ಸ್ಯಾಂಡಲ್‌ವುಡ್‌ನ(Sandalwood) ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ (Chiranjeevi Sarja) ಅಭಿನಯದ ಕೊನೆಯ ಚಿತ್ರ 'ರಾಜಮಾರ್ತಾಂಡ' (RajaMarthanda) ಚಿತ್ರದ ಬರ್ತ್‌ಡೇ ಟೀಸರ್ (HBD Teaser) ಬಿಡುಗಡೆಯಾಗಿದೆ. ಚಿರಂಜೀವಿ ಸರ್ಜಾ ಹುಟ್ಟುಹಬ್ಬಕ್ಕೆ ಚಿತ್ರತಂಡ ಚಿತ್ರದ ಟೀಸರ್‌ನ್ನು ಅವರ ಮಗ ರಾಯನ್ ರಾಜ್ ಸರ್ಜಾರಿಂದ (Raayan Raj Sarja) ಬಿಡುಗಡೆಗೊಳಿಸಿದೆ. ರಾಯನ್ ಸರ್ಜಾ ಮೊಬೈಲ್‌ನಲ್ಲಿ ತಮ್ಮ ತಂದೆಯ ಚಿತ್ರವನ್ನು ನೋಡಿ ತೊದಲು ನುಡಿ ಮಾತಾನಾಡಿ, ಮುಗುಳ್ನಗುವುದರಿಂದ ಚಿತ್ರದ ಟೀಸರ್ ಪ್ರಾರಂಭವಾಗುತ್ತದೆ.
ಚಿರಂಜೀವಿ ಸರ್ಜಾ 'ಸಾವದಾನ... ಸ್ವಲ್ಪ ಸಾವದಾನ...' ಎಂಬ ಡೈಲಾಗ್ ಟೀಸರ್‌ನಲ್ಲಿ ಕಂಡು ಬರುತ್ತದೆ. ಜೊತೆಗೆ 'ರಾಜಮಾರ್ತಾಂಡ' ಚಿತ್ರದ ಮೇಕಿಂಗ್ (Making) ಹಾಗೂ ಚಿರು ಚಿತ್ರತಂಡದದೊಂದಿಗೆ ಇರುವಂತಹ ಹಲವಾರು ಸಂತೋಷದ ಕ್ಷಣಗಳು ಟೀಸರ್‌ನಲ್ಲಿ ರಾರಾಜಿಸುತ್ತವೆ. ಕೆ.ರಾಮ್ ನಾರಾಯಣ್ (K.Ramnarayan) ನಿರ್ದೇಶನದ ಈ ಚಿತ್ರಕ್ಕೆ ಶಿವಕುಮಾರ್ ಎನ್ ನಿರ್ಮಾಣ ಮಾಡುತ್ತಿದ್ದು, ಈ ಹಿಂದೆ ಚಿರು ಜೊತೆ 'ಅಜಿತ್' (Ajith) ಸಿನಿಮಾ ಮಾಡಿದ್ದರು. ಇದೊಂದು ಆ್ಯಕ್ಷನ್ ಜೊತೆಗೆ ಸೆಂಟಿಮೆಂಟ್ ಅಂಶಗಳೊಂದಿಗೆ ಸಾಗುವ ಸಿನಿಮಾವಾಗಿದ್ದು, ತನ್ನ ಸಾಮರ್ಥ್ಯದಿಂದ ಏನು ಬೇಕಾದರೂ ಪಡೆದುಕೊಳ್ಳುವ ವ್ಯಕ್ತಿಯಾಗಿ ಚಿರು ಕಾಣಿಸಿಕೊಂಡಿದ್ದಾರೆ.
ರೊಮ್ಯಾಂಟಿಕ್ ಹಾಡಿಗೆ ಸ್ಟೈಲಿಶ್ ಸ್ಟೆಪ್ಸ್ ಹಾಕಿದ ರೈಡರ್, ಟ್ರೆಂಡ್ ಆಯ್ತು ನಿಖಿಲ್ ಸಾಂಗ್
ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ (Arjun Janya) ಸಂಗೀತ, ಜಬೇಜ್ ಕೆ ಗಣೇಶನ್ ಕ್ಯಾಮೆರಾ ಕೈಚಳಕವಿದ್ದು, ಚಿರುಗೆ ದೀಪ್ತಿ ಸತಿ ಜೋಡಿಯಾಗಿದ್ದಾರೆ. ಚಿರು ಅಕಾಲಿಕ ನಿಧನದಿಂದ ಈ ಚಿತ್ರಕ್ಕೆ ಅವರ ಸಹೋದರ ಧ್ರುವ ಸರ್ಜಾ (Dhruva Sarja) ಡಬ್ ಮಾಡಿದ್ದಾರೆ. ಮೇಘನಾ ರಾಜ್ (Meghana Raj) ಕೂಡ ಈ ಚಿತ್ರದ ಮೇಲೆ ವಿಶೇಷ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇತ್ತಿಚೆಗಷ್ಟೇ ಚಿತ್ರದ ಮೊದಲ ಟೀಸರ್‌ನ್ನು ಕೂಡಾ ರಾಯನ್ ಬಿಡುಗಡೆ ಮಾಡಿದ್ದ.
ಚಿರು ಹುಟ್ಟುಹಬ್ಬದ ಪ್ರಯುಕ್ತ ಅವರ ಪತ್ನಿ ಮೇಘನಾ ರಾಜ್ ವಿಶೇಷ ಫೋಟೋಶೂಟ್ (Photo Shoot) ಮಾಡಿಸಿದ್ದು, ಮಹಾರಾಣಿ ಗೆಟಪ್‌ನಲ್ಲಿ ಚಿರು ಫೋಟೋ ಜೊತೆ ಪೋಸ್ ಕೊಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ. ಸದ್ಯ ಚಿರು ನಿಧನದ ಬಳಿಕ ನಟನೆಯಿಂದ ಗ್ಯಾಪ್ ಪಡೆದುಕೊಂಡಿದ್ದ ಮೇಘನಾ ರಾಜ್ ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಅವರ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ. ಹಾಗೂ ಈ ಚಿತ್ರವನ್ನು ಚಿರು ಸ್ನೇಹಿತ ಪನ್ನಗಭರಣ (Pannagabharana) ನಿರ್ಮಿಸುತ್ತಿದ್ದಾರೆ. ಕಳೆದ ವರ್ಷ ಜೂನ್ 7ರಂದು ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿದರು. ಇದರಿಂದ ಕನ್ನಡ ಚಿತ್ರರಂಗ ಊಹಿಸಿಕೊಳ್ಳಲಾಗದ ದೊಡ್ಡ ಆಘಾತದಲ್ಲಿತ್ತು.