
'ಪ್ರೇಮಗೀಮ ಜಾನೆದೋ' ಎನ್ನುತ್ತಾ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಯುವ ಪ್ರತಿಭೆ ಗೌತಮ್ ಆರ್ (Goutham R) ಇದೀಗ 'ನಾಲ್ಕನೇ ಆಯಾಮ'ದ (Nalkane Ayama) ಕಥೆ ಒಪ್ಪಿಸೋದಿಕ್ಕೆ ಸಜ್ಜಾಗಿ ನಿಂತಿದ್ದಾರೆ. ಪ್ರೇಮಗೀಮ ಜಾನೆದೋ ಚಿತ್ರ ಮೂಲಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿದ್ದ ಗೌತಮ್ ಈಗ ನಾಯಕನ ಜೊತೆ ನಿರ್ದೇಶನದ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ಅವರ ನಿರ್ದೇಶನದ ನಾಲ್ಕನೇ ಆಯಾಮಾ ಇದೇ ಶುಕ್ರವಾರ ತೆರೆಗೆ ಬರ್ತಿದೆ.
ಗೌತಮ್ ನಟಿಸಿ ನಿರ್ದೇಶಿಸಿರುವ 'ನಾಲ್ಕನೇ ಆಯಾಮ'ದಲ್ಲಿ ನಾಯಕಿಯಾಗಿ 'ಹೆಂಗೆ ನಾವು' ಖ್ಯಾತಿಯ ರಚನಾ ಇಂದರ್ (Rachana Inder) ಸಾಥ್ ಕೊಟ್ಟಿದ್ದಾರೆ. ಈ ಚಿತ್ರದ ಮೂಲಕ ಮಾಸ್ಟರ್ ಆನಂದ್ ಮಗಳು ಪಟಾಕಿ ಅಂಜನಿ ವಂಶಿಕಾ ಕಶ್ಯಪ್ ಚಿತ್ರರಂಗಕ್ಕೆ ಹೆಜ್ಜೆ ಇಟ್ಟಿದ್ದು, ಅಮಿತ್ ಗೌಡ ಯಶಸ್ವಿನಿ ಎಂ , ಬಲ ರಾಜ್ ವಾಡಿ, ವಿನ್ಸೆಂಟ್, ಮಂಜು ಸ್ವಾಮಿ, ಚಂದ್ರಕಲಾ ಮೋಹನ್, ಬೇಬಿ ನಿಷಿತಾ ತಾರಾಬಳಗದಲ್ಲಿದ್ದಾರೆ.
ಚುನಾವಣೆಯಲ್ಲಿ ಠೇವಣಿ ಕಳಕೊಂಡ ದ್ವಾರಕೀಶ್‌ರನ್ನು 'ಆಪ್ತಮಿತ್ರ' ವಿಷ್ಣುವರ್ಧನ್ ಗೆಲ್ಲಿಸಿದ್ರು!
ಹಾರರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ನಾಲ್ಕನೇ ಆಯಾಮ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ, ಅಭಿನಂದನ್ ಕಶಪ್ಯ ಬ್ಯಾಗ್ರೌಂಡ್ ಸ್ಕೋರ್ ಹಾಗೂ ಸೌಂಡ್ ಡಿಸೈನ್ ಮಾಡಿದ್ದು, ಕೆ ಭ್ರಮೇಂದ್ರ ಹಾಗೂ ಅರುಣ್ ಛಾಯಾಗ್ರಹಣ, ಉಗ್ರಂ ಶ್ರೀಕಾಂತ್ ಸಂಕಲನವಿದೆ. ಇಂಚರಾ ಕ್ರಿಯೇಷನ್ ನಡಿ ಅರುಣಾ ಮುತ್ತು ರಾಯಪ್ಪ ನಿರ್ಮಾಣ ಮಾಡಿದ್ದು, ಕಿರಣ್ ರಾಯಚೋಟಿ, ದಿವ್ಯಾ ಸಜೋಗ್ ನಿರ್ಮಾಣದಲ್ಲಿ ಜೊತೆಯಾಗಿ ನಿಂತಿದ್ದಾರೆ. ಟ್ರೇಲರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ನಾಲ್ಕನೇ ಆಯಾಮಾ ಇದೇ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಡಾ ರಾಜ್‌ಕುಮಾರ್ ನಟನೆಯ 'ಮೇಯರ್ ಮುತ್ತಣ್ಣ' ನಿರ್ಮಿಸಿದಾಗ ದ್ವಾರಕೀಶ್ ವಯಸ್ಸೆಷ್ಟು?
ಅಂದಹಾಗೆ, ನಾಲ್ಕನೇ ಆಯಾಮ ಚಿತ್ರವು ಹೆಚ್ಚು ಕಡಿಮೆ ಹೊಸಬರ ಚಿತ್ರವೇ ಆಗಿದ್ದರೂ ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ. ಕಾರಣ, ಗೌತಮ್ ಆರ್ ಈ ಚಿತ್ರದಲ್ಲಿ ಕೇವಲ ನಟನೆ ಮಾತ್ರವಲ್ಲ, ನಿರ್ದೇಶನವನ್ನೂ ಮಾಡಿದ್ದಾರೆ. ಜತೆಗೆ, ಮೊದಲ ಬಾರಿಗೆ ನಟ ಮಾಸ್ಟರ್ ಆನಂದ್ ಮಗಳು ವಂಶಿಕಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಅವರ ಫ್ಯಾನ್ಸ್‌ಗಳು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.
ಹೆಣ್ಮಕ್ಳೇ ಸ್ಟ್ರಾಂಗು ಗುರೂ ಎಂದು ಹಲವು ವರ್ಷಗಳ ಹಿಂದೆ ಬರೆದಿದ್ದ ಭಟ್ಟರು ಈಗೇನಂದ್ರು ನೋಡ್ರೀ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.