ಇಡೀ ಕುಟುಂಬ ಜೇಮ್ಸ್‌ ಫಸ್ಟ್‌ ಡೇ ಫಸ್ಟ್‌ ಶೋ ವೀಕ್ಷಿಸಿದೆ: ಅಶ್ವಿನಿ ಪುನೀತ್ ರಾಜ್‌ಕುಮಾರ್

By Suvarna News  |  First Published Mar 18, 2022, 11:16 AM IST

ಜೇಮ್ಸ್‌ ಸಿನಿಮಾ ಮತ್ತು ಪುನೀತ್‌ ಕನಸಿನ ಕೂಸು ಪಿಆರ್‌ಕೆ ಸಂಸ್ಥೆ ಬಗ್ಗೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಮೊದಲ ಬಾರಿ ಮಾತನಾಡಿದ್ದಾರೆ. 


ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ನಟಿಸಿರುವ ಜೇಮ್ಸ್‌ (James) ಸಿನಿಮಾ ಒಂದೇ ದಿನದಲ್ಲಿ 30 ಕೋಟಿ ಕಲೆಕ್ಷನ್ ಮಾಡಿದೆ. 4000 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ನಲ್ಲಿ ಸಿನಿಮಾ ಬಿಡುಗಡೆಯಾಗಿದ್ದರೂ ಕೂಡ ಮತ್ತೆ ಸ್ಕ್ರೀನ್‌ ಹೆಚ್ಚಿಸಿ ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಅಪ್ಪು 47ನೇ ಹುಟ್ಟುಹಬ್ಬದಕ್ಕೆ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿ ನೋಡಿ ಪತ್ನಿ ಅಶ್ವಿನಿ ಭಾವುಕರಾಗಿದ್ದಾರೆ. ನಾನು ಸಿನಿಮಾ ನೋಡಲು ಅಸಾಧ್ಯ ಆದರೆ ಇಡೀ ಕುಟುಂಬ ಫಸ್ಟ್‌ ಡೇ ಫಸ್ಟ್‌ ಶೋ ವೀಕ್ಷಿಸಿದ್ದಾರೆ ಎಂದು ಹೇಳಿದ್ದಾರೆ. 

ಅಭಿಮಾನಿಗಳ ಪ್ರೀತಿ:
'ಪ್ರತಿ ವರ್ಷ ಅಪ್ಪು ಬರ್ತಡೇ ಹಬ್ಬದಂತೆ, ಕರ್ನಾಟಕದಾದ್ಯಂತ ಇರುವ ಜನರು ತಪ್ಪದೆ ಬಂದು ವಿಶ್ ಮಾಡುತ್ತಾರೆ. ಈ ವರ್ಷ ನನ್ನ ಮನಸ್ಸು ಮುಟ್ಟಿದೆ, ಜಗತ್ತಿನಾದ್ಯಂತ ಕನ್ನಡಿಗರು ಅವರನ್ನು ಆಚರಿಸುತ್ತಿದ್ದಾರೆ. ಸಿನಿಮಾ ಬಿಡುಗಡೆ ಜೊತೆಗೆ ಅಪ್ಪುಗಾಗಿ ಅನೇಕರು ಹೊಸ ಹಾಡು, ವಿಡಿಯೋ ಮತ್ತು ಬೇರೆ ಬೇರೆ ರೀತಿಯಲ್ಲಿ ಗೌರವ ಸಲ್ಲಿಸುತ್ತಿದ್ದಾರೆ ಇದರಲ್ಲಿ ಅನ್ನದಾನ ಕೂಡ ಸೇರಿಕೊಂಡಿದೆ. ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿ ಮನಸ್ಸು ಮುಟ್ಟಿದೆ.' ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ಟೈಮ್ಸ್‌ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

Tap to resize

Latest Videos

undefined

ಜನರೊಟ್ಟಿಗೆ ಅಪ್ಪು:
'ಅಪ್ಪು ಅವರ ಲೋಕೋಪಕಾರಿ ಚಟುವಟಿಕೆಗಳು ಬಗ್ಗೆ ನನಗೆ ಗೊತ್ತಿತ್ತು ಆದರೆ ಇಷ್ಟರ ಮಟ್ಟಕ್ಕಿದೆ ಎಂದು ಗೊತ್ತಿರಲಿಲ್ಲ. ಏಕೆಂದರೆ ಅವರ ಜೊತೆ ನಾನು ಶೂಟ್‌ಗಳಿಗೆ (Shoot) ಹೋಗುತ್ತಿರಲಿಲ್ಲ ಅಲ್ಲಿ ಅವರು ಅನೇಕರನ್ನು ಭೇಟಿ ಮಾಡಿರುತ್ತಾರೆ. ಈಗ ಜನರು ಬಂದು ಅವರ ಜೊತೆಗಿರುವ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ ನಿಜಕ್ಕೂ ಇಷ್ಟೊಂದು ಜನರ ಮನಸ್ಸು ಮಟ್ಟಿದ್ದಾರೆ ಎಂದು ಗೊತ್ತಿರಲಿಲ್ಲ. ಅಪ್ಪು ಸದಾ ವಿದ್ಯಾಭ್ಯಾಸ ಮತ್ತು ಆರೋಗ್ಯದ (Education and Health) ಕಡೆ ಹೆಚ್ಚಿನ ಗಮನ ನೀಡುತ್ತಿದ್ದರು ಅದರ ಬಗ್ಗೆ ನನಗೆ ಗೊತ್ತಿತ್ತು ಅದರೆ ಅದರ ಹೊರತಾಗಿ ಅವರು ತಮ್ಮದೇ ಆದ ಕೆಲಸಗಳನ್ನು ಮಾಡಿದ್ದಾರೆ' ಎಂದು ಅಶ್ವಿನಿ ಪುನೀತ್ ಹೇಳಿದ್ದಾರೆ. 

ಬಸವನಗುಡಿ ಗವಿ ಗಂಗಾಧರೇಶ್ವರ ದರ್ಶನ ಪಡೆದ ಅಶ್ವಿನಿ ಪುನೀತ್‌ ರಾಜ್‌ಕುಮಾರ್!

ಜೀವನದ ಪಾಠ:
'ಕೆಲಸದ ಬಗ್ಗೆ ಅಪ್ಪುಗಿದ್ದ ಶ್ರದ್ಧೆ ಅವರ ನಮ್ರತೆ, ಸರಳತೆ ಮತ್ತು ಮತ್ತೊಬ್ಬರಿಗೆ ಸಹಾಯ ಮಾಡಬೇಕು ಎನ್ನುವ ಮನೋಭಾವ ನೋಡಿದ್ದೀನಿ ಹಾಗೇ ನಾನು ಅದನ್ನು ಅಳವಡಿಸಿಕೊಳ್ಳುತ್ತಿರುವೆ. ಅವರ ಒಳ್ಳೆ ಗುಣಗಳ ಬಗ್ಗೆ ನಾನು ಹೇಳುತ್ತಲೇ ಇರಬಹುದು' ಎಂದಿದ್ದಾರೆ. 

ಪುನೀತ್ ರಾಜ್‌ಕುಮಾರ್ ಪತ್ನಿ ಆಶ್ವಿನಿ ಹುಟ್ಟುಹಬ್ಬ; ಅಭಿಮಾನಿಗಳಿಂದ ಮನಕಲಕುವ ಶುಭಾಶಯ!

ಪುನೀತ್‌ ರಾಜ್‌ಕುಮಾರ್ ಲೆಗೆಸಿ (Puneeth Legacy):
'ನಮ್ಮ ನಿರ್ಮಾಣ ಸಂಸ್ಥೆ (PRK Productions) ಆರಂಭದ ದಿನಗಳಿಂದಲ್ಲೂ ನಾನು ತೊಡಗಿಸಿಕೊಂಡಿರುವೆ. ಅದೇ ಶ್ರದ್ಧೆಯಿಂದ ಕೆಲಸ ಮುಂದುವರೆಸುತ್ತಿರುವೆ. ಮುಖ್ಯ ಶಕ್ತಿ ನಮ್ಮ ಜೊತೆಗಿಲ್ಲದೆ ಕೆಲಸ ಮಾಡುವುದಕ್ಕೆ ಕಷ್ಟವಾಗುತ್ತದೆ. ಅವರ ಕನಸನ್ನು ನಾನು ಮುಂದುವರೆಸಿಕೊಂಡು ಹೋಗಬೇಕು. ನಮ್ಮ ಜೊತೆ ಒಳ್ಳೆ ತಂಡವಿದೆ ನಾವು ಸಂಪೂರ್ಣ ನ್ಯಾಯ ಕೊಡುತ್ತೀವಿ ಅಂದುಕೊಂಡಿದ್ದೀನಿ. ಅವರ ಪ್ರೊಡಕ್ಷನ್ ಹೌಸ್‌ನ ದೃಷ್ಟಿ ಮತ್ತು ಗುರಿಗಳು ಮುಂದೆವರೆಸಿಕೊಂಡು ಹೋಗುತ್ತೀವಿ ಹೊಸ ಪ್ರತಿಭೆಗಳಿಗೆ ಮತ್ತು ಕಂಟೆನ್ಟ್‌ಗಳಿಗೆ ಪ್ರಮುಖ್ಯತೆ ನೀಡುತ್ತೇವೆ. ನಮ್ಮ ಮುಂದಿನ ಪ್ರಾಜೆಕ್ಟ್‌ಗೆ ಎಕ್ಸೈಟ್ ಆಗಿರುವೆ, ಅದರ ಟೈಟಲ್‌ Achar & Co ಎಂದು. ಮಹಿಳಾ ನಿರ್ದೇಶಕಿ, ಸಿಂಧು ಮೂರ್ತಿ (Sindhu Murthy) ಕೆಲಸ ಮಾಡುತ್ತಿದ್ದಾರೆ. ಈ ತಂಡದಲ್ಲಿ ಮಹಿಳಾ ತಂತ್ರಜ್ಞರು ಕೂಡ ಇದ್ದಾರೆ ನಮ್ಮ ಸಂಗೀತ ನಿರ್ದೇಶನ ಮಾಡುತ್ತಿರುವುದು ಕೂಡ ಮಹಿಳೆ, ಬಿಂಧುಮಾಲಿನಿ. ಈ ಸಿನಿಮಾಗೆ ಕಾಯುತ್ತಿರುವೆ' ಎಂದು ಅಶ್ವಿನಿ ಮಾತನಾಡಿದ್ದಾರೆ. 

click me!