ರಾಜ್ ಬಿ. ಶೆಟ್ಟಿನಿರ್ದೇಶಿಸಿ ನಟಿಸಿರುವ ‘ಗರುಡ ಗಮನ ವೃಷಭ ವಾಹನ’ ನವೆಂಬರ್ 19ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ. ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಶಿವ ಮತ್ತು ಹರಿಯಾಗಿ ರಾಜ್ ಶೆಟ್ಟಿಮತ್ತು ರಿಷಬ್ ಅವರ ಪರ್ಫಾರ್ಮೆನ್ಸ್‌ಗೆ ವೀಕ್ಷಕರು ಭಲೇ ಅಂದಿದ್ದಾರೆ.
ಚಿತ್ರದಲ್ಲಿ ಪಕ್ಕಾ ದಕ್ಷಿಣ ಕನ್ನಡ ಸೊಗಡಿನ ಡೈಲಾಗ್, ಆ ಪರಿಸರದ ಕತೆ ಇರುವುದು ಟ್ರೈಲರ್‌ನಿಂದ ರಿವೀಲ್ ಆಗಿದೆ. ‘ಒಂದು ಮೊಟ್ಟೆಯ ಕತೆ’ ಸೇರಿದಂತೆ ಹಲವು ಚಿತ್ರಗಳಲ್ಲಿ ರಾಜ್ ಶೆಟ್ಟಿಅವರನ್ನು ಹಾಸ್ಯ ಪಾತ್ರಗಳಲ್ಲಿ ನೋಡಿದ್ದ ಪ್ರೇಕ್ಷಕರು, ಇದರಲ್ಲಿ ಚೂರಿ ಹಿಡಿದು ಮುನ್ನುಗ್ಗಿ ಅರ್ಭಟಿಸುವ ರೆಬೆಲ್ ಶಿವನ ಪಾತ್ರದಲ್ಲಿ ಕಣ್ತುಂಬಿಕೊಳ್ಳಬೇಕಿದೆ.
undefined
ಗರುಡಗಮನ ವೃಷಭವಾಹನಕ್ಕೆ ರಕ್ಷಿತ್ ಶೆಟ್ಟಿ ಬೆಂಬಲ
ಹರಿಯಾಗಿ ಪೊಲೀಸ್ ಪಾತ್ರದಲ್ಲಿ ರಿಷಬ್ ಇದ್ದಾರೆ. ಈ ಸಿನಿಮಾದ ಟ್ರೈಲರ್ ಅನ್ನು ರಕ್ಷಿತ್ ಶೆಟ್ಟಿಅವರ ಪರಂವಃ ಸ್ಟುಡಿಯೋಸ್ ಮೂಲಕ ಲೈಟರ್ ಬುದ್ಧ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ.
ರಿಷಬ್ ಶೆಟ್ಟಿಹಾಗೂ ರಾಜ್ ಬಿ. ಶೆಟ್ಟಿಕಾಂಬಿನೇಷನ್‌ನ ‘ಗರುಡಗಮನ ವೃಷಭವಾಹನ’(Garuda Gamana Vrishabha Vahana) ಚಿತ್ರಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಜತೆಯಾಗಿದ್ದಾರೆ. ಈ ಚಿತ್ರವನ್ನು ತಮ್ಮ ಪರಂವಃ ಸ್ಟುಡಿಯೋ ಮೂಲಕ ಬಿಡುಗಡೆ ಮಾಡುತ್ತಿರುವುದಾಗಿ ರಕ್ಷಿತ್ ಶೆಟ್ಟಿಹೇಳಿಕೊಂಡಿದ್ದಾರೆ.
ಈ ಕುರಿತು ನಟ ರಕ್ಷಿತ್ ಶೆಟ್ಟಿ, ‘ರಾಮಾ ರಾಮಾ ರೇ, ‘ಲೂಸಿಯಾ’, ‘ದಿಯಾ’, ‘ಕವಲುದಾರಿ’, ‘ಒಂದು ಮೊಟ್ಟೆಯ ಕಥೆ’, ‘ರಂಗಿತರಂಗ’ ಚಿತ್ರಗಳು ನನ್ನ ಬೀರಿದ ಪ್ರಭಾವ ದೊಡ್ಡದಾಗಿತ್ತು.
ಈಗ ಅಂಥದ್ದೇ ಪರಿಣಾಮಕಾರಿಯಾದ ಗರುಡಗಮನ ವೃಷಭವಾಹನ ಚಿತ್ರವನ್ನು ನಾನು ನನ್ನ ಪರಂವಃ ಸ್ಟುಡಿಯೋ ಮೂಲಕ ಬಿಡುಗಡೆ ಮಾಡುತ್ತಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.‘ಗರುಡಗಮನ ವೃಷಭವಾಹನ’ ಚಿತ್ರ ಒಂದು ಗಾಂಗ್‌ಸ್ಟರ್ ಕತೆಯಾಗಿದ್ದು, ಇಲ್ಲಿ ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿಮುಖಾಮುಖಿ ಆಗುತ್ತಿರುವುದು ವಿಶೇಷ.
ಮದುವೆಯ ಚಂದದ ಫೋಟೋಸ್ ಶೇರ್ ಮಾಡಿದ ಶ್ರುತಿ..!
ರಾಜ್ ಬಿ ಶೆಟ್ಟಿಚಿತ್ರದ ನಿರ್ದೇಶಕರು. ಮಂಗಳೂರಿನ ಭೂಗತ ಜಗತ್ತಿನ ಸುತ್ತ ಕಥಾಹಂದರವಿದೆ. ಇದರಲ್ಲಿ ಗರುಡಗಮನ ಅಂದರೆ ವಿಷ್ಣು. ಪ್ರಧಾನ ಪಾತ್ರಗಳಲ್ಲಿ ಒಬ್ಬನಿಗೆ ವಿಷ್ಣುವಿನ ಸಂಯಮ ಸ್ವಭಾವ, ಇನ್ನೊಬ್ಬ ವೃಷಭವಾಹನ ಅಂದರೆ ಶಿವ, ಆತನದು ನಿಯಂತ್ರಣವೇ ಇಲ್ಲದ ವಿಪರೀತ ಸ್ವಭಾವ. ಇಂಥ ಸ್ವಭಾವದ ಇಬ್ಬರು ರೌಡಿಸಂನಲ್ಲಿ ಹೇಗೆ ಸೌಂಡ್ ಮಾಡ್ತಾರೆ ಅನ್ನುವ ಕಥೆ. ಲೈಟರ್ ಬುದ್ಧ ಫಿಲಂನಡಿ ರವಿ ರೈ ಹಾಗೂ ವಚನ್ ಶೆಟ್ಟಿಚಿತ್ರ ನಿರ್ಮಿಸಿದ್ದಾರೆ.