹಾಗೂ ಅನೇಕರ ಪರಿಚಯವಿರುವ ಕಾರಣ ಇರಬಹುದು', ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

click me!