ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್, KGF 2 ರಿಲೀಸ್ ಸುಳಿವು ಕೊಟ್ಟ ನಿರ್ದೇಶಕ

By Suvarna News  |  First Published Jul 6, 2021, 11:35 PM IST

* ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಗುಡ್ ನ್ಯೂಸ್ 

* ಕೆಜಿಎಫ್ ಚಾಪ್ಟರ್ 2 ಬಿಡುಗಡೆ ದಿನಾಂಕ ಶೀಘ್ರದಲ್ಲಿಯೇ ಅನೌನ್ಸ್ 

* ಹೊಸ ದಿನಾಂಕ ಅನೌನ್ಸ್ ಮಾಡುವುದಾಗಿ ತಿಳಿಸಿದ ತಂಡ 

* ಜುಲೈ  16 ಕ್ಕೆ ಸಿನಿಮಾ‌ ರಿಲೀಸ್ ಪ್ಲಾನ್ ಮಾಡಿದ್ದ ಟೀಂ 


ಬೆಂಗಳೂರು(ಜು.  06)  ಬಹುನಿರೀಕ್ಷಿತ ಕೆಜಿಎಫ್ ಸಿನಿಮಾ ತೆರೆಗೆ  ಯಾವಾಗ ಬರಲಿದೆ ಎನ್ನುವುದು ಎಲ್ಲರ ಮುಂದಿನ ಪ್ರಶ್ನೆ. ಈ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಸಂದೇಶವೊಂದನ್ನು ನೀಡಿದ್ದಾರೆ.

ಬೇರೆ ಚಿತ್ರರಂಗಗಳು ಕೂಡ ಒಮ್ಮೆ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ ಸೂಪರ್ ಹಿಟ್ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್' ಚಿತ್ರ ಸಿಕ್ವೇಲ್ ರಿಲೀಸ್ ಯಾವಾಗ ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ. ಈ ಕುರಿತು ಪ್ರಶಾಂತ್ ನೀಲ್ ಮಾಹಿತಿ ನೀಡಿದ್ದಾರೆ.

Tap to resize

Latest Videos

ಭಾರೀ ಮೊತ್ತಕ್ಕೆ ಕೆಜಿಎಫ್ ಹಾಡುಗಳು ಸೇಲ್

ಸೋಶಿಯಲ್ ಮೀಡಿಯಾ ಮೂಲಕ ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.   ಚಿತ್ರಮಂದಿರದಲ್ಲಿ ಗ್ಯಾಂಗ್‌ಸ್ಟರ್‌ಗಳು ತುಂಬಿದಾಗ ಮಾತ್ರ ಮಾನ್‌ಸ್ಟರ್ ಬರ್ತಾನೆ. ಆತ ಬರುವ ದಿನಾಂಕವನ್ನು ಶೀಘ್ರದಲ್ಲಿಯೇ ಘೋಷಣೆ ಮಾಡಲಾಗುತ್ತದೆ" ಎಂದು ನಿರ್ದೇಶಕ ಪ್ರಶಾಂತ್ ನೀಲ್  ತಿಳಿಸಿದ್ದಾರೆ. ಇದರ ಅರ್ಥ ರಾಕಿ ಭಾಯ್ ಪ್ರವೇಶ ಆಗಲಿದೆ ಎನ್ನುವುದು.

ಅನ್ ಲಾಕ್ ಗೆ ರಾಜ್ಯ  ಮತ್ತು ದೇಶ ತೆರೆದುಕೊಳ್ಳುತ್ತಿದೆ.  ಅನೇಕ ಚಿತ್ರಗಳು ಶೂಟಿಂಗ್ ಮುಗಿಸಿ ಬಿಡುಗಡೆಗಾಗಿ ಕಾದು ಕುಳಿತಿವೆ. ವಿಶ್ವಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದ್ದ ಕೆಜಿಎಫ್ ಮೇಲೆ ನಿರೀಕ್ಷೆ ಜೋರಾಗಿದೆ. 

click me!