
ಬೆಂಗಳೂರು(ಮಾ. 07) ಸ್ಯಾಂಡಲ್‌ವುಡ್ ಮೋಹಕ ತಾರೆ ರಮ್ಯಾ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದಿಂದ ದೂರ ಉಳಿದು ಅದೇನು ಮಾಡುತ್ತಿದ್ದಾರೆ ಎಂಬುದಾಗಿ ಮಾತ್ರ ಯಾರಿಗೂ ಗೊತ್ತಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್.. ರಮ್ಯಾ ಸೀಟಿ ಹೊಡೆದಿದ್ದಾರೆ ಆದರೆ ಸೌಂಡ್ ಮಾತ್ರ ಬಂದಿಲ್ಲ.
ತಮ್ಮ ಮುದ್ದಿನ ಶ್ವಾನದ ಜತೆಗಿನ ವಿಡಿಯೋ ಒಂದನ್ನು ಹಂಚಿಕೊಂಡಿರುವ ರಮ್ಯಾ ಸೀಟಿ ಹೊಡೆದಿದ್ದಾರೆ. ದೆಹಲಿಯಲ್ಲಿ ವಾಸವಿರುವ ರಮ್ಯಾ ತಮ್ಮ ಶ್ವಾನಗಳ ಜೊತೆ ಹೆಚ್ಚಿನ ಸಮಯ ಕಳೆಯುತ್ತಾರೆ. ಸದಾ ಅವುಗಳ ಜೊತೆ ಇನ್‌ಸ್ಟಾಗ್ರಾಂ ಸ್ಟೋರಿ ಹಾಕುತ್ತಿದ್ದ ನಟಿ ಇದೀಗ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ದೂರ ಉಳಿದ ರಮ್ಯಾ ಈ ಮೂವರಿಗೆ ತುಂಬಾ ಹತ್ತಿರ
ಯಾರು ಯಾರು ನನ್ನ ನೆನಪಿನಲ್ಲಿ ಇಟ್ಟುಕೊಂಡಿದ್ದೀರಿ.. ಯೆಸ್ ನನಗೆ ಶಬ್ದ ಮರೆತುಗೋಗಿದೆ. ಆದರೆ ಸೀಟಿ ಶಬ್ದ ಹೇಗಿರುತ್ತದೆ ಎಂಬುದು ನಿಮ್ಮೆಲ್ಲರಿಗೂ ಗೊತ್ತೆ ಇದೆ. ನನ್ನ ಜತೆ ಸೇರಿ ಸೀಟಿ ಹೊಡೆಯಿರಿ. ನಾನು ಚಾಂಪಿಯನ್(ಶ್ವಾನ) ಗಮನ ಸೆಳೆಯುವ ಯತ್ನ ಮಾಡಿ ವಿಫಲಳಾಗಿದ್ದೇನೆ...
ಹೀಗೆಂದು ಬರೆದುಕೊಂಡಿರುವ ರಮ್ಯಾ ತಮ್ಮ ಶ್ವಾನ ಪ್ರೀತಿ ಮೆರೆದಿದ್ದಾರೆ. ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಉಸ್ತುವಾರಿಯನ್ನು ಒಂದು ಕಾಲದಲ್ಲಿ ನೋಡಿಕೊಳ್ಳುತ್ತಿದ್ದ ರಮ್ಯಾ ಇದೀಗ ಸ್ವಲ್ಪ ದೂರವೇ ಉಳಿದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.