ಪ್ರಶಾಂತ್‌ ನೀಲ್ ಭಾರೀ ಕೆಟ್ಟ ನರೇಟರ್, ಅವರೇನು ಅಂತ ಜಗತ್ತಿಗೇ ಗೊತ್ತು ಅಂದ್ರಲ್ಲ ರಾಕಿಂಗ್ ಸ್ಟಾರ್ ಯಶ್‌!

By Shriram Bhat  |  First Published Apr 17, 2024, 7:20 PM IST

ಕೆಜಿಎಫ್ ಸಂಪೂರ್ಣವಾಗಿ ಒಂದು ಚಿಕ್ಕ ಪಾರ್ಟ್, ಆದರೆ, ಅಲ್ಲಿನ ಜನರು, ಅಲ್ಲಿ ನಡೆಯುವ ಡ್ರಾಮಾ, ತಾಯಿ ಉದ್ದೇಶ, ಅಂದರೆ ತನ್ನ ಮಗ ತಾನು ಮಾಡಲಾಗದ ಏನನ್ನು  ಸಾಧಿಸಬೇಕು ಎಂದು ತಾಯಿ ಬಯಸುತ್ತಾಳೆ ಮುಂತಾದ ವಸ್ತು ವಿಷಯಗಳು..


ಪ್ರಶಾಂತ್ ನೀಲ್ (Prashanth Neel)ತುಂಬಾ ಕೆಟ್ಟ ನರೇಟರ್. ಇಂದು ಅವರಿಗೆ ಅದೆಷ್ಟು ಸಾಮರ್ಥ್ಯವಿದೆ ಎಂದು ಎಲ್ಲರಿಗೂ ಗೊತ್ತು. ಅವರು ಬಂದು ನನಗೆ ಕಥೆ ಹೇಳಲು ಶುರು ಮಾಡಿದಾಗ, ನಿಜವಾಗಿಯೂ ಹೇಳ್ತೀನಿ, ಅದೇನು ಎಂದು ನನಗೆ ಅರ್ಥವಾಗಲೇ ಇಲ್ಲ. ಅವರು ಹೇಳಿದ ಕೆಜಿಎಫ್, ಜನರು, ಮದರ್ ಸೆಂಟಿಮೆಂಟ್-ಮದರ್ ಸೆಂಟಿಮೆಂಟ್ ಕೆಜಿಎಫ್ ನಲ್ಲಿ ತುಂಬಾ ಇಂಪಾರ್ಟೆಂಟ್, ಅದೂ ಇದೂ ಏನೂ ಅರ್ಥವಾಗುವಂತೆ ಇರಲಿಲ್ಲ. 'ಯಾಕೆ ಎಲ್ಲವನ್ನೂ ಒಟ್ಟಿಗೇ ಸೇರಿಸಿದ್ದೀರಿ, ಮದರ್ ಸೆಂಟಿಮೆಂಟ್‌ ಮಾತ್ರವೇ ಬೇರೆ ಸ್ಟೋರಿಯಾಗಲು ಸಾಧ್ಯವಿದೆ. ' ಎಂದು ನಾನು ಕೇಳಿದ್ದೆ. ಆದರೆ, ಅವರೇನು ಹೇಳಲು ಬಂದಿದ್ದಾರೆ ಎಂಬುದು ನನಗೆ ಅರ್ಥವಾಗಿತ್ತು. 

ಕೆಜಿಎಫ್ ಸಂಪೂರ್ಣವಾಗಿ ಒಂದು ಚಿಕ್ಕ ಪಾರ್ಟ್, ಆದರೆ, ಅಲ್ಲಿನ ಜನರು, ಅಲ್ಲಿ ನಡೆಯುವ ಡ್ರಾಮಾ, ತಾಯಿ ಉದ್ದೇಶ, ಅಂದರೆ ತನ್ನ ಮಗ ತಾನು ಮಾಡಲಾಗದ ಏನನ್ನು  ಸಾಧಿಸಬೇಕು ಎಂದು ತಾಯಿ ಬಯಸುತ್ತಾಳೆ ಮುಂತಾದ ವಸ್ತು ವಿಷಯಗಳು ಅಲ್ಲಿವೆ. ಆದರೆ, ಎಲ್ಲವೂ ಒಂದರಲ್ಲೇ ಇದೆ. ಅಲ್ಲಿ ಒಬ್ಬ ಹೀರೋನ ಅಗತ್ಯ ಬರಬೇಕು ಎಂದರೆ ಅಲ್ಲಿ ಯಾವುದೋ ರೀತಿಯಲ್ಲಿ ದೊಡ್ಡ ಸಮಸ್ಯೆಯಾಗಬೇಕು, ಅಂಥ ಡ್ರಾಮ ಅಲ್ಲಿರಬೇಕು' ಎಂದಿದ್ದಾರೆ ಕೆಜಿಎಫ್ ನಾಯಕರಾಗಿ ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ನಟ ಯಶ್ (Rocking Star Yash). 

Latest Videos

undefined

ಅಚ್ಚರಿ ಎಂದರೆ, ಪ್ರಶಾಂತ್ ನೀಲ್ ಜತೆ ಸಲಾರ್ ಸಿನಿಮಾ ಮಾಡಿ ಸಕ್ಸಸ್ ಕಂಡಿರುವ ನಟ ಡಾರ್ಲಿಂಗ್ ಪ್ರಭಾಸ್ ಕೂಡ ಸಂದರ್ಶನವೊಂದರಲ್ಲಿ ಹೀಗೆಯೇ ಹೇಳಿದ್ದಾರೆ. 'ಪ್ರಶಾಂತ್‌ ನೀಲ್ ಕಥೆಯನ್ನು ಚೆನ್ನಾಗಿಯೇ ಮಾಡಿಕೊಂಡಿರುತ್ತಾರೆ. ಆದರೆ, ಅವರಿಗೆ ನರೇಟ್ ಮಾಡಲು ಬರುವುದಿಲ್ಲ, ಕಥೆ ಹೇಳುವ ವಿಷಯಕ್ಕೆ ಬಂದರೆ ಅವರೊಬ್ಬ ಕೆಟ್ಟ ನರೇಟರ್' ಎಂದಿದ್ದರು ಪ್ರಶಾಂತ್ ನೀಲ್ ಬಗ್ಗೆ ನಟ ಪ್ರಭಾಸ್.  ಈಗ ಅದೇ ಮಾತನ್ನು ಯಶ್ ಕೂಡ ಹೇಳಿದ್ದಾರೆ. 

ಒಟ್ಟಿನಲ್ಲಿ, 'ಉಗ್ರಂ' ಸೇರಿದಂತೆ ಕೆಜಿಎಫ್‌, ಕೆಜಿಎಫ್ 2 ಹಾಗೂ ಸಲಾರ್, ಹೀಗೆ ಮಾಡಿದ ಎಲ್ಲಾ ಸಿನಿಮಾಗಳನ್ನೂ ಗೆಲ್ಲಿಸಿದ್ದಾರೆ ನಿರ್ದೇಶಕರಾದ ಪ್ರಶಾಂತ್ ನೀಲ್. ಆದರೆ ಅವರಿಗೆ ಕಥೆ ನರೇಟ್ ಮಾಡಲು ಬರುವುದಿಲ್ಲ ಎಂದು ಈ ಮೂಲಕ ಅರ್ಥ ಮಾಡಿಕೊಳ್ಳಬಹುದೇನೋ! ಇಬ್ಬರು ಸೂಪರ್ ಸ್ಟಾರ್‌ಗಳು ಒಂದೇ ರೀತಿಯಲ್ಲಿ ಪ್ರಶಾಂತ್‌ ನೀಲ್ ಬಗ್ಗೆ ಒಪಿನಿಯನ್ ಹೇಳಿದ್ದಾರೆ ಎಂದರೆ ಅದನ್ನು ಸತ್ಯ ಎಂದು ನಂಬಬಹುದೇನೋ! ಅದೇನೇ ಇರಲಿ, ನಟ ಯಶ್ ಮಾತನಾಡುವಾಗ ಪ್ರಶಾಂತ್‌ ನೀಲ್ ಅವರಿಗೆ ನರೇಟ್ ಮಾಡಲು ಮಾತ್ರವೇ ಬರುವುದಿಲ್ಲ, ಅದು ಬಿಟ್ಟರೆ ಅವರೇನು ಎಂಬುದು ಈಗ ಜಗತ್ತಿಗೇ ಗೊತ್ತು ಎಂದು ಹೇಳಿರುವುದನ್ನು ಯಾರೂ ಮರೆಯುವ ಹಾಗಿಲ್ಲ. 

click me!