ಚಿತ್ರೀಕರಣ ಮುಗಿಸಿದ ಮನೆಗೊಬ್ಬ ಮಂಜುನಾಥ

By Suvarna News  |  First Published Nov 10, 2021, 12:45 PM IST
  • ಹೊಸಬರೇ ಸೇರಿ ಮಾಡಿರುವ ಚಿತ್ರ ‘ಮನೆಗೊಬ್ಬ ಮಂಜುನಾಥ’(Manegobba Manjunatha)
  • ಉಗ್ರಂ ರೆಡ್ಡಿ ಈ ಚಿತ್ರದ ಮುಖ್ಯ ಪಿಲ್ಲರ್‌

ಹೊಸಬರೇ ಸೇರಿ ಮಾಡಿರುವ ಚಿತ್ರ ‘ಮನೆಗೊಬ್ಬ ಮಂಜುನಾಥ’. ರವಿರಾಮ್‌ ಈ ಚಿತ್ರದ ನಿರ್ದೇಶಕರು. ವಂಶಿ, ನಾಣಿ, ಶಿವ ಈ ಮೂವರು ಸೋಮಾರಿ ಯುವಕರ ಸುತ್ತ ಸಾಗುವ ಕತೆ ಇದು.

ಚಿತ್ರೀಕರಣ ಮುಗಿಸಿರುವ ಕಾರಣಕ್ಕೆ ಚಿತ್ರತಂಡ ಈ ಕುರಿತು ಹೇಳಿಕೊಳ್ಳಲು ಮಾಧ್ಯಮಗಳ ಮುಂದೆ ಬಂತು. ಚಿತ್ರದಲ್ಲಿ ನಾಣಿ ಪಾತ್ರದಲ್ಲಿ ನಟಿಸುವ ಜತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ ಕೇಶವಮೂರ್ತಿ. ಉಳಿದಂತೆ ದತ್ತಣ್ಣ, ಪವನ್‌, ಕಾರ್ತಿಕ್‌ ಹಾಗೂ ಉಗ್ರಂ ರೆಡ್ಡಿ ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

Tap to resize

Latest Videos

ನಿರ್ದೇಶಕ ರವಿರಾಮ್‌ ಮಾತನಾಡಿ, ‘ಮನಂಜನೆ ಮೂಲಕ ಸಾಮಾಜಿಕ ಸಂದೇಶ ಹೇಳಬೇಕು ಎನ್ನುವ ಉದ್ದೇಶದಿಂದ ಈ ಚಿತ್ರವನ್ನು ಮಾಡಿದ್ದೇವೆ. ಹಾಸ್ಯದ ಮೂಲಕ ಒಳ್ಳೆಯ ಕತೆ ಹೇಳಬಹುದು ಎಂಬುದನ್ನು ಈ ಚಿತ್ರದ ಮೂಲಕ ತಿಳಿಯಬಹುದು’ ಎಂದರು. ಉಗ್ರಂ ರೆಡ್ಡಿ ಈ ಚಿತ್ರದ ಮುಖ್ಯ ಪಿಲ್ಲರ್‌. ಅವರು ಪುನೀತ್‌ ರಾಜ್‌ಕುಮಾರ್‌ ಜತೆಗೆ ಸಾಕಷ್ಟುಸಿನಿಮಾಗಳಲ್ಲಿ ನಟಿಸಿದ್ದಾರೆ. ಹೀಗಾಗಿ ಪುನೀತ್‌ ಅಗಲಿಕೆಯನ್ನು ನೆನೆದು ಭಾವುಕರಾದರು. ‘ಒಳ್ಳೆಯ ನಟನನ್ನು ನಾವು ಕಳೆದುಕೊಂಡಿದ್ದೇವೆ. ಅವರ ಜತೆ ನಾನು ನಟಿಸಿದ ಸಿನಿಮಾಗಳೇ ನೆನಪುಗಳು. ಕಲೆಯ ಮೂಲಕ ಅಪ್ಪು ಅವರು ಜೀವಂತವಾಗಿರುತ್ತಾರೆ’ ಎಂದರು ಉಗ್ರಂ ರೆಡ್ಡಿ. ಚಿತ್ರಕ್ಕೆ ಬಿ ಎಲ್‌ ಬಾಬು ಕ್ಯಾಮೆರಾ ಹಿಡಿದ್ದು, ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ.

Puneeth Rajkumar: ಪ್ರತಿವರ್ಷ ಜೊತೆಯಾಗಿ ಶಬರಿಮಲೆಗೆ ಹೋಗ್ತಿದ್ರು ಪ್ರೇಮ್-ಅಪ್ಪು

ಇನ್ನು ಈ ಚಿತ್ರದಲ್ಲಿ ಹಿರಿಯ ಕಲಾವಿದರಾದ ದತ್ತಣ್ಣ, ಕೃಷ್ಣೋಜಿರಾವ್, ಅಲ್ಲದೆ ನಿರ್ಮಾಪಕ ಮಹೇಂದ್ರ ಮಣೋತ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಬಿ.ಎಲ್. ಬಾಬು ಛಾಯಾಗ್ರಾಹಣವಿದೆ. ಸದ್ಯ ಎಲ್ಲಾ ಅಂದುಕೊಂಡಂತೆ ನಡೆಯುತ್ತಿದ್ದು , ಚಿತ್ರವನ್ನು ಅತಿ ಶೀಘ್ರದಲ್ಲಿ ಬಿಳಿ ಪರದೆ ಮೇಲೆ ತರಲು ಚಿತ್ರತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಕಮರ್ಷಿಯಲ್ ಅಂಶಗಳನ್ನು ಬಿಟ್ಟು ಈ ಸಿನಿಮಾದಲ್ಲಿ ಕೌಟುಂಬಿಕ ಕಥೆಗೆ ಚಿತ್ರದಲ್ಲಿ ಹೆಚ್ಚು ಮಹತ್ವ ನೀಡಲಾಗಿದೆ. ವಂಶಿ, ನಾಣಿ, ಸೀನ ಎಂಬ ಜೀವನದಲ್ಲಿ ಗೊತ್ತುಗುರಿ ಇಲ್ಲದ ಮೂರು ಸೋಂಬೇರಿ ಪಾತ್ರಗಳ ಮೇಲೆ ಸಾಗುವ ಈ ಕಥೆಯಲ್ಲಿ ಕೇಶವ್, ಪವನ್ ಹಾಗೂ ಕಾರ್ತೀಕ್ ನಾಯಕರಾಗಿ ನಟಿಸಿದ್ದು, ಉಗ್ರಂ ರೆಡ್ಡಿ ಅವರು ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಆದರೆ ಈಗ ಮನೆಗೊಬ್ಬ ಮಂಜುನಾಥ ಎನ್ನುವ ಶೀರ್ಷಿಕೆಯೊಂದಿಗೆ ಮೂವರು ಗೆಳೆಯರನ್ನು ಕರೆತರುತ್ತಿದ್ದಾರೆ ನಿರ್ದೇಶಕ ರವಿರಾಮ್. ಈ ಹಿಂದೆ ರಾಜಾಸಿಂಹ ಎಂಬ ಚಿತ್ರ ನಿರ್ದೇಶಿಸಿದ್ದ ರವಿರಾಮ್ ಈಗ ಮನೆಗೊಬ್ಬ ಮಂಜುನಾಥ ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ಪುನೀತ್ ಭಾವಚಿತ್ರಕ್ಕೆ ಪುಷ್ಪನಮನವನ್ನ ಚಿತ್ರತಂಡ ಸಲ್ಲಿಸಿತು. ನಂತರ ಉಗ್ರಂ ರೆಡ್ಡಿ ಭಾವುಕರಾಗಿ ಮಾತನಾಡುತ್ತಾ ನನ್ನ ಅಪ್ಪುದು 15 ವರ್ಷಗಳ ಒಡನಾಟ, 10 ಸಿನಿಮಾದಲ್ಲಿ ಅವರ ಜೊತೆ ಆಕ್ಟ್ ಮಾಡಿದ್ದೇನೆ ಎಂದಿದ್ದಾರೆ.

ಚಿತ್ರದ ನಿರ್ದೇಶಕ ರವಿರಾಮ್ ಮಾತನಾಡಿ ಒಂದು ಸಣ್ಣ ಎಳೆ ಇಟ್ಟುಕೊಂಡು ಈ ಚಿತ್ರ ಮಾಡಿದ್ದೇನೆ. ವಸ್ತುನಿಷ್ಠ ಕಥೆ, ಜೀವನದಲ್ಲಿ ಸೀರಿಯಸ್‍ನೆಸ್ ಇಲ್ಲದ 3 ಪಾತ್ರಗಳು, ಏನೂ ಕಷ್ಟಪಡದೆ ಒಮ್ಮೆಗೇ ಶ್ರೀಮಂತರಾಗಬೇಕು ಎಂದುಕೊಂಡಿರುತ್ತಾರೆ, ಅವರಂದುಕೊಂಡಿದ್ದು ಆಗುತ್ತಾ ಇಲ್ವಾ ಅನ್ನೋದೇ ಚಿತ್ರದ ಕಥೆ ಎಂದು ಹೇಳಿದ್ದಾರೆ.

ನಂತರ ಚಿತ್ರದ ನಾಯಕ ಹಾಗೂ ನಿರ್ಮಾಪಕ ಕೇಶವ್ ಮಾಡನಾಡುತ್ತಾ ನನ್ನದು ನಾಣಿ ಎನ್ನುವ ಪಾತ್ರ, ಹೆಂಡ್ತಿ ಮಗು ಇದ್ರೂ ಸೋಬೇರಿ ಥರ ಬದುಕುತಿರುತ್ತಾನೆ. ಒಂದೇ ದಿನದಲ್ಲಿ ಕೋಟಿ ಕೋಟಿ ದುಡ್ಡು ತರುತ್ತೇನೆ ಅಂತ ತನ್ನ ಮಾವನಿಗೆ ಭಾಷೆ ಕೊಟ್ಟು 5 ವರ್ಷಗಳಾದರೂ ಹಣ ತಂದಿರುವುದಿಲ್ಲ ಈ ರೀತಿಯ ಪಾತ್ರ ಮಾಡಿದ್ದೇನೆ ಹಾಗೂ ನಮ್ಮ ಬ್ಯಾನರ್‍ನಿಂದ ವರ್ಷಕ್ಕೊಂದು ಚಿತ್ರ ಮಾಡುವ ಯೋಚನೆಯಿದೆ ಎಂದು ಹೇಳಿದ್ದಾರೆ.

click me!