
ಪ್ರಿಯಾಂಕಾ ಉಪೇಂದ್ರ ನಟನೆಯ ‘1980’ ಚಿತ್ರ ಅಕ್ಟೋಬರ್ 15ಕ್ಕೆ ‘ನಮ್ಮ ಫ್ಲಿಕ್ಸ್ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಟ್ರೈಲರ್ ಅನ್ನು ಕಿಚ್ಚ ಸುದೀಪ್ ಹಾಗೂ ಉಪೇಂದ್ರ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಸುದೀಪ್, ‘ಎಷ್ಟೋ ಲದ ಬಳಿಕ ದೊಡ್ಡ ಪರದೆಯ ಮೇಲೆ ಚಿತ್ರದ ಟ್ರೈಲರ್ ನೋಡಿ ರೋಮಾಂಚನವಾಯ್ತು.
ಪರದೆ ಎಷ್ಟು ಮುಖ್ಯ ಅನ್ನೋದರ ಅರಿವಾಯ್ತು. ಕನ್ನಡ ಚಿತ್ರ ಜಗತ್ತು ಬೇಗ ಹಿಂದಿನ ಚೈತನ್ಯ ತುಂಬಿಕೊಳ್ಳಲಿ. ದೊಡ್ಡ ಪರದೆ ಮೇಲೆ ಸಿನಿಮಾ ನೋಡೋಕೆ, ತೆರೆ ಮೇಲೆ ಬರೋದಕ್ಕೆ ಕಾಯ್ತಿದ್ದೀನಿ’ ಎಂದರು.
ಪುರುಷೋತ್ತಮ ಚಿತ್ರದ ಆಡಿಯೋ ಬಿಡುಗಡೆ
ಪರ್ಯಾಯ ವಿಶ್ವದ ಕಥಾವಸ್ತು ಹೊಂದಿರುವ 1980 ಸಿನಿಮಾಕ್ಕೆ ಉಪೇಂದ್ರ ಶುಭ ಕೋರಿದರು. ಪ್ರಿಯಾಂಕಾ ಉಪೇಂದ್ರ, ‘ಚಿತ್ರದಲ್ಲಿ ನನಗೆ
ಇಂಟರೆಸ್ಟಿಂಗ್ ಪಾತ್ರವಿದೆ. ಈ ರೆಟೊ್ರೀ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ ಜನರ ಮನ ಗೆಲ್ಲೋದು ಖಚಿತ’ ಎಂದರು.
ನಿರ್ಮಾಪಕ ಜಾಕ್ ಮಂಜುನಾಥ್, ಚಿತ್ರದ ನಿರ್ದೇಶಕ ರಾಜ್ ಕಿರಣ್, ನಮ್ಮ ಫ್ಲಿಕ್‌ಸ್ ಓಟಿಟಿಯ ಸಿಇಓ ವಿಜಯ ಪ್ರಕಾಶ್, ನಿರ್ಮಾಪಕರಾದ
ಪೂಜಶ್ರೀ, ಸ್ವಾಮಿರಾಜ್, ನಟಿ ಶರಣ್ಯಾ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.