
ಬೆಂಗಳೂರು(ಮಾ.08): ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾ ಪ್ರಕರಣ ಆಳ ಉದ್ದಗಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪೊಲೀಸರು ಒಬ್ಬರ ಹಿಂದೊಬ್ಬರನ್ನು ವಶಕ್ಕೆ ಪಡೆಯುತ್ತಿದ್ದಾರೆ. ಇತ್ತೀಚೆಗೆ ಬಿಗ್‌ಬಾಸ್ ಖ್ಯಾತಿಯ ಮಸ್ತಾನ್ ಚಂದ್ರನನ್ನು ವಶಕ್ಕೆ ಪಡೆದ ಬೆನ್ನಲ್ಲೇ, ಇದೀಗ ಖ್ಯಾತ ಕೆಂಪೇಗೌಡ 2 ಚಿತ್ರದ ನಿರ್ಮಾಪಕ ಶಂಕರ್ ಗೌಡ ಕಚೇರಿ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.
ಸಂಜಯ್ ನಗರದ ಆರ್ ಎಂ ವಿ ಕ್ಲಬ್ ಎದುರಿಗಿರುವ ಶಕಂರ್ ಗೌಡ ಅವರ ಕಚೇರಿ ಮೇಲೆ ಗೊವಿಂದಪುರ ಠಾಣಾ ಎಸಿಪಿ ಲಿಂಗಪ್ಪ ಬಿ ಸಕ್ರಿ ಮತ್ತು ಇನ್ಸ್ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಸರ್ಚ್ ವಾರೆಂಟ್ ಪಡೆದು ಪೊಲೀಸರು ದಾಳಿ ನಡೆಸಿದ್ದಾರೆ.
ಸ್ಯಾಂಡಲ್‌ವುಡ್ ಡ್ರಗ್ಸ್ ಮತ್ತಷ್ಟು ಲಿಂಕ್ ಓಪನ್..ಬಿಗ್ ಬಾಸ್ ಮಾಜಿ ಸ್ಪರ್ಧಿ ಬಲೆಗೆ!
ಶಂಕರ್ ಗೌಡ ಕಚೇರಿಯಲ್ಲಿದ್ದ ಸಂದರ್ಭದಲ್ಲೇ ಪೊಲೀಸರು ರೇಡ್ ಮಾಡಿದ್ದಾರೆ. ಶಂಕರ್ ಸಹಿತ, ಓರ್ವ ಮ್ಯಾನೇಜರ್, ನಾಲ್ವರು ಕೆಲಸಗಾರರು ಕಚೇರಿಯಲ್ಲಿದ್ದರು ಇನ್ನು ಮ್ಯಾನೇಜರ್ ಹಾಗೂ ಶಂಕರ್ ಗೌಡ ಮೊಬೈಲ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಚೇರಿಯ ಕೊಠಡಿಗಳು, ಕಾರುಗಳು ಪರಿಶೀಲನೆ ನಡೆಸಿದ ಪೊಲೀಸರು ಕೆಲ ಮಾಹಿತಿಗಳನ್ನು ವಶಪಡಿಸಿಕೊಂಡಿದ್ದಾರೆ.
ಇತ್ತೀಚೆಗೆ ಬಿಗ್‌ಬಾಸ್ ಸ್ಪರ್ಧಿ ಮಸ್ತಾನ್ ಚಂದ್ರನನ್ನು ಇದೇ ಡ್ರಗ್ಸ್ ಪ್ರಕರಣ ಸಂಬಂಧ ಪೊಲೀಸರು ವಶಕ್ಕೆ ಪಡೆದಿದ್ದರು. ಮಸ್ತಾನ್ ವಿಚಾರಣೆ ವೇಳೆ, ನಿರ್ಮಾಪಕ ಶಂಕರ್ ಗೌಡ ಡ್ರಗ್ಸ್ ತರಿಸಿಕೊಳ್ಳುತ್ತಿರುವ ಕುರಿತು ಬಾಯಿಬಿಟ್ಟಿದ್ದ. ಈ ಕುರಿತು ಇತರ ಮಾಹಿತಿ ಸಂಗ್ರಹಿಸಿದ ಪೊಲೀಸರು ಶಂಕರ್ ಗೌಡ ಮೇಲೆ ದಾಳಿ ನಡೆಸಿದ್ದಾರೆ.
ನಿರ್ಮಾಪಕ ಶಂಕರ್ ಗೌಡ ಕಚೇರಿ ಮೇಲೆ ಪೊಲೀಸರ ದಾಳಿ ಬಹುತೇಕ ಮುಕ್ತಾಯಗೊಂಡಿದೆ. ಸದ್ಯ ಮಹಜರು ಪ್ರಕ್ರಿಯೆಯಲ್ಲಿ ತೊಡಗಿರುವ ಪೊಲೀಸರು, ಶಂಕರ್ ಗೌಡಗೆ ಸೇರಿದ 2 ಮೊಬೈಲ್ಸ್, ಮ್ಯಾನೇಜರ್ ನ 1 ಮೊಬೈಲ್, ಹಾರ್ಡ್ ಡಿಸ್ಕ್ ವಶಕ್ಕೆ ಪಡೆದಿದ್ದಾರೆ. ಶಂಕರ್ ಗೌಡ ಅವರಿಗೆ ನಾಳೆ(ಮಾ.09) ಬೆಳಿಗ್ಗೆ 9 ಗಂಟೆಗೆ ಗೋವಿಂದಪುರ ಠಾಣೆಗೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ. ಶಂಕರ್ ಗೌಡ ಖ್ಯಾತ ಕೆಂಪೇಗೌಡ 2 ಚಿತ್ರದ ನಿರ್ಮಾಪಕರಾಗಿದ್ದಾರೆ. ಇಷ್ಟಕಾಮ್ಯ ಸೇರಿದಂತೆ ಕೆಲ ಪ್ರಮುಖ ಕನ್ನಡ ಚಿತ್ರದ ನಿರ್ಮಾಪಕರಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.