'ಗಡಿನಾಡು' ಚಿತ್ರ ತಂಡಕ್ಕೆ ಬೆದರಿಕೆ ಕರೆ; ಟೈಟಲ್‌ ಬದಲಾಗುತ್ತಾ?

Published : Jan 20, 2020, 01:40 PM IST
'ಗಡಿನಾಡು' ಚಿತ್ರ ತಂಡಕ್ಕೆ ಬೆದರಿಕೆ ಕರೆ; ಟೈಟಲ್‌ ಬದಲಾಗುತ್ತಾ?

ಸಾರಾಂಶ

ತೆರೆ ಕಾಣಲು ಸಜ್ಜಾಗುತ್ತಿರುವ 'ಗಡಿನಾಡು' ಚಿತ್ರತಂಡಕ್ಕೆ ಬೆದರಿಕೆ ಕರ ಬರಲಾರಂಭಿಸಿದೆಯಂತೆ. ಟೈಟಲ್‌ ವಿಚಾರದಲ್ಲಿ ನಿರ್ದೇಶಕ ನಾಗ್‌ ಹುಣಸೂದ್‌ಗೆ ಕರೆಗಳು ಬರುತ್ತಿವೆ. 

ಕನ್ನಡ ಚಿತ್ರರಂಗದ ಬಹು ನೀರಿಕ್ಷಿತ ಚಿತ್ರ 'ಗಡಿನಾಡು' ಇದೇ ವಾರ ತೆರೆ ಕಾಣಲು ಸಜ್ಜಾಗುತ್ತಿದೆ. ಇನ್ನೇನು ಫೈನಲ್ ವರ್ಕ್ ಮುಗಿದು, ಚಿತ್ರ ಬಿಡುಗಡೆಯಾಗಬೇಕೆನ್ನುವ ಸಂದರ್ಭದಲ್ಲಿ ನಿರ್ದೇಶಕ ನಾಗ್‌ ಹುಣಸೂದ್‌ಗೆ ಟೈಟಲ್‌ ಬದಲಾಯಿಸುವಂತೆ ಬೆದರಿಕೆ ಕರೆಗಳು ಬರಲು ಆರಂಭವಾಗಿವೆ. 

ಐ‍ಷಾರಾಮಿ ಕಾರಿಗೆ ಗುಡ್‌ಬೈ ಹೇಳಿದ ಡಿ-ಬಾಸ್‌; 'ಕರಿಯಾ' ಚಿತ್ರದ ಲೂನಾ ನೋಡಿ!

ಗಡಿನಾಡಿನಲ್ಲಿ ಎದುರಾಗುವ ಸಂಕಷ್ಟಗಳನ್ನು ಅಲೆ ಅಲೆಯಾಗಿ ತೋರಿಸುತ್ತಿರುವ ನಾಗ್‌ ಅವರಿಗೆ ಮಧ್ಯರಾತ್ರಿ 12ಕ್ಕೆ ಬೆದರಿಕೆ ಕರೆಗಳು ಬರುತ್ತಿವೆ. ಈ ಕರೆಯ ವಿಚಾರವಾಗಿ ಸ್ಥಳೀಯ ಪೊಲೀಸರಿಗೆ ದೂರು ನೀಡಲು ಗಡಿನಾಡು ಚಿತ್ರತಂಡ ನಿರ್ಧರಿಸಿದೆ.

ತಲ್ವಾರ್‌ನಿಂದ ಕೇಕ್ ಕಟ್; ಕ್ಷಮೆಯಾಚಿಸಿದ ದುನಿಯಾ ವಿಜಿ..!

ಗಡಿನಾಡು ಚಿತ್ರದಲ್ಲಿ ಮರಾಠಿ-ಕನ್ನಡಿಗನ ಪ್ರೇಮ ಕಥೆಯಿದೆ. ಚಿತ್ರದ ನಾಯಕ ಪ್ರಭುಸೂರ್ಯ ಹಾಗೂ ನಾಯಕಿಯಾಗಿ ಸಂಚಿತಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಚಿತ್ರದಲ್ಲಿ ನಾಲ್ಕು ಖಳನಾಯಕರು ಇರುವುದು ವಿಶೇಷ. ಚರಣ್‌ ರಾಜ್‌, ಶೋಭರಾಜ್‌, ದೀಪಕ್‌ ಶೆಟ್ಟಿ ಮತ್ತು ರಘುರಾಜು ಖಳನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕರ್ಲಿ ಹೇರ್, ಹಳದಿ ಡ್ರೆಸ್: ಸಂಗೀತಾ ಶೃಂಗೇರಿ ಹೊಸ ಅವತಾರ ನೋಡಿ ನೆಟ್ಟಿಗರು ಏನಂದ್ರು?
ಹಿಮವದ್ ಗೋಪಾಲಸ್ವಾಮಿ ದೇವರ ದರ್ಶನಕ್ಕೆ ಬಂದ ನಟ ಚಿಕ್ಕಣ್ಣ-ಪಾವನಾ: ಅಲ್ಲೇ ಸಿಕ್ತು ಸಿಹಿ ಸುದ್ದಿ!