ದಿನಕ್ಕೆ 3 ಲೀಟರ್ ಕಷಾಯ; ನಟಿ ರುಕ್ಮಿಣಿ ವಸಂತ್ ಕುಟುಂಬ ಕೊರೋನಾ ಗೆದ್ದ ಕಥೆ!

By Suvarna NewsFirst Published Jul 6, 2021, 2:18 PM IST
Highlights

ಇಡೀ ಕುಟುಂಬಕ್ಕೆ ಕೊರೋನಾ ಸೋಂಕು ತಗುಲಿದಾಗ ನಟಿ ರುಕ್ಮಿಣಿ ವಸಂತ್ ಮಾಡಿದ್ದೇನು? ಅಜ್ಜಿ ಹೇಳಿದ ಮನೆ ಮದ್ದು ಸಹಾಯ ಮಾಡಿತ್ತಂತೆ!
 

'ಸಪ್ತ ಸಾಗರಾಚೆ ಎಲ್ಲೋ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ನಟಿ ರುಕ್ಮಿಣಿ ವಸಂತ್ ಇಡೀ ಕುಟುಂಬಕ್ಕೆ ಕೊರೋನಾ ಸೋಂಕು ತಗುಲಿತ್ತಂತೆ. ಈ ವಿಚಾರದ ಬಗ್ಗೆ ಖಾಸಗೀ ವೆಬ್‌ಸೈಟ್‌ವೊಂದಲ್ಲಿ ಮಾತನಾಡಿದ್ದಾರೆ. 

ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ನೀಡುತ್ತಿದ್ದಂತೆ ರುಕ್ಮಿಣಿ, ಹೆಮಂತ್ ರಾವ್ ಮತ್ತು ರಕ್ಷಿತ್ ಶೆಟ್ಟಿ ಜೊತೆ ಚಿತ್ರೀಕರಣ ಆರಂಭಿಸಿದ್ದಾರೆ. ಬಹಳ ದಿನಗಳ ನಂತರ ಮನೆಯಿಂದ ಹೊರ ಬರುವುದಕ್ಕೆ ಹೇಗೆ ಭಾಸವಾಗುತ್ತಿದೆ ಎಂಬುದನ್ನು ಹೇಳಿಕೊಂಡಿದ್ದಾರೆ.

'ನನಗೆ ಕೊರೋನಾ ಸೋಂಕಿನ ಸಣ್ಣ ಪುಟ್ಟ ಲಕ್ಷಣಗಳು ಕಾಣಿಸಿಕೊಂಡಿದ್ದವು. ನನ್ನ ಸಹೋದರಿಗೂ ಕೊರೋನಾ ತಗುಲಿ ಆರೋಗ್ಯ ಕೆಟ್ಟಿತ್ತು. ನನಗಿಂತ ಆಕೆ ಹೆಚ್ಚು ನೋವು ಅನುಭವಿಸಿದಳು. ನಾವಿಬ್ಬರೂ ಐಸೋಲೇಟ್ ಆಗಿದ್ದ ಸಮಯದಲ್ಲಿ ನನ್ನ 80 ವರ್ಷದ ಅಜ್ಜಿಗೆ ಕೊಮೊರ್ಬಿಡಿಟೀಸ್, ಅವರಿಗೂ ಕೊರೋನಾ ಪಾಸಿಟಿವ್ ಬಂತು. ನಾವು ಮೂವರು ಒಂದೇ ಕಡೆ ಐಸೋಲೇಟ್ ಆದೆವು. ನಮ್ಮನ್ನು ತಾಯಿ ನೋಡಿಕೊಳ್ಳುತ್ತಿದ್ದರು. ದಿನ ಕಳೆಯುತ್ತಿದ್ದಂತೆ, ನಮ್ಮಿಂದ ಅವರಿಗೂ ಪಾಸಿಟಿವ್ ಬಂತು. ಹೀಗಾಗಿ ನಾವು ನಾಲ್ಕೂ ಜನರೂ ಒಂದೇ ಕಡೆ ಐಸೋಲೇಟ್ ಆದ್ವಿ. ಯಾರು ಹೊರ ಹೋಗುತ್ತಿರಲಿಲ್ಲ, ಯಾರು ಬರುತ್ತಿರಲಿಲ್ಲ,' ಎಂದು ರಕ್ಮಿಣಿ ಮಾತನಾಡಿದ್ದಾರೆ. 

ರಕ್ಷಿತ್ ಶೆಟ್ಟಿ ನಾಯಕಿ ರುಕ್ಮಿಣಿ ವಸಂತ್ ಸೀರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದೇಕೆ? 

'ಈ ಸಮಯದಲ್ಲಿ ನಾವು ಎಲ್ಲಾ ನ್ಯೂಸ್‌ ಚಾನೆಲ್ಸ್ ಅನ್ನು ಆಫ್ ಮಾಡಿದೆವು. ಎಲ್ಲಿಂದಲೂ ಯಾವ ರೀತಿಯ ನೆಗೆಟಿವ್ ಮಾಹಿತಿಗಳು ನಮ್ಮನ್ನು ಮುಟ್ಟದಂತೆ ಮಾನಸಿಕವಾಗಿ ಸ್ಟ್ರಾಂಗ್ ಆದ್ವಿ. ದಿನಕ್ಕೆ ಮೂರು ಲೀಟರ್ ಕಷಾಯ ಮಾಡಿಕೊಂಡು ಸೇವಿಸುತ್ತಿದ್ದೆವು.  ಅಜ್ಜಿ ಹೇಳುತ್ತಿದ್ದರು ಮೆಣಸಿನ ಸಾರು ಮಾಡು, ಕಷಾಯ ಮಾಡು ಅಂತ. ಅದೇ ನಮ್ಮನ್ನು ಕಾಪಾಡಿತ್ತು. ಈ ಪ್ಯಾಂಡಮಿಕ್‌ನಲ್ಲಿ ಜೀವನ ಹೇಗೆ ನಡೆಸಬೇಕು ಎಂದು ಚೆನ್ನಾಗಿ ಅರ್ಥ ಮಾಡಿಕೊಂಡೆ,' ಎಂದಿದ್ದಾರೆ.

click me!