ದೊಡ್ಡ ಪರದೆಗಿಂತಲೂ ಇದರಲ್ಲಿಯೇ ಸೂಪರ್ ಆಗಿ ಕಾಣಿಸುತ್ತೀರಾ ಎಂದು ನೆಟ್ಟಿಗರು ಆಶಾ ಭಟ್ ವಿಡಿಯೋಗಳಿಗೆ ಕಾಮೆಂಟ್ ಮಾಡುತ್ತಿದ್ದಾರೆ.
'ರಾಬರ್ಟ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮಾಡೆಲ್ ಆಶಾ ಭಟ್ ಇದೀಗ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ. ಫಾಲೋವರ್ಸ್ ಅನ್ನು ಮನೋರಂಜಿಸಲು ಡಿಫರೆಂಟ್ ಆಗಿರುವ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.
ಕೆಲವು ದಿನಗಳ ಹಿಂದೆ ಶ್ವೇತ ವರ್ಣದ ಲೆಹೆಂಗಾ ಧರಿಸಿ ಪುನೀತ್ ರಾಜ್‌ಕುಮಾರ್ ಯುವರತ್ನ ಚಿತ್ರದ 'ನೀನಾದೆ ನಾ' ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಾನ್ ಸ್ಟಾಪ್ ಸುತ್ತು ಹಾಕಿ ಲೆಹೆಂಗಾ ಡಿಸೈನ್ ತೋರಿಸಿದ್ದಾರೆ. ಮತ್ತೊಂದು ವಿಡಿಯೋದಲ್ಲಿ, 2021ರಲ್ಲಿ ನಾನು ಏನೆಲ್ಲಾ ಮಾಡಬೇಕು ಎಂದು ತೋರಿಸಿದ್ದಾರೆ. ಮೊದಲ ಆಯ್ಕೆ ಎಲ್ಲರ ಮೇಲೆ ಕೋಪ ಮಾಡಿಕೊಳ್ಳವುದು, ಎರಡನೇ ಆಯ್ಕೆ ತಲೆ ಬೋಳಿಸಿಕೊಳ್ಳುವುದು ಮತ್ತು ಮೂರನೇ ಆಯ್ಕೆ ಸಂತೋಷದಿಂದ ಇರುವುದು. 'ನಾನು ಲಾಸ್ಟ್ ಆಪ್ಶನ್ ಆಯ್ಕೆ ಮಾಡಿಕೊಳ್ಳುವೆ. ಇನ್‌ಸ್ಟಾಗ್ರಾಂ ಹೇಳುತ್ತಿರುವ ಹಾಗೆ ಖುಷಿಯಾಗಿರುವೆ,' ಎಂದು ಬರೆದುಕೊಂಡಿದ್ದಾರೆ.
undefined
ನಟಿ ಆಶಾ ಭಟ್ ಗಾಯನಕ್ಕೆ ಫ್ಯಾನ್ಸ್ ಫಿದಾ; ಪುನೀತ್ ರಾಜ್‌ಕುಮಾರ್‌ಗೆ ನಾಯಕಿ?
ರಾಬರ್ಟ್ ಚಿತ್ರದಲ್ಲಿ ಪಾತ್ರಕ್ಕೆ ಸೀಮಿತವಾಗ ಆ್ಯಕ್ಟಿಂಗ್ ಮಾಡಿದ್ದರು. ಆದರೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. ಬೇರೆ ಭಾಷೆಯಿಂದ ಆಫರ್‌ಗಳು ಬರುತ್ತಿದ್ದರೂ, ಕನ್ನಡವೇ ಆಯ್ಕೆ ಮಾಡಿಕೊಳ್ಳುತ್ತಿರುವ ಆಶಾ ಭಟ್‌ಗೆ ನಮ್ಮ ಬೆಂಬಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.