ನಟ ಕಿಚ್ಚ ಸುದೀಪ್ ಸಿನಿಜರ್ನಿಗೆ ಮತ್ತೊಂದು ಪ್ರಶಸ್ತಿ ಗರಿ ಮೂಡಿದೆ. ಈಗ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗೆ ಕಿಚ್ಚ ಸುದೀಪ್ ಭಾಜನರಾಗಿದ್ದಾರೆ.
‘ದಬಾಂಗ್ 3’ ಚಿತ್ರದಲ್ಲಿನ ಅತ್ಯುತ್ತಮ ನಟನೆಗೆ ದೆಹಲಿಯ ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸುದೀಪ್ ಹೆಸರನ್ನು ಆಯ್ಕೆ ಮಾಡಿದೆ. ಮುಂಬೈನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಫಾಲ್ಕೆ ಪ್ರಶಸ್ತಿಯನ್ನು ನಮ್ರತೆಯಿಂದ ಸ್ವೀಕರಿಸಿದ 'ದಾದಾ'- ವಿಡಿಯೋ
ಭಾರತೀಯ ಚಿತ್ರರಂಗದ ಮಟ್ಟಿಗೆ ಇದೊಂದು ಪ್ರತಿಷ್ಟಿತ ಪ್ರಶಸ್ತಿ. ದಾದಾ ಸಾಹೇಬ್ ಫಾಲ್ಕೆ ಅವರ ಮೇಲಿನ ಗೌರವಕ್ಕಾಗಿ ಭಾರತೀಯ ಚಿತ್ರರಂಗದ ಗಣ್ಯರು, ತಜ್ಞರು, ಬರಹಗಾರರು ಹುಟ್ಟು ಹಾಕಿರುವ ಪ್ರಶಸ್ತಿ. ಫಾಲ್ಕೆ ಅವರ ಹೆಸರಲ್ಲಿ ಪ್ರತಿ ವರ್ಷ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಿ ನಟ-ನಟಿಯರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಾ ಬರುತ್ತಿದೆ. ಪ್ರತಿ ವರ್ಷವೂ ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಛಾಯಾಗ್ರಾಹಕ, ಅತ್ಯುತ್ತಮ ನಟಿ ಸೇರಿದಂತೆ ಹಲವು ನಿಭಾಗಗಳಲ್ಲಿ ಪ್ರಶಸ್ತಿ ನೀಡುತ್ತಿದೆ. ಈಗ 10ನೇ ವರ್ಷದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಅಂಗವಾಗಿ ಸುದೀಪ್ ಅವರನ್ನು ದಬಾಂಗ್ 3 ಚಿತ್ರದಲ್ಲಿನ ಅಭಿನಯಕ್ಕಾಗಿ ‘ಭರವಸೆಯ ನಟ’ ಪ್ರಶಸ್ತಿಗೆ ಸಮಿತಿ ಆಯ್ಕೆ ಮಾಡಿರುವುದು ವಿಶೇಷ.
undefined
ಫೆಬ್ರವರಿ 20ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಮಹಾರಾಷ್ಟ್ರ ರಾಜ್ಯಪಾಲರು ಸೇರಿದಂತೆ ಭಾರತೀಯ ಚಿತ್ರರಂಗದ ಗಣ್ಯರು, ಕೇಂದ್ರ ಸಚಿವರು ಈ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆನ್ನಲಾಗಿದೆ.ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಶುಭ ಕೋರಿ ಪತ್ರ ಬರೆದಿದ್ದಾರೆ. ಸಮಾರಂಭ ದೊಡ್ಡ ಮಟ್ಟದಲ್ಲಿ ನಡೆಯಲಿದೆ. ಬಾಲಿವುಡ್‌ನ ಹೆಸರಾಂತ ಕಲಾವಿದರು ಭಾಗವಹಿಸುತ್ತಿದ್ದಾರೆ.
ಈ ವ್ಯಕ್ತಿಗಾಗಿ 15 ವರ್ಷ ಬಳಿಕ 'ಪ್ರೈಡ್ ಆಫ್ ಕನ್ನಡ ಸಿನಿಮಾ' ಅವಾರ್ಡ್ ಸ್ವೀಕರಿಸಿದ ಕಿಚ್ಚ!