ನಟ ದರ್ಶನ್ ಪುತ್ರ ವಿನೀಶ್‌ಗೆ ಭಾರೀ ಗಿಫ್ಟ್; ನಾಳೆ ಅಪ್ಪನ ಜೊತೆ ಹುಟ್ಟುಹಬ್ಬ!

By Shriram BhatFirst Published Oct 30, 2024, 4:57 PM IST
Highlights

ಮಗನ ಹುಟ್ಟುಹಬ್ಬದ ಹಿಂದಿನ ದಿನವೇ ದರ್ಶನ್ ರಿಲೀಸ್ ಆದಂತಾಗಿದೆ. ನಾಳೆ, ಅಕ್ಟೋಬರ್ 31ರಂದು ಹುಟ್ಟು ಹಬ್ಬ ಆಚರಿಸಿಕೊಳ್ಳಲಿರೋ ವಿನೀಶ್ ಇದೀಗ ಫುಲ್ ಖುಷಿಯಾಗಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಅಪ್ಪನಿಂದ ಮಗ ವಿನೀಶ್ ದೂರವಿದ್ದು..

ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಪುತ್ರ ವಿನೀಶ್ ತೂಗುದೀಪ (Vineesh Thgoogudeepa) ಭಾರೀ ಖುಷಿ ಅನುಭವಿಸುತ್ತಿದ್ದಾರೆ. ಹೈಕೋರ್ಟ್‌ನಿಂದ ಬುಧವಾರ ನಟ ದರ್ಶನ್‌ಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ಅಪ್ಪ ರಿಲೀಸ್ ಆಗಿರುವ ಕಾರಣಕ್ಕೆ ಪುತ್ರ ವಿನೀಶ್ ತೂಗುದೀಪನಿಗೆ ಭಾರೀ ಬಂಪರ್ ಗಿಫ್ಟ್ ಸಿಕ್ಕಂತಾಗಿದೆ. ಕಾರಣ, ನಾಳೆ (ಅಕ್ಟೋಬರ್ 31) ವಿನೀಶ್ ಹುಟ್ಟುಹಬ್ಬ!

ಮಗನ ಹುಟ್ಟುಹಬ್ಬದ ಹಿಂದಿನ ದಿನವೇ ದರ್ಶನ್ ರಿಲೀಸ್ ಆದಂತಾಗಿದೆ. ಇದು ದರ್ಶನ್ ಕುಟುಂಬದ ಡಬಲ್ ಖುಷಿಗೆ ಕಾರಣವಾಗಿದೆ. ನಾಳೆ, ಅಕ್ಟೋಬರ್ 31ರಂದು ಹುಟ್ಟು ಹಬ್ಬ ಆಚರಿಸಿಕೊಳ್ಳಲಿರೋ ವಿನೀಶ್ ಇದೀಗ ಫುಲ್ ಖುಷಿಯಾಗಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಅಪ್ಪನಿಂದ ಮಗ ವಿನೀಶ್ ದೂರವಿದ್ದು, ಇದೀಗ ಸಹಜವಾಗಿ ಅಪ್ಪನ ಬರುವಿಕೆ ಆತನಿಗೆ ಸಖತ್  ಸಂತೋಷ ನೀಡಿದೆ. 

Latest Videos

'ಕಾಲಾಯಾ ತಸ್ಮೈ ನಮಃ' ಅಂತ ನಟಿ ರಚಿತಾ ರಾಮ್ ಹೇಳಿದ್ಯಾಕೆ?

ಷರತ್ತುಬದ್ಧ ಜಾಮೀನು ಪಡೆದಿರುವ ನಟ ದರ್ಶನ್ ಅವರನ್ನು ಕರೆತರಲು ಪತ್ನಿ ವಿಜಯಲಕ್ಷ್ಮಿ ಬಳ್ಳಾರಿ ಜೈಲಿಗೆ ಹೋಗಿದ್ದಾರೆ. ಬಳ್ಳಾರಿ ಕಾರಾಗ್ರಹದಿಂದ ಹೊರಗೆ ಬಂದಿರುವ ನಟ ದರ್ಶನ್ ಇಂದು ರಾತ್ರಿ ನಾಲ್ಕು ತಿಂಗಳ ಬಳಿಕ ಮತ್ತೆ ಹೊರಜಗತ್ತು ನೋಡಲಿದ್ದಾರೆ. ಆದರೆ, ಇದು ಷರತ್ತುಬದ್ಧ ಜಾಮೀನು, 6 ವಾರಗಳ ಬಳಿಕ ಮತ್ತೆ ಕೋರ್ಟ್ ಆದೇಶದಂತೆ ಜೈಲಿಗೆ ವಾಪಸ್ಸಾಗುವ ಆದೇಶವಿದೆ. ಮುಂದಿನ ಬೆಳವಣಿಗೆ ಬಗ್ಗೆ ಯಾರೂ ಏನೂ ಈಗಲೇ ಹೇಳಲಾಗದು! ಆದರೆ, ಸದ್ಯ ಕೋರ್ಟ್ ಕೊಟ್ಟಿರುವುದು ಷರತ್ತು ಬದ್ಧ ಜಾಮೀನು. 

ನಟ ದರ್ಶನ್ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಕೋರ್ಟ್‌ನಿಂದ 6 ವಾರಗಳ ಕಾಲ ಮಧ್ಯಂತರ ಜಾಮೀನು ಸಿಕ್ಕರೂ ಇದು ಷರತ್ತುಬದ್ಧ! ಜಾಮೀನು ಪಡೆದು ಹೊರಗೆ ಹೋಗುವ ಮುನ್ನ 7 ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದೆ. ಬಳ್ಳಾರಿಯ ವಿಮ್ಸ್ ವೈದ್ಯರ ತಪಾಸಣೆಯ ನಂತರ ನಟ ದರ್ಶನ್‌ಗೆ ಬೆನ್ನು ಹುರಿಯಲ್ಲಿ ತೀವ್ರ ಸಮಸ್ಯೆ ಉಂಟಾಗಿದ್ದು, ಸಕಾಲಕ್ಕೆ ಚಿಕಿತ್ಸೆ ಕೊಡಿಸದಿದ್ದರೆ ಪ್ಯಾರಾಲಿಸಿಸ್, ಸ್ಟ್ರೋಕ್ ಹಾಗೂ ನಂಬ್ನೆಸ್ (ಮರಗಟ್ಟುವಿಕೆ) ಕಾಯಿಲೆ ಬರಬಹುದು ಎಂದು ವೈದ್ಯರು ಕೊಟ್ಟ ವರದಿಯನ್ನು ಆಧರಿಸಿ ಜಾಮೀನು ನೀಡಲಾಗಿದೆ. 

ಮಧ್ಯಂತರ ಜಾಮೀನು ಸಿಕ್ಕ ಬಳಿಕ ನಟ ದರ್ಶನ್‌ ಆಪ್ತರ ಒಳಮಾತು ಬಹಿರಂಗ!

ನಟ ದರ್ಶನ್ ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆಯೋದಕ್ಕೆ ಮಧ್ಯಂತರ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಲಾಯಿತು. ಇನ್ನು ಕೋರ್ಟ್‌ನಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸಲಹೆ ನೀಡಿದರೂ ನಿರಾಕರಣೆ ಮಾಡಲಾಗಿದ್ದು, ನಟ ದರ್ಶನ್ ಸೂಚಿಸಿದ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಕ್ಕೆ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಲಾಗಿತ್ತು.

ಹೈಕೋರ್ಟ್‌ನಿಂದ ಬುಧವಾರ ನಟ ದರ್ಶನ್‌ಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ಇನ್ನು ಪ್ರತಿ ವಾರವೂ ಚಿಕಿತ್ಸೆ ಪಡೆದಿರುವ ಬಗ್ಗೆ ಕೋರ್ಟ್‌ಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ. ಇನ್ನು ಮಧ್ಯಂತರ ಜಾಮೀನು ಮಂಜೂರು ಮಾಡಿದ ಬೆನ್ನಲ್ಲಿಯೇ, ಕೋರ್ಟ್‌ನಿಂದ 7 ಷರತ್ತುಗಳನ್ನು ವಿಧಿಸಲಾಗಿದೆ.

ನಟ ದರ್ಶನ್ ಮಧ್ಯಂತರ ಜಾಮೀನಿಗೆ ಕೊಟ್ಟ ಏಳು ಷರತ್ತುಗಳು: 

1. ಪಾಸ್ ಪೋರ್ಟ್ ಸರಂಡರ್
2. 2 ಲಕ್ಷ ರೂಪಾಯಿ ಬಾಂಡ್
3. ಇಬ್ಬರು ವ್ಯಕ್ತಿಗಳ ಶ್ಯೂರಿಟಿ
4. ಸಾಕ್ಷಿ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷ ಬೆದರಿಕೆ ಹಾಕಬಾರದು
5. ಒಂದು ವಾರದಲ್ಲಿ ವೈದ್ಯಕೀಯ ಶಿಫಾರಸು ವರದಿ ಸಲ್ಲಿಸ ಬೇಕು
6. ಸಾಕ್ಷಿ ನಾಶಕ್ಕೆ ಪ್ರಯತ್ನ ಮಾಡಬಾರದು
7. ಸಾಕ್ಷಿಗಳ ಸಂಪರ್ಕ ಮಾಡಬಾರದು
8. ಜಾಮೀನಿನ ದುರುಪಯೋಗ ಮಾಡಿಕೊಳ್ಳಬಾರದು

ಕಿಚ್ಚ ಸುದೀಪ್ 'ಬಿಗ್ ಬಾಸ್ ಬಿಡೋ ಸೀಕ್ರೆಟ್' ಬಿಚ್ಚಿಟ್ಟ ನಟ ಪ್ರಥಮ್, ಹೀಗೆಲ್ಲಾ ಇದ್ಯ ವಿಷ್ಯ?

ನಟ ದರ್ಶನ್‌ಗೆ ಕೋರ್ಟ್‌ನಿಂದ ಜಾಮೀನು ಮಂಜೂರು ಆಗುತ್ತಿದ್ದಂತೆಯೇ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಅವರು ಕಾಮಾಕ್ಯ ಶಕ್ತಿಪೀಠದ ಫೋಟೋವನ್ನು ಹಂಚಿಕೊಂಡು ಧನ್ಯವಾದವನ್ನು ಅರ್ಪಿಸಿದ್ದಾರೆ. ಡಿ ಬಾಸ್ ಅಭಿಮಾನಿಗಳು ಭಾರೀ ಸಂಭ್ರಮ ಅನುಭವಿಸುತ್ತಿದ್ದಾರೆ. 

click me!