ಅವರು ಒಂದು ಸಿನಿಮಾ ಬಗ್ಗೆ ಮಾತಾಡುತ್ತಿದ್ದಾರೆ ಎಂದರೆ ಸಿನಿಮಾ ಚೆನ್ನಾಗಿದೆ, ಸೂಪರ್ ಆಗಿದೆ ಎಂದರ್ಥ. ಚರಣ್ ಕೂಡ ಸಿನಿಮಾ ಹೊಗಳುತ್ತಿದ್ದಾರೆ ಎಂದರೆ ಚೆನ್ನಾಗಿದೆ ಎಂದು ಅರ್ಥ. ಜಯಣ್ಣ ಕೂಡ ತುಂಬಾ ಹೊಗಳುತ್ತಿದ್ದರು. ಅಳು ಬಂತು ಎಂದರು.
ಗಟ್ಟಿ ಕಥೆಯೊತ್ತು ಪ್ರೇಕ್ಷಕರನ್ನು ಕಾಡುವುದಕ್ಕೆ 'ಸೋಮು' ಸನ್ನದ್ದನಾಗಿದ್ದಾನೆ. ಹಾಡುಗಳ ಮೂಲಕ ಆಮಂತ್ರಣ ಕೊಟ್ಟಿದ್ದ 'ಸೋಮು ಸೌಂಡ್ ಇಂಜಿನಿಯರ್' ತಂಡವೀಗ ಟ್ರೇಲರ್ ಮೂಲಕ ಸಿನಿರಸಿಕರನ್ನು ಒಂಟಿಗಾಲಿನಲ್ಲಿ ನಿಲ್ಲಿಸಿದೆ. ಶಿಷ್ಯನ ಹೊಸ ಪ್ರಯತ್ನಕ್ಕೆ ಸುಕ್ಕ ಸೂರಿ ಸಾಥ್ ಕೊಟ್ಟಿದ್ದು, ಡಾಲಿ ಧನಂಜಯ್ ಕೂಡ ಕೈ ಜೋಡಿಸಿದ್ದಾರೆ. ಬೆಂಗಳೂರಿನ SRV ಥಿಯೇಟರ್ ನಲ್ಲಿ 'ಸೋಮು ಸೌಂಡ್ ಇಂಜಿನಿಯರ್' ಟ್ರೇಲರ್ ಬಿಡುಗಡೆ ಮಾಡಲಾಯಿತು. ಸೂರಿ ಹಾಗೂ ಧನಂಜಯ್ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡದ ಶ್ರಮಕ್ಕೆ ಬೆನ್ನು ತಟ್ಟಿದರು.
ಬಳಿಕ ಮಾತನಾಡಿದ ನಿರ್ದೇಶಕ ಸುಕ್ಕ ಸೂರಿ, ಸಿನಿಮಾ ಕಾಡುತ್ತದೆ. ಅದು ಸತ್ಯ. ಸಿನಿಮಾದಲ್ಲಿ ತುಂಬಾ ವಿಷಯಗಳು ಇವೆ. ಆ ಪ್ರದೇಶದಿಂದ ಬರುವ ಸಿನಿಮಾಗಳು ನಮಗೆ ಬೇಕಿವೆ. ಸಿನಿಮಾದಿಂದ ಸಿನಿಮಾಗೆ ನಾವು ಬೇರೆ ರೀತಿಯ ಫಾರ್ಮೆಟ್ ಗೆ ಹೋಗುತ್ತಿದ್ದೇವೆ. ಶೂಟ್ ಮಾಡುವುದು ಒಂದೇ ರೀತಿ ಸಾಧ್ಯವಿಲ್ಲ. ಅದೊಂದು ಬೇರೆನೇ ಇರುತ್ತದೆ. ಟಗರು ಆಗುವುದಕ್ಕೂ ಮೊದ್ಲೇ ನನಗೆ ಅವನಲ್ಲಿ ಫ್ರೌಡಿಮೆ ನೋಡಿದೆ. ಇವನಿಗೆ ಅರ್ಥವಾಗುತ್ತಿದೆ ಎಂದಾಗ ಸಿನಿಮಾ ಮಾಡು ಎಂದೇ. ಆ ಭಾಷೆಯಲ್ಲಿ ಸಿನಿಮಾ ಮಾಡುತ್ತೇನೆ ಅದನ್ನು ಆಯ್ಕೆ ಮಾಡಿದ್ದು ಕೂಡ ಅವನೇ.
ಕಡ್ಡಿಪುಡಿ, ಟಗರು, ತಿಥಿ ಸಿನಿಮಾಗಳು ಹಾಗೇ ಒಂದು ಜಾಗಕ್ಕೆ ಹೋಗಿ ದುಡಿಸಿಕೊಳ್ಳುತ್ತವೆ. ಆ ರೀತಿ ಹುಡುಗರು ನುರಿತvರಾಗಿದ್ದಾರೆ. ಎಂಥ ಚಾಲೆಂಜ್ ಎಂದರೆ, ಜಾಕಿ ರೀ ರಿಲೀಸ್ ಆಗ್ತಿದೆ. ಅದರ ಜೊತೆಗೆ ಆರು ಸಿನಿಮಾ ಬರ್ತಿದೆ. ಎಲ್ಲವನ್ನೂ ನೋಡಿ ಯಾವುದೋ ಕ್ವಾಲಿಟಿ ಅನಿಸುತ್ತದೆಯೋ ಅದರ ಕಡೆ ಜೈ ಎನ್ನಿ ಎಂದರು. ಡಾಲಿ ಧನಂಜಯ್ ಮಾತನಾಡಿ, ಸೋಮು ಸೌಂಡ್ ಇಂಜಿನಿಯರ್ ದೊಡ್ಡದಾಗಿ ಸೌಂಡ್ ಮಾಡಲಿ ಎಂದು ಹಾರೈಸುತ್ತೇನೆ. ಸಿನಿಮಾ ಚೆನ್ನಾಗಿದೆ ಅಂತ ನಂಬಲು ಸೂರಿ ಸರ್ ಎಲ್ಲಾ ಕಡೆ ಬರೋದಿಲ್ಲ. ಎಲ್ಲಾ ಸಿನಿಮಾ ಮಾತಾಡಲ್ಲ. ಜೊತೆಗಿದ್ದವರೆ ಮಾಡಿರಲಿ. ಯಾರೇ ಮಾಡಿರಲಿ.
ನಾಗರಹಾವು ಚಿತ್ರಕ್ಕೆ ವಿಷ್ಣುವರ್ಧನ್ ಆಯ್ಕೆಯಾಗಿದ್ದು ಹೇಗೆ, ಯಾಕೆ? ಪುಟ್ಟಣ್ಣ ಕಣಗಾಲ್ ಅಂದು ಹೇಳಿದ್ದೇನು?
ಅವರು ಒಂದು ಸಿನಿಮಾ ಬಗ್ಗೆ ಮಾತಾಡುತ್ತಿದ್ದಾರೆ ಎಂದರೆ ಸಿನಿಮಾ ಚೆನ್ನಾಗಿದೆ, ಸೂಪರ್ ಆಗಿದೆ ಎಂದರ್ಥ. ಚರಣ್ ಕೂಡ ಸಿನಿಮಾ ಹೊಗಳುತ್ತಿದ್ದಾರೆ ಎಂದರೆ ಚೆನ್ನಾಗಿದೆ ಎಂದು ಅರ್ಥ. ಜಯಣ್ಣ ಕೂಡ ತುಂಬಾ ಹೊಗಳುತ್ತಿದ್ದರು. ಅಳು ಬಂತು ಎಂದರು. ನಾನು ಅಭಿ ಜೊತೆ ಟಗರು, ಸಲಗ, ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರ ಕೆಲಸದ ಬಗ್ಗೆ ನನಗೆ ಗೊತ್ತು. ಮಾರ್ಚ್ 15ಕ್ಕೆ ಸಿನಿಮಾ ತೆರೆಗೆ ಬರ್ತಿದೆ. ಪ್ರತಿಯೊಬ್ಬರು ಸಪೋರ್ಟ್ ಮಾಡಿ' ಎಂದರು.
ನಿರ್ದೇಶಕ ಅಭಿ ಮಾತನಾಡಿ, ಈ ಸಿನಿಮಾ ಶುರುವಾಗಿದ್ದು, ನನ್ನ ಗುರುಗಳು ಹೇಳಿದ ಮಾತಿನಿಂದ. ನಿಮ್ಮ ಭಾಷೆ, ನೀನು ಅಲ್ಲೇ ಬೆಳೆದಿದ್ದೀಯಾ? ಅಲ್ಲಿ ಸಿನಿಮಾ ಮಾಡು ಅಭಿ ಎಂದರು. ಸ್ಕ್ರೀಪ್ಟ್ ಮುಗಿದ ಮೇಲೆ ಸರ್ ಗೆ ಕೊಟ್ಟೆ. ಸರ್ ಇದನ್ನು ಅಪ್ಲೈ ಮಾಡಿಕೊಂಡು ಬಾ ಎಂದರು. ಮುಗಿದ ಆದ ಮೇಲೆ ಸರ್ ಗೆ ತೋರಿಸಿದೆ. ನನಗೆ ಖುಷಿ ಆಯ್ತು. ನನಗೆ ಸರ್ ಗೆ ತೋರಿಸುವವರೆ ಭಯ ಇತ್ತು. ಇಡೀ ನನ್ನ ತಂಡಕ್ಕೆ ಧನ್ಯವಾದ ಎಂದರು.
ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಜನ್ಮದಿನ; ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ
ನಾಯಕ ಶ್ರೇಷ್ಠ ಮಾತನಾಡಿ, ಸೂರಿ ಸರ್, ಧನಂಜಯ್ ಸರ್ ಗೆ ಧನ್ಯವಾದ. ಅವಕಾಶ ಕೊಟ್ಟ ಎಲ್ಲರಿಗೂ ಧನ್ಯವಾದ. ಇಡೀ ತಂಡ ಒಳ್ಳೆ ಕೆಲಸ ಮಾಡಿದ್ದಾರೆ. ಸೋಮು ಎಂಬ ಪಾತ್ರದಲ್ಲಿ ನಟಿಸಿದ್ದೇನೆ. ದುರಂಕಾರದಲ್ಲಿ ಮೆರೆಯುತ್ತಿರುವ ಹುಡುಗನ ಲೈಫ್ ನಲ್ಲಿ ಏನಾಗುತ್ತದೆ ಅನ್ನೋದೇ ಸಿನಿಮಾ ಎಂದರು. ಸೋಮು ಸೌಂಡ್ ಇಂಜಿನಿಯರ್ ಸಿನಿಮಾ ಇಷ್ಟರ ಮಟ್ಟಿಗೆ ಟಾಕ್ ಆಗುವುದಕ್ಕೆ ಕಾರಣ ಅಭಿ..ಸೂರಿ ಗರಿಡಯಲ್ಲಿ ಪಳಗಿರುವ ಅಭಿ ತಮ್ಮ 9 ವರ್ಷದ ಶ್ರಮವನ್ನು ಹಾಕಿ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೆಜ್ಜೆ ಇಟ್ಟಿದ್ದಾರೆ. ಅಭಿ ಹೊರತಾಗಿ ಸಲಗ, ಟಗರು ತಂತ್ರಜ್ಞನರು ದುಡಿದಿರುವ ಚಿತ್ರ ಇದಾಗಿದೆ.
ಸಲ್ಮಾನ್ ಖಾನ್ ಅಳಿಯ, ಕಾಂಗ್ರೆಸ್ ಧುರೀಣರ ಮೊಮ್ಮಗನಾಗಿದ್ದೂ ಬಾಲಿವುಡ್‌ನಲ್ಲಿ ಚಾನ್ಸ್ ಗಗನಕುಸುಮ!
ಚರಣ್ ರಾಜ್ ಚಿತ್ರಕ್ಕೆ ಸಂಗೀತ ನೀಡಿದ್ದರೆ, ಧನಂಜಯ ರಂಜನ್, ನಾಗಾರ್ಜುನ ಶರ್ಮಾ, ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ಮಾಸ್ತಿ ಜೊತೆಗೂಡಿ ಅಭಿ ಸಂಭಾಷಣೆ ಬರೆದಿದ್ದಾರೆ. ದೀಪು ಎಸ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಸಲಗ ಹಾಗೂ ಭೀಮ ಖ್ಯಾತಿಯ ಶಿವಸೇನಾ ತಮ್ಮ ಕ್ಯಾಮರಾದಲ್ಲಿ ಚಿತ್ರವನ್ನ ಸೆರೆ ಹಿಡಿದಿದ್ದಾರೆ. 'ಸೋಮು ಸೌಂಡ್ ಇಂಜಿನಿಯರ್' ಸಿನಿಮಾದಲ್ಲಿ 'ಸಲಗ' ಸಿನಿಮಾದಲ್ಲಿ ನಟಿಸಿದ ಕೆಂಡ ಖ್ಯಾತಿಯ ಶ್ರೇಷ್ಠ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೇ ಶ್ರೇಷ್ಠಗೆ ನಾಯಕಿಯಾಗಿ ಶೃತಿ ಪಾಟೀಲ್ ನಟಿಸಿದ್ದಾರೆ. ಹಾಗೇ ಜಹಾಂಗೀರ್, ಅಪೂರ್ವ,ಯಶ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೊಸಬರ ಕನಸನ್ನ ಸಾಕಾರಗೊಳಿಸುವ ನಿಟ್ಟಿನಲ್ಲಿ ನಿರ್ಮಾಪಕರಾಗಿ ಕ್ರಿಸ್ಟೋಫರ್ ಕಿಣಿ ಚಿತ್ರಕ್ಕೆ ಶಕ್ತಿಯಾಗಿ ನಿಂತಿದ್ದಾರೆ. ಗಟ್ಟಿ ಕಥೆ ಹೊತ್ತು ಸೋಮು ಮಾ.15ಕ್ಕೆ ಥಿಯೇಟರ್ ನಲ್ಲಿ ಹಾಜರಿ ಹಾಕಲಿದ್ದಾನೆ.